ಜೆಡಿಎಸ್ ವಲಯದಿಂದ ಮಹತ್ವದ ಸುದ್ದಿ : ಬಿಜೆಪಿಗೆ ಕೈ ಜೋಡಿಸಲು ಮುಂದಾದ್ರ ಗೌಡ್ರು

By Suvarna News  |  First Published Nov 17, 2020, 7:35 AM IST

ಜೆಡಿಎಸ್ ವಲಯದಿಂದ ಹೊರಬಿತ್ತಾ ಮಹತ್ವದ ಸುದ್ದಿ.? ಉಪ ಚುನಾವಣೆಯಿಂದ ದೂರ ಉಳಿಯುತ್ತಾರಾ ನಾಯಕರು?


 ಬೆಂಗಳೂರು (ನ.17):  ಉಪ ಚುನಾವಣಾ ಕಣದಿಂದಲೇ ಹಿಂದೆ ಸರಿಯಲು ಜೆಡಿಎಸ್ ನಿರ್ಧಾರ ಮಾಡಿದೆ ಹೀಗೊಂದು ಪ್ರಶ್ನೆ ತಲೆದೋರಿದೆ. 

 ರಾಜರಾಜೇಶ್ವರಿ ನಗರ, ಮತ್ತು ಶಿರಾ  ಸೋಲಿನ ಬಳಿಕ ಕಂಗಾಲಾಗಿರುವ ದಳಪತಿಗಳು ಬಸವಕಲ್ಯಾಣ, ಮಸ್ಕಿ,ವಿಧಾನಸಭಾ ಹಾಗೂ ಬೆಳಗಾವಿ ಲೋಕಸಭಾ ಉಪ ಚುನಾವಣೆಗಳ ಬಗ್ಗೆ  ಆಸಕ್ತಿ ‌ತೋರಿಸಿಲ್ಲ ಎನ್ನಲಾಗುತ್ತಿದೆ.

Tap to resize

Latest Videos

ಶಿರಾದಲ್ಲಿ ತಮ್ಮ ಕ್ಷೇತ್ರ ವನ್ನೇ ಉಳಿಸಿಕೊಳ್ಳಲಾಗಲಿಲ್ಲ. ಆರ್ ಅರ್ ನಗರದಲ್ಲಿ ಠೇವಣಿ ಕೂಡಾ ಪಡೆಯಲಾಗಲಿಲ್ಲ. ಇನ್ನು  ಉತ್ತರ ಕರ್ನಾಟಕ ಭಾಗದಲ್ಲಿ ಜೆಡಿಎಸ್ ಗೆ ಅಷ್ಟೇನೂ ಶಕ್ತಿ ಇಲ್ಲ.  ಹಾಗಾಗಿ ಅಭ್ಯರ್ಥಿ ಹಾಕುವ ಬಗ್ಗೆ ಜೆಡಿಎಸ್ ಮುಖಂಡರು ಗೊಂದಲದಲ್ಲಿದ್ದಾರೆ.

ಸುವರ್ಣ ನ್ಯೂಸ್ ಎಕ್ಸ್‌ಕ್ಲೂಸಿವ್: ಬಿಜೆಪಿಯಲ್ಲಿ ಮತ್ತೊಂದು ಪವರ್ ಸೆಂಟರ್ ಸೃಷ್ಟಿ..!

ತಮ್ಮ ಸ್ವ ಕ್ಷೇತ್ರವೇ ಕೈತಪ್ಪಿ ಹೋಗಿರುವ ಹಿನ್ನಲೆಯಲ್ಲಿ ತೀವ್ರ ಆಘಾತಕ್ಕೆ ಒಳಗಾಗಿರುವ ಜೆಡಿಎಸ್ ನಾಯಕರು ಉಪ ಚುನಾವಣೆ  ಸೋಲಿನ ಬಳಿಕ ಮಾದ್ಯಮ ಗಳ ಮುಂದೆಯೇ ಬಂದಿಲ್ಲ.  ದೇವೇಗೌಡ,ಮತ್ತು ಕುಮಾರಸ್ವಾಮಿಯವರೂ ಯಾವುದೇ ರೀತಿಯ ಹೇಳಿಕೆ ನೀಡಿಲ್ಲ.

ಕೇವಲ ಟ್ವೀಟ್ ಮೂಲಕ ಮಾತ್ರ ಪ್ರತಿಕ್ರಿಯೆ ನೀಡಿರುವ ಕುಮಾರಸ್ವಾಮಿ ಮುಂದೆ ನಡೆಯಲಿರುವ ಉಪ ಚುನಾವಣೆಗಳಿಗೆ ಅಭ್ಯರ್ಥಿ ಗಳನ್ನು ಹಾಕಿದರೂ ಗೆಲ್ಲುವ ಸಾದ್ಯತೆ ಕಡಿಮೆ ಎಂದು ನಿರ್ಧರಿಸಿದ್ದು,  ಮತ್ತೆ ಮುಖಭಂಗ ಅನುಭವಿಸುವುದು ಯಾಕೆ ಎಂಬ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. 

ಒಂದು ವೇಳೆ ಬಿಜೆಪಿ ಬಯಸಿದರೆ ಆಂತರಿಕ ಬೆಂಬಲ ನೀಡುವ ಬಗ್ಗೆ ಚಿಂತನೆ ನಡೆದಿದ್ದು, ಇತ್ತೀಚಿಗೆ ಸಿಎಂ ಯಡಿಯೂರಪ್ಪ ಭೇಟಿ ವೇಳೆ ಈ ವಿಚಾರದ  ಬಗ್ಗೆ ಕುಮಾರಸ್ವಾಮಿ ಪ್ರಾಥಮಿಕ ಚರ್ಚೆ ನಡೆಸಿದ್ದು ಉಪ ಚುನಾವಣೆ ಘೋಷಣೆಗೂ ಮುನ್ನ ಶಸ್ತ್ರ ತ್ಯಾಗ ಮಾಡಿದರಾ ಎನ್ನುವ ಪ್ರಶ್ನೆ ಮೂಡಿದೆ.

click me!