ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿ ವಿಫಲಕ್ಕೆ ಯತ್ನಿಸುತ್ತಿರುವ ಬಿಜೆಪಿಗೆ ಜನರಿಂದಲೇ ತಕ್ಕ ಪಾಠ: ನಂಜಯ್ಯನಮಠ

Published : Jul 01, 2023, 01:51 PM IST
ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿ ವಿಫಲಕ್ಕೆ ಯತ್ನಿಸುತ್ತಿರುವ ಬಿಜೆಪಿಗೆ ಜನರಿಂದಲೇ ತಕ್ಕ ಪಾಠ: ನಂಜಯ್ಯನಮಠ

ಸಾರಾಂಶ

ಬಡವರಿಗೆ ಅಕ್ಕಿ ಬದಲಾಗಿ ದುಡ್ಡು ನೀಡಲು ಮುಂದಾಗಿರುವ ಸರ್ಕಾರದ ಕ್ರಮದಿಂದ ಅವರ ಇನ್ನಿತರ ಅಗತ್ಯ ವಸ್ತುಗಳ ಖರೀದಿಗೆ ಬಹುದೊಡ್ಡ ನೆರವಾಗಲಿದೆ. ಇದೇ ಯೋಜನೆಯನ್ನು ಸರ್ಕಾರ ಮುಂದುವರೆಸುಬೇಕು ಎಂದು ಮನವಿ ಮಾಡಿದ ಎಸ್‌.ಜಿ.ನಂಜಯ್ಯನಮಠ 

ಬಾಗಲಕೋಟೆ(ಜು.01):  ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿಗಳನ್ನು ವಿಫಲಗೊಳಿಸಲು ಮುಂದಾಗಿರುವ ಬಿಜೆಪಿಗೆ ಜನತೆ ತಕ್ಕ ಪಾಠ ಕಲಿಸಲಿದ್ದು, ಐದು ಕೆಜಿ ಅಕ್ಕಿ ಬದಲಾಗಿ ಹಣವನ್ನು ನೀಡಲು ಮುಂದಾಗಿರುವ ಸರ್ಕಾರದ ನಿರ್ಧಾರ ಅತ್ಯಂತ ಸಮಯೋಚಿತ ಮತ್ತು ಬಡವರಿಗೆ ಉಪಯೋಗವಾಗುವಂತಹದ್ದು ಎಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಎಸ್‌.ಜಿ.ನಂಜಯ್ಯನಮಠ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರಗೊಂದಿಗೆ ಮಾತನಾಡಿದ ಅವರು, ಬಡವರಿಗೆ ಅಕ್ಕಿ ಬದಲಾಗಿ ದುಡ್ಡು ನೀಡಲು ಮುಂದಾಗಿರುವ ಸರ್ಕಾರದ ಕ್ರಮದಿಂದ ಅವರ ಇನ್ನಿತರ ಅಗತ್ಯ ವಸ್ತುಗಳ ಖರೀದಿಗೆ ಬಹುದೊಡ್ಡ ನೆರವಾಗಲಿದೆ. ಇದೇ ಯೋಜನೆಯನ್ನು ಸರ್ಕಾರ ಮುಂದುವರೆಸುಬೇಕು ಎಂದು ಮನವಿ ಮಾಡಿದರು.

ಬಡವರಿಗೆ, ಪದವೀಧರರಿಗೆ, ಮನೆ ಯಜಮಾನಿಗೆ ಸರ್ಕಾರದ ಮೋಸ: ಈಶ್ವರಪ್ಪ ಆಕ್ರೋಶ

ಕೇಂದ್ರ ಸರ್ಕಾರ ಬಡವರ ಅಕ್ಕಿ ವಿಷಯದಲ್ಲಿಯೂ ಅಸಹಕಾರ ತೋರುತ್ತಿರುವುದು ನಿಜಕ್ಕೂ ದುರದೃಷ್ಟಕರ. ಇಂತಹ ವಿಷಯದಲ್ಲಿ ರಾಜಕಾರಣ ಮಾಡಲು ಹೊರಟರೆ ಬರುವ ದಿನಗಳಲ್ಲಿ ಜನತೆ ಬಿಜೆಪಿಗೆ ಮತ್ತಷ್ಟುಪಾಠ ಕಲಿಸಲಿದ್ದಾರೆ ಎಂದರು.

ಕಾಳ ಸಂತೆ ಮಾರಾಟ ನಿಲ್ಲಲಿ:

ಶಾಸಕ ಜೆ.ಟಿ.ಪಾಟೀಲ ಮಾತನಾಡಿ, ಸದ್ಯ ರಾಜ್ಯದಲ್ಲಿ ಆಕ್ರಮ ಅಕ್ಕಿ ಸಾಗಾಟ ಹಾಗೂ ಮಾರಾಟ ಪ್ರಕರಣಗಳು ನಡೆಯುತ್ತಿವೆ. ಜಿಲ್ಲಾಡಳಿತ ಹಾಗೂ ಸರ್ಕಾರ ಅಕ್ರಮವಾಗಿ ಕಾಳಸಂತೆಯಲ್ಲಿ ಮಾರಾಟವಾಗುವ ವ್ಯವಹಾರವನ್ನು ನಿಲ್ಲಿಸಬೇಕು ಎಂದು ಮನವಿ ಮಾಡಿದರು. ಅಲ್ಲದೆ, ಕೇಂದ್ರ ಸರ್ಕಾರ ಆಹಾರ ಭದ್ರತೆ ಕಾಯ್ದೆಯಡಿ ನೀಡಲಾಗುವ 5 ಕೆಜಿ ಅಕ್ಕಿಯನ್ನು ನೀಡುತ್ತಿದೆ ವಿನಃ ತನ್ನ ಪಾತ್ರ ಏನೂ ಇಲ್ಲ. ಈ ಹಿಂದೆ ಮನಮೋಹನ ಸಿಂಗ್‌ ಸರ್ಕಾರ ಜಾರಿಗೆ ತಂದ ಯೋಜನೆಯಂತೆ ಉಚಿತವಾಗಿ ಐದು ಕೆಜಿ ಅಕ್ಕಿಯನ್ನು ನೀಡುವ ಪರಿಪಾಠ ಮುಂದುವರೆದಿದೆ. ಇದನ್ನು ಬಿಜೆಪಿಗರು ಅರ್ಥ ಮಾಡಿಕೊಳ್ಳಲಿ ಎಂದು ಹೇಳಿದರು.

ಕಾಂಗ್ರೆಸ್‌ ಸರ್ಕಾರದ ಜನಪ್ರಿಯ ಗ್ಯಾರಂಟಿಗಳು ಹಂತಹಂತವಾಗಿ ಅನುಷ್ಠಾನಗೊಳ್ಳುತ್ತಿರುವುದರಿಂದ ಬಿಜೆಪಿಗರಿಗೆ ನಡುಕು ಉಂಟಾಗಿದೆ. ಬರುವ ಜಿಲ್ಲಾ ಪಂಚಾಯತ್‌ ಹಾಗೂ ಲೋಕಸಭೆಯಲ್ಲಿ ಸೋಲುವ ಭೀತಿ ಈಗಿನಿಂದಲಯ ಆರಂಭಗೊಂಡಿದೆ. ಹೀಗಾಗಿ ಈ ಯೋಜನೆಗಳ ವಿಫಲತೆಗೆ ಮುಂದಾಗಿದ್ದಾರೆಂದು ದೂರಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಂಸದ ಭೀಮ್ ಆರ್ಮಿ ಸಹ ಸಂಸ್ಥಾಪಕ ಚಂದ್ರಶೇಖರ್ ಅಜಾದ್ ವಿರುದ್ಧ ಮಾಜಿ ಗರ್ಲ್‌ಫ್ರೆಂಡ್ ಬಾಂಬ್
ಜನರೊಂದಿಗೆ ಸಂಪರ್ಕ ಸಾಧಿಸಿ, ಸೋಶಿಯಲ್ ಮೀಡಿಯಾ ಬಳಸಿ: ಸಂಸದರಿಗೆ ಮೋದಿ ಕರೆ