ರಾಜ್ಯದ ಜನತೆ ಬಿಜೆಪಿ ಸರ್ಕಾರಕ್ಕೆ ಮುಂಬರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಿದೆ. ನೇಮಕಾತಿ, ಗುತ್ತಿಗೆದಾರರಿಂದ 40% ಕಮಿಷನ್ ಪಡೆದಿರುವ ದುರಾಡಳಿತ ಸರ್ಕಾರವನ್ನು ಜನರು ತಿರಸ್ಕರಿಸಬೇಕು. ಇಂತಹ ಕೆಟ್ಟಆಡಳಿತ ಶೀಘ್ರದಲ್ಲೆ ಅಂತ್ಯವಾಗಲಿದೆ: ರಣದೀಪಸಿಂಗ್ ಸುರ್ಜೇವಾಲ್
ಬಾಗಲಕೋಟೆ(ಫೆ.18): ಕಾಂಗ್ರೆಸ್ ಪಕ್ಷ ಮನೆಯ ಯಜಮಾನಿಗೆ ನೀಡಲು ಉದ್ದೇಶಿಸಿರುವ .2000 ಮಾಸಿಕ ಹಣವದ ಕುರಿತು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ ಸಿಂಗ್ ಸುರ್ಜೇವಾಲಾ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಉದ್ದೇಶಿಸಿ ವ್ಯಂಗ್ಯವಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮನೆಯಲ್ಲಿ ಮಹಿಳೆಯರಿಲ್ಲ. ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಅನ್ನು ಅವರಿಗೇ ಕೊಡಿ ಎಂದು ವ್ಯಂಗ್ಯವಾಡಿದರು. ನಗರದ ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ವಿತರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಈ ವೇಳೆ ಕಾರ್ಯಕರ್ತರು ಮನೆಯಲ್ಲಿ ಮಹಿಳೆಯರು ಇಲ್ಲದಿದ್ದರೆ ಹೇಗೆ ಮಾಡುವುದು ಎಂದು ಪ್ರಶ್ನಿಸಿದಾಗ ಸುರ್ಜೆವಾಲಾ ಅವರು ಈ ರೀತಿ ಉತ್ತರ ನೀಡಿದರು.
ಮನೆಯಲ್ಲಿ ತಾಯಿ, ಧರ್ಮಪತ್ನಿ, ಮಗಳು, ತಂಗಿ ಇಲ್ಲದತಂಹ ಕುಟುಂಬ ಲಕ್ಷಕ್ಕೆ ಒಂದು ಸಿಗುತ್ತವೆ. ಮನೆಯಲ್ಲಿ ಮಹಿಳೆಯರು ಇಲ್ಲದಿರುವ ಕುಟುಂಬ ಎಲ್ಲೋ ಒಂದು ಇರುತ್ತವೆ. ಅಂಥ ಮನೆಯಲ್ಲಿ ಮನೆಯ ಮುಖ್ಯಸ್ಥನಿಗೆ ಗ್ಯಾರಂಟಿ ಕಾರ್ಡ್ ಕೊಡಿ. ನೋಂದಣಿಯನ್ನೂ ಮಾಡಿಸಿ ಎಂದ ಅವರು, ಮೋದಿ ಅವರ ಮನೆಯಲ್ಲಿ ಮಹಿಳೆಯರಿಲ್ಲ. ಹಾಗಾಗಿ ಅವರಿಗೆನೇ ಕೊಡಿ ಎಂದು ವ್ಯಂಗ್ಯವಾಡಿದರು.
undefined
ಬಾಗಲಕೋಟೆ: ಕೋಟೆ ನಾಡಿಗೆ ಮತ್ತೇ ನಿರಾಶಾದಾಯಕ ಬಜೆಟ್..!
ಕಮಿಷನ್ ಸರ್ಕಾರ ತಿರಸ್ಕರಿಸಿ:
ರಾಜ್ಯದ ಜನತೆ ಬಿಜೆಪಿ ಸರ್ಕಾರಕ್ಕೆ ಮುಂಬರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಿದೆ. ನೇಮಕಾತಿ, ಗುತ್ತಿಗೆದಾರರಿಂದ 40% ಕಮಿಷನ್ ಪಡೆದಿರುವ ದುರಾಡಳಿತ ಸರ್ಕಾರವನ್ನು ಜನರು ತಿರಸ್ಕರಿಸಬೇಕು. ಇಂತಹ ಕೆಟ್ಟಆಡಳಿತ ಶೀಘ್ರದಲ್ಲೆ ಅಂತ್ಯವಾಗಲಿದೆ ಎಂದು ಹೇಳಿದರು.
ಕಾಂಗ್ರೆಸ್ ಪ್ರಣಾಳಿಕೆಗಳನ್ನು ಕಾರ್ಯಕರ್ತರು ಮತದಾರರ ಮನೆಗೆ 10 ದಿನಗಳಲ್ಲಿ ತಲುಪಿಸಿ. ಕಾಂಗ್ರೆಸ್ ಕರ್ನಾಟಕ ಬ್ಯಾಂಡ್ ಉಳಿಸಲು ಹವಣಿಸುತ್ತಿದೆ. ಆದರೇ ಬಿಜೆಪಿ ಕಮಿಷನ್, ಕೋಮುವಾದದಲ್ಲಿ ನಿರತವಾಗಿದೆ. ಗೃಹ ಲಕ್ಷ್ಮೀ ಯೋಜನೆ, ಉಚಿತ ವಿದ್ಯುತ್ ಬಗ್ಗೆ ಬಿಜೆಪಿಯವರು ಸುಳ್ಳು ವದಂತಿ ಹಬ್ಬಿಸುತ್ತಿದ್ದಾರೆ. ಈ ಬಗ್ಗೆ ಯಾವುದೇ ಅನುಮಾನ ಬೇಡ. ಬಿಜೆಪಿ ತಿಂದಿರುವ ಕಮಿಷನ್ ಹಣದಲ್ಲಿ ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್, ಪ್ರತಿ ಕುಟುಂಬದ ಯಜಮಾನಿಗೆ 2 ಸಾವಿರ ನೀಡಬಹುದು. ಇದು ಎಲ್ಲಿಗೂ ಹೋಗಲ್ಲ. ತೆರಿಗೆ ರೂಪದಲ್ಲಿ ಮತ್ತೆ ಸರ್ಕಾರ ಖಜಾನೆ ಸೇರುತ್ತದೆ. ಸ್ತ್ರೀಯರು ಇಲ್ಲದೇ ಹೋದ ಕುಟುಂಬದಲ್ಲಿ ಪುರುಷರಿಗೆ ಜಮೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಸಚಿವ ಅಶ್ವಥ್ ನಾರಾಯಣ ಯಾಕೆ ವಜಾ ಮಾಡಲಿಲ್ಲ?
ಸಚಿವ ಅಶ್ವಥ್ ನಾರಾಯಣ ಟಿಪ್ಪು ರೀತಿ ಸಿದ್ದರಾಮಯ್ಯ ಅವರನ್ನು ಹೊಡೆದು ಹಾಕಬೇಕು ಎನ್ನುತ್ತಾರೆ. ಇದರ ಹಿಂದೆ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಜೆ.ಪಿ.ನಡ್ಡಾ ಇದ್ದಾರೆ. ಅದಕ್ಕೆ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ರಾಜ್ಯದಲ್ಲಿ ಕೋಮುದ್ವೇಷ ಬೆಳೆಸುವುದು, ಕೊಲೆ, ಸುಲಿಗೆ ಮಾಡುವುದು ಬಿಜೆಪಿ ಉದ್ದೇಶ. ಮಹಾತ್ಮ ಗಾಂಧಿ, ಇಂದಿರಾ ಗಾಂಧಿ ಕೊಂದ ಗೋಡ್ಸೆ ಮನಸ್ಥಿತಿಯವರು ಬಿಜೆಪಿಗರು. ಬಿಜೆಪಿ ಸರ್ಕಾರಕ್ಕೆ ಸ್ವಲ್ಪವಾದರು ನಾಚಿಕೆ ಇದ್ದರೇ ಸಚಿವ ಅಶ್ವಥ್ ನಾರಾಯಣ ಅವರನ್ನು ವಜಾಗೊಳಿಸಬೇಕಿತ್ತು ಎಂದು ಟೀಕಾಪ್ರಹಾರ ನಡೆಸಿದರು.
ಟಿಕೆಟ್ ವಂಚಿತರು ನಿರಾಸೆ ಆಗಬೇಡಿ:
ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ್ ಪ್ರತಿಯೊಬ್ಬರಿಗೂ ತಲುಪಿಸಿ ಪಕ್ಷ ಸೂಚನೆ ನೀಡುವ ರೀತಿಯಲ್ಲಿ ಈ ಕಾರ್ಯಕ್ರಮ ಯಶಸ್ವಿಗೊಳಿಸಬೇಕು. ಜಾತಿ, ಮತ, ಪಂಥ ಇಲ್ಲದೆ ಜನ ಸೇವೆ ಮಾಡುತ್ತದೆ ಕಾಂಗ್ರೆಸ್. ಸರ್ವೇ ನಡೆಸಿದ ಬಳಿಕ ಟಿಕೆಟ್ ಹಂಚಿಕೆ ಮಾಡಲಾಗುವುದು. ಆಕಾಂಕ್ಷಿಗಳು ಟಿಕೆಟ್ ಸಿಗಲಿಲ್ಲ ಅಂತ ನಿರಾಸೆ ಆಗಬಾರದು. ಪಕ್ಷ ಅಧಿಕಾರಕ್ಕೆ ಬಂದರೇ, ಸೂಕ್ತ ಸ್ಥಾನ ಮಾನ ನೀಡಲಾಗುವುದು ಎಂದು ಭರವಸೆ ನೀಡಿದರು.ಈ ವೇಳೆ ಕೇರಳ ಶಾಸಕ ವಿಷ್ಣು ನಾಥನ್, ಕೆಪಿಸಿಸಿ ಕಾರ್ಯಾಧ್ಯಕ್ಷ ನಜೀರ ಅಹ್ಮದ್, ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ, ಮಾಜಿ ಸಚಿವರಾದ ಎಸ್.ಆರ್.ಪಾಟೀಲ, ಉಮಾಶ್ರೀ, ಎಚ್.ವೈ.ಮೇಟಿ, ಆರ್.ಬಿ.ತಿಮ್ಮಾಪುರ, ಎಚ್.ವೈ.ಮೇಟಿ, ಮುಖಂಡರಾದ ಬಸವಪ್ರಭು ಸರನಾಡಗೌಡ, ಡಾ.ದೇವರಾಜ ಪಾಟೀಲ, ಡಾ.ಎಂ.ಎಸ್.ದಡ್ಡೇನವರ, ನಾಗರಾಜ ಹದ್ಲಿ, ಎಂ.ಬಿ.ಸೌದಾಗರ ಸೇರಿದಂತೆ ಇತರರು ಇದ್ದರು.
ಮಾಜಿ ಸಚಿವ ಮೇಟಿಗೆ ತಪ್ಪಿದರೆ ನನಗೆ ಕಾಂಗ್ರೆಸ್ ಟಿಕೆಟ್ ನೀಡಿ, ಕೊನೆ ಅವಕಾಶ ಕೊಡಿ: ಡಾ.ದೇವರಾಜ್ ಪಾಟೀಲ
ಕಾಂಗ್ರೆಸ್ ಉತ್ತಮ ಆಡಳಿತ, ಬಿಜೆಪಿ ದುರಾಡಳಿತ
ಈ ಹಿಂದೆ ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ, ದೇಶದಲ್ಲಿ ಮನಮೋಹನ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ಉತ್ತಮ ಆಡಳಿತ ನೀಡಿತ್ತು. ಜನರ ಜೀವನ ಸುಧಾರಣೆಗೆ ಕ್ರಮ ತೆಗೆದುಕೊಂಡಿತ್ತು. 3.5 ವರ್ಷದಲ್ಲಿ ಬಿಜೆಯವರು ಯಾವ ಯೋಜನೆ ಜನ ಸಾಮಾನ್ಯರಿಗೆ ನೀಡಲಿಲ್ಲ. ಮಹಿಳೆಯರನ್ನು ಶೋಷಣೆಗೆ ಒಳಪಡಿಸಿತು. ಪಿಎಸೈ ನೇಮಕಾತಿಯಲ್ಲಿ ಹಗರಣ ಮಾಡಿತು. ಶಾಸಕ ಬಸನಗೌಡ ಪಾಟೀಲ ಯತ್ನಾಳ, ತುಮಕೂರು ಜಿಲ್ಲೆಯ ಬಿಜೆಪಿ ಶಾಸಕ ಬಹಿರಂಗವಾಗಿ ಹೇಳಿಕೆ ನೀಡಿದರೂ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ಗುತ್ತಿಗೆದಾರರು ಸಾವನ್ನಪ್ಪಿದರು, ಅವರ ಕುಟುಂಬಸ್ಥರು ಅನಾಥರಾದರು. ಸಂಬಂಧಪಟ್ಟಸಚಿವರ ಮೇಲೆ ಯಾವ ಕ್ರಮ ಆಗಲಿಲ್ಲ. ಈ ವರ್ಷ ಬಜೆಟ್‌ನಲ್ಲಿ ಕಾಂಗ್ರೆಸ್ ಬಜೆಟ್ ಕಾಪಿ ಮಾಡಿದ್ದಾರೆ. ಬರೀ ಲೂಟಿ ಬಿಜೆಪಿ ಸರ್ಕಾರ ಇದೀಗ ಚುನಾವಣೆ ಬರುತ್ತಿದ್ದಂತೆ ಜನ ಸಾಮಾನ್ಯರ ಕಾಳಜಿ ಶುರುವಾಗಿದೆ ಅಂತ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪಸಿಂಗ್ ಸುರ್ಜೇವಾಲ್ ತಿಳಿಸಿದ್ದಾರೆ.
ಬಿಜೆಪಿ ದುರಾಡಳಿತಕ್ಕೆ ಜನ ಅಂತ್ಯ ಹಾಡಲಿಲ್ಲ. ನಮ್ಮ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಅನೇಕ ಜನಪರ ಯೋಜನೆಗಳನ್ನು ಜಾರಿಗೊಳಿಸಲಾಗುವುದು. ಇದೀಗ 2 ಮಹತ್ವದ ಯೋಜನೆ ಘೋಷಣೆ ಮಾಡಲಾಗಿದೆ. ಕಾರ್ಯಕರ್ತರು, ಪದಾಧಿಕಾರಿಗಳು ಮತದಾರರಿಗೆ ಮನವರಿಕೆ ಮಾಡಿಕೊಡಬೇಕು. ಸರಿಯಾಗಿ ಪ್ರಚಾರ ಮಾಡಬೇಕು ಅಂತ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದ್ದಾರೆ.