ಬಿಜೆಪಿ ಸರ್ಕಾರ ಪತನಗೊಳಿಸಿ ಕಾಂಗ್ರೆಸ್‌ ಅಧಿಕಾರಕ್ಕೆ ತನ್ನಿ: ಸತೀಶ್‌ ಜಾರಕಿಹೊಳಿ

By Kannadaprabha News  |  First Published Apr 1, 2023, 8:42 PM IST

ದಿನಬಳಕೆ ವಸ್ತುಗಳ ಬೆಲೆ ಏರಿಕೆಯಿಂದಾಗಿ ಬಡವರ ಬದುಕು ದುಸ್ತರವಾಗಿದೆ. ಕೇಂದ್ರದ ಮೋದಿ ಹಾಗೂ ರಾಜ್ಯದ ಬಸವರಾಜ ಬೊಮ್ಮಾಯಿ ಸರ್ಕಾರಗಳ ಆಡಳಿತ ಪತನಗೊಳಿಸಲು ರಾಜ್ಯದ ಮತದಾರರು ಕಾಂಗ್ರೆಸ್‌ ಅನ್ನು ಅಧಿಕಾರಕ್ಕೆ ತರಬೇಕು ಎಂದು ಕೆಪಿಸಿಸಿ ಕಾರ್ಯಧ್ಯಕ್ಷ ಸತೀಶ್‌ ಜಾರಕಿಹೊಳಿ ತಿಳಿಸಿದರು. 
 


ಮಳವಳ್ಳಿ (ಏ.01): ದಿನಬಳಕೆ ವಸ್ತುಗಳ ಬೆಲೆ ಏರಿಕೆಯಿಂದಾಗಿ ಬಡವರ ಬದುಕು ದುಸ್ತರವಾಗಿದೆ. ಕೇಂದ್ರದ ಮೋದಿ ಹಾಗೂ ರಾಜ್ಯದ ಬಸವರಾಜ ಬೊಮ್ಮಾಯಿ ಸರ್ಕಾರಗಳ ಆಡಳಿತ ಪತನಗೊಳಿಸಲು ರಾಜ್ಯದ ಮತದಾರರು ಕಾಂಗ್ರೆಸ್‌ ಅನ್ನು ಅಧಿಕಾರಕ್ಕೆ ತರಬೇಕು ಎಂದು ಕೆಪಿಸಿಸಿ ಕಾರ್ಯಧ್ಯಕ್ಷ ಸತೀಶ್‌ ಜಾರಕಿಹೊಳಿ ತಿಳಿಸಿದರು. ಪಟ್ಟಣದ ಟಿಎಪಿಸಿಎಂಎಸ್‌ ಮುಂಭಾಗದ ಆವರಣದಲ್ಲಿ ಕಾಂಗ್ರೆಸ್‌ನಿಂದ ನಡೆದ ಹಿಂದುಳಿದ ವರ್ಗದ ಸಮಾವೇಶ ಉದ್ಘಾಟಿಸಿ ಮಾತನಾಡಿ, ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಸಾಯನಿಕ ಗೊಬ್ಬರ, ಗ್ಯಾಸ್‌ ಸಿಲಿಂಡರ್‌ ಸೇರಿದಂತೆ ಎಲ್ಲಾ ವಸ್ತುಗಳ ಬೆಲೆ ಏರಿಕೆಯಾಗಿದೆ ಎಂದು ಕಿಡಿಕಾರಿದರು.

ಕುಡಿಯುವ ನೀರಿಗೆ ಮೀಟರ್‌ ಅಳವಡಿಕೆ, ಆಧಾರ್‌ ಲಿಂಕ್‌ಗೆ ಒಂದು ಸಾವಿರ ರು. ಪಾವತಿಸುವ ಅನಿವಾರ್ಯತೆ ಬಂದಿದೆ. ಇಂತಹ ಸರ್ಕಾರವನ್ನು ಕಿತ್ತೊಗೆದು ಶೋಷಿತ ಸಮಾಜವನ್ನು ಗುರುತಿಸಿ ರಾಜಕೀಯ, ಉದ್ಯೋಗ, ನೀರಾವರಿಯಂತಹ ಯೋಜನೆ ಜಾರಿಗೊಳಿಸಿ ಸರ್ವರಿಗೂ ಸಮಾನತೆ ಹಾಗೂ ಸಾಮಾಜಿಕ ನ್ಯಾಯ ಕಲ್ಪಿಸಿರುವ ಕಾಂಗ್ರೆಸ್‌ ಅನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು. ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸರ್ವ ಸಮುದಾಯದ ಏಳಿಗೆಗೆ ಹಲವು ಯೋಜನೆ ಜಾರಿಗೆ ತಂದಿತು. ಕಾಂಗ್ರೆಸ್‌ ಆಳ್ವಿಕೆಯಲ್ಲಿ ಸ್ಥಾಪಿಸಿದ ಸಾರ್ವಜನಿಕ ಉದ್ದಿಮೆಗಳನ್ನು ಮೋದಿ ಸರ್ಕಾರ ಖಾಸಗೀಕರಣ ಮಾಡಿದೆ. ಗಂಗಾಮತಸ್ಥ ಜನಾಂಗವನ್ನು ಎಸ್‌ಟಿಗೆ ಸೇರಿಸುವ ಕುರಿತು ಪಕ್ಷ ಅಧಿಕಾರಕ್ಕೆ ಬಂದ ಬಳಿಕ ಜನಾಂಗದ ಶ್ರೀಗಳ ಜೊತೆ ಚರ್ಚಿಸಿ ಅನ್ಯಾಯ ಸರಿಪಡಿಸಲು ಮುಂದಾಗುತ್ತೇನೆ ಎಂದು ಭರವಸೆ ನೀಡಿದರು.

Tap to resize

Latest Videos

ಎಚ್‌.ಡಿ.ಕುಮಾರಸ್ವಾಮಿ ಮತ್ತೊಮ್ಮೆ ಸಿಎಂ ಖಚಿತ: ಶಾಸಕ ಸಿ.ಎಸ್‌.ಪುಟ್ಟರಾಜು

ಕಾಂಗ್ರೆಸ್‌ ಅಭ್ಯರ್ಥಿ ಪಿ.ಎಂ. ನರೇಂದ್ರಸ್ವಾಮಿ ಗೆಲುವಿನಿಂದ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದೆ. ಕಳೆದ 5 ವರ್ಷಗಳ ಅಭಿವೃದ್ಧಿಯನ್ನು ವಿಮರ್ಶೆ ಮಾಡಿ ಕಾಂಗ್ರೆಸ್‌ ಬೆಂಬಲಿಸಬೇಕು, ಗಂಗಾಮತಸ್ಥ ಸಮುದಾಯದ ಏಳಿಗೆಗೆ ಶ್ರಮಿಸುತ್ತಿರುವ ನರೇಂದ್ರಸ್ವಾಮಿ ಅವರಿಗೆ ರಾಜಕೀಯ ಶಕ್ತಿ ತುಂಬಬೇಕು ಎಂದು ಮನವಿ ಮಾಡಿದರು. ಕೆಪಿಸಿಸಿ ಉಪಾಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ಮಾತನಾಡಿ, ಕಳೆದ 5 ವರ್ಷಗಳ ಅವಧಿಯಲ್ಲಿ ತಾಲೂಕಿನ ಆಡಳಿತ ದಿಕ್ಕು ತಪ್ಪುವ ಜೊತೆಗೆ ಅಭಿವೃದ್ಧಿ ಎಂಬುವುದು ಮರಿಚಿಕೆಯಾಗಿದೆ. ಸುಳ್ಳೇ ಆಡಳಿತಗಾರರ ಮನೆದೇವರಾಗಿದೆ. ಸಂಕಷ್ಟದಲ್ಲಿರುವ, ಶೋಷಿತರ ಬದುಕು ದುಸ್ಸರವಾಗಿದೆ. ಇದನ್ನು ಮೆಟ್ಟಿಜನಸಾಮಾನ್ಯರಿಗೆ ನ್ಯಾಯ ಒದಗಿಸಲು ಕಾಂಗ್ರೆಸ್‌ ಬೆಂಬಲಿಸಬೇಕು ಎಂದು ಕೋರಿದರು.

ಪಟ್ಟಣದ ಶಾಂತಿ ಕಾಲೇಜು ಮುಂಭಾಗದ 33.5 ಎಕರೆ ಜಮೀನಿನ 1130 ನಿವೇಶನಗಳ ಹಂಚಿಕೆಗೆ ಆಗತ್ಯ ಕ್ರಮ ಕೈಗೊಳ್ಳಲಾಗಿತ್ತು. ಹಾಲಿ ಶಾಸಕರು ಭೂ ಮಾಲೀಕರೊಬ್ಬರಿಂದ ತಡೆಯಾಜ್ಞೆತಂದು ನಿವೇಶನ ಹಂಚಿಕೆಗೆ ಅಡ್ಡಿ ಪಡಿಸಿದರು. ಆದರೆ, ಕಳೆದ ಐದು ವರ್ಷಗಳ ಅವಧಿಯಲ್ಲಿ ತಡೆಯಾಜ್ಞೆ ತೆರವುಗೊಳಿಸಿ ಏಕೆ ನಿವೇಶನ ಹಂಚಿಲ್ಲ ಎಂದು ಪ್ರಶ್ನಿಸಿದರು. ಕಾಂಗ್ರೆಸ್‌ ಸೇರ್ಪಡೆಗೊಂಡ ಪುರಸಭೆ ಮಾಜಿ ಅಧ್ಯಕ್ಷ ದೊಡ್ಡಯ್ಯ ಮಾತನಾಡಿ, ಮಳವಳ್ಳಿ ಶಾಸಕ ಡಾ.ಅನ್ನದಾನಿ ಕೆಲಸ ಮಾಡುವ ಎತ್ತುಗಳಿಗೆ ಹುಲ್ಲು ಹಾಕುವುದಿಲ್ಲ ಎಂಬ ನಾಣ್ಣುಡಿಗೆ ಒತ್ತು ನೀಡಿ ನನ್ನನ್ನು ಬಡಕಲು ಮಾಡಿದ್ದಾರೆ. ನನ್ನ ಕುಟುಂಬಕ್ಕೆ ಒಂದು ಜವಾನ ಹುದ್ದೆ ಕರುಣಿಸಿಲ್ಲ. ನನ್ನ ಸಮಾಜದ ವಿಳ್ಯೆದೆಲೆ ಬೆಳೆಗಾರರ ಸಂಕಷ್ಟಆಲಿಸಲು ಮುಂದಾಗಲಿಲ್ಲ ಎಂದು ದೂರಿದರು.

ಕ್ಷೇತ್ರದ 45 ಹಳ್ಳಿಗಳಲ್ಲಿ ಗಂಗಾಮತಸ್ಥ ಜನಾಂಗದ ಜನರಿದ್ದಾರೆ. ಅವರ ಅಭ್ಯುದಯಕ್ಕೆ ಯಾವುದೇ ಕಾರ್ಯಕ್ರಮ ರೂಪಿಸಲ್ಲಿಲ್ಲ. ಅದರಿಂದ ಬೇಸತ್ತು ಸುದೀರ್ಘ ಒಡನಾಟದ ಜೆಡಿಎಸ್‌ ಪಕ್ಷವನ್ನು ತೊರೆದು ತಾಲೂಕಿನ ಅಭಿವೃದ್ಧಿ ದೂರದೃಷ್ಟಿಹಾಗೂ ಸಮಾನತೆ ಸಿದ್ಧಾಂತವನ್ನು ಆಡಳಿತದಲ್ಲಿ ಜಾರಿಗೊಳಿಸಿರುವ ನರೇಂದ್ರಸ್ವಾಮಿ ನಾಯಕತ್ವದಲ್ಲಿ ಒಪ್ಪಿ ಕಾಂಗ್ರೆಸ್‌ ಸೇರುತ್ತಿರುವುದಾಗಿ ತಿಳಿಸಿದರು. ಇದೇ ವೇಳೆ ಸತೀಶ್‌ ಜಾರಕಿಹೊಳಿ ಹಾಗೂ ನರೇಂದ್ರಸ್ವಾಮಿ ಅವರನ್ನು ಅಭಿನಂದಿಸಿ ಗೌರವಿಸಲಾಯಿತು. 

ಎಚ್ಡಿಕೆಯಿಂದ ಒಕ್ಕಲಿಗ ನಾಯಕರ ತುಳಿಯುವ ಕೆಲಸ: ಎಲ್‌.ಆರ್‌.ಶಿವರಾಮೇಗೌಡ

ಸಮಾವೇಶದಲ್ಲಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಸಿ.ಡಿ ಗಂಗಾಧರ್‌, ಪುರಸಭೆ ಸದಸ್ಯ ಎಂ.ಎನ್‌.ಶಿವಸ್ವಾಮಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ದೇವರಾಜು, ರಾಜ್ಯ ಕಾಂಗ್ರೆಸ್‌ ಹಿಂದುಳಿದ ವರ್ಗಗಳ ಅಧ್ಯಕ್ಷ ಬಾಲಯ್ಯ, ಮುಖಂಡರಾದ ಹೊನ್ನನಾಯಕ, ಬಸವಣ್ಣ, ಮಹದೇವು, ಯಶೋಧಮ್ಮ, ಮಾದನಾಯಕ, ಗಂಗರಾಜೇಆರಸ್‌, ಪ್ರಕಾಶ್‌, ಶಿವರಾಜ ಸೇರಿದಂತೆ ಇತರರಿದ್ದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

click me!