'ವೀರಶೈವ-ಲಿಂಗಾಯತ ನಿಗಮ‌ ಸ್ಥಾಪನೆ ನಾನು ಸ್ವಾಗತ ಮಾಡಲ್ಲ'

By Suvarna News  |  First Published Nov 17, 2020, 2:30 PM IST

ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ವೀರಶೈವ-ಲಿಂಗಾಯತ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಗ್ರೀನ್​ ಸಿಗ್ನಲ್​​ ನೀಡಿದ್ದಾರೆ.  ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ಎಂ.ಬಿ ಪಾಟೀಲ್ ಪ್ರತಿಕ್ರಿಯಿಸಿದ್ದು ಹೀಗೆ...


ಬೆಂಗಳೂರು, (ನ.17): ವೀರಶೈವ-ಲಿಂಗಾಯತ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿರುವುದಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್​ ನಾಯಕ ಹಾಗೂ ಮಾಜಿ ಸಚಿವ ಎಂ.ಬಿ ಪಾಟೀಲ್​​, ನಿಗಮ‌ ಸ್ಥಾಪನೆ ನಾನು ಸ್ವಾಗತ ಮಾಡಲ್ಲ. ಇದು ರಾಜಕೀಯ ತಿರ್ಮಾನ ಅಲ್ಲ. ಕಣ್ಸೊರೆಸುವ ತಂತ್ರ ಅಲ್ಲ ಅಂದ್ರೆ ದೊಡ್ಡ ಮೊತ್ತ ಕೊಡಲಿ ಎಂದು ಕಾಂಗ್ರೆಸ್​ ನಾಯಕ ಹಾಗೂ ಮಾಜಿ ಸಚಿವ ಎಂ.ಬಿ ಪಾಟೀಲ್ ಆಗ್ರಹಿಸಿದರು.

 ವೀರಶೈವ-ಲಿಂಗಾಯತ ಅಭಿವೃದ್ಧಿ ಪ್ರಾಧಿಕಾರ ಮಾಡಿದ್ದಾರೆ. ಆದ್ರೆ, ಹೀಗೆ ರಚನೆ ಮಾಡಿ 100, 200, 500 ಕೋಟಿ ಕೊಟ್ಟರೆ ಯಾವುದಕ್ಕೂ ಸಾಲೋದಿಲ್ಲ ಎಂದರು.

Tap to resize

Latest Videos

ಸರ್ಕಾರದ ಮುಂದೆ ಮಾಜಿ ಸಚಿವ ಎಂಬಿ ಪಾಟೀಲ್ ಇಟ್ಟ ಮಹಾರಾಷ್ಟ್ರ ಮಾದರಿ ಬೇಡಿಕೆ

ಅಲ್ಲದೇ ಕನಿಷ್ಠ 5 ಸಾವಿರ ಕೋಟಿ ರೂಪಾಯಿಗೂ ಅಧಿಕ ಹಣವನ್ನು ಬಿಡುಗಡೆ ಮಾಡಿದರೆ ನಮ್ಮ ಸಮುದಾಯಕ್ಕ ಉಪಯೋಗವಾಗುತ್ತೆ.  ಆಗ ನಾನು ಈ ನಿರ್ಧಾರವನ್ನು ಸ್ವಾಗತಿಸುತ್ತೇನೆ ಎಂದು ಹೇಳಿದರು.

ಮಹಾರಾಷ್ಟ್ರ ಮಾದರಿಯಲ್ಲಿ ಲಿಂಗಾಯತರಿಗೆ 16% ಮೀಸಲಾತಿ ಬೇಕು. ಲಿಂಗಾಯತ ನಿಗಮ ಮಾಡಿದ್ರೆ ಪ್ರಯೋಜನ ಆಗಲ್ಲ. 1000 ಕೋಟಿ  ರೂಪಾಯಿ ಕೊಟ್ಟರೂ ಪ್ರಯೋಜನ ಆಗಲ್ಲ. 4 ರಿಂದ 5 ಸಾವಿರ ಕೋಟಿ ರೂ ಕೊಡಲಿ. ನಾನೇ ಸಿಎಂ ಯಡಿಯೂರಪ್ಪ ಅವರನ್ನು ಗೌರವಿಸುತ್ತೇನೆ ಇದು ಕಾಂಗ್ರೆಸ್ ಅಭಿಪ್ರಾಯ ಅಲ್ಲ ಎಂದು ಸ್ಪಷ್ಟಪಡಿಸಿದರು.

click me!