ಸ್ಟಾರ್ಟ್‌ ಅಪ್‌ ಸಿಟಿ ಆಗಿದ್ದ ಬೆಂಗಳೂರು ಈಗ ಶಟ್‌ಡೌನ್‌ ಸಿಟಿ: ರಾಮಲಿಂಗಾರೆಡ್ಡಿ

Published : Jul 05, 2022, 09:04 AM IST
ಸ್ಟಾರ್ಟ್‌ ಅಪ್‌ ಸಿಟಿ ಆಗಿದ್ದ ಬೆಂಗಳೂರು ಈಗ ಶಟ್‌ಡೌನ್‌ ಸಿಟಿ: ರಾಮಲಿಂಗಾರೆಡ್ಡಿ

ಸಾರಾಂಶ

*  ಇದೇ ಬಿಜೆಪಿ ಸರ್ಕಾರದ ಸಾಧನೆ *  ಜಾಗತಿಕ ಜೀವನಯೋಗ್ಯ ಸೂಚ್ಯಂಕದಲ್ಲಿ ಕುಸಿತ *  ಐಸಿಯುನಲ್ಲಿ ಬೆಂಗಳೂರು  

ಬೆಂಗಳೂರು(ಜು.05):  ವಿಶ್ವದ 173 ನಗರಗಳ ಮೌಲ್ಯಮಾಪನ ವರದಿಯಲ್ಲಿ ಬೆಂಗಳೂರು ಅತ್ಯಂತ ಕಳಪೆ ಸ್ಥಾನದಲ್ಲಿದೆ. ಗಾರ್ಡನ್‌ ಸಿಟಿ ಈಗ ಗಾಂಜಾ ಸಿಟಿ, ಗಾರ್ಬೆಜ್‌ ಸಿಟಿಯಾಗುತ್ತಿದೆ. ಸ್ಟಾರ್ಟ್‌ ಅಪ್‌ ಸಿಟಿಯನ್ನು ಶಟ್‌ಡೌನ್‌ ಸಿಟಿ ಮಾಡಿದ ಕೀರ್ತಿ ಬಿಜೆಪಿಗೆ ಸಲ್ಲಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಕಿಡಿಕಾರಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ‘ದಿ ಎಕನಾಮಿಸ್ಟ್‌’ ಎಂಬ ಆರ್ಥಿಕ ತಜ್ಞರಿರುವ ‘ಜಾಗತಿಕ ಜೀವನಯೋಗ್ಯ ಸೂಚ್ಯಂಕ-2022’ರ ವರದಿಯಲ್ಲಿ ವಿಶ್ವದ 173 ನಗರಗಳನ್ನು ಅಧ್ಯಯನ ಮಾಡಲಾಗಿದೆ. ಇದರಲ್ಲಿ ಭಾರತದ ಪ್ರಮುಖ ಐದು ನಗರಗಳಾದ ದೆಹಲಿ, ಚೆನ್ನೈ, ಮುಂಬೈ, ಅಹಮದಾಬಾದ್‌ ಹಾಗೂ ಬೆಂಗಳೂರು ಇದ್ದು 140ರಿಂದ 146 ಶ್ರೇಯಾಂಕದಲ್ಲಿ ಸ್ಥಾನ ಪಡೆದಿವೆ. ಈ ಪಟ್ಟಿಯಲ್ಲಿ ಅತಿ ಕಳಪೆ ಸ್ಥಾನ (146) ಬೆಂಗಳೂರಿನದ್ದಾಗಿದೆ. ಇದಕ್ಕೆ ಬಿಜೆಪಿ ಆಡಳಿತವೇ ಹೊಣೆ ಎಂದು ಆರೋಪಿಸಿದರು.

ಹಿಟ್ಲರ್‌ಗಿಂತ ಮೋದಿ ದೊಡ್ಡ ಸರ್ವಾಧಿಕಾರಿ: ರಾಮಲಿಂಗಾರೆಡ್ಡಿ

ಸ್ಥಿರತೆ, ಆರೋಗ್ಯ, ಶಿಕ್ಷಣ, ಪರಿಸರ, ಮೂಲಭೂತ ಸೌಕರ್ಯ ಮತ್ತಿತರ ಅಂಶಗಳನ್ನು ಪರಿಗಣಿಸಿ ಶ್ರೇಯಾಂಕ ನೀಡಲಾಗಿದೆ. ಮೂಲಭೂತ ಸೌಕರ್ಯ ವಿಚಾರದಲ್ಲಿ ಬೆಂಗಳೂರು ದೇಶದ ಇತರೆ ನಗರಗಳಾದ ದೆಹಲಿ, ಮುಂಬೈ, ಅಹಮದಾಬಾದ್‌, ಚೆನ್ನೈಗಿಂತಲೂ ತೀರಾ ಹಿಂದುಳಿದಿದೆ ಎಂದು ಟೀಕಿಸಿದರು.

ಕಾಂಗ್ರೆಸ್‌ನಿಂದ ಕಾಯಕಲ್ಪ

ಬೆಂಗಳೂರು ನಗರ ಅತಿ ವೇಗವಾಗಿ ಬೆಳೆಯುತ್ತಿದ್ದು, ದೇವರಾಜ ಅರಸು, ವೀರಪ್ಪ ಮೋಯ್ಲಿ, ಎಸ್‌.ಎಂ ಕೃಷ್ಣ, ಧರ್ಮ ಸಿಂಗ್‌, ಸಿದ್ದರಾಮಯ್ಯ ಅವರ ಸರ್ಕಾರದ ಅವಧಿಯಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಿ ಕಾಯಕಲ್ಪ ನೀಡಲು ಹಲವು ಯೋಜನೆ ಹಮ್ಮಿಕೊಳ್ಳಲಾಗಿತ್ತು. ಸ್ವಾತಂತ್ರ್ಯ ಬಂದ ನಂತರ ರಚನೆಯಾದ ಎಲ್ಲ ಸರ್ಕಾರಗಳೂ ಬೆಂಗಳೂರನ್ನು ಕಟ್ಟಿಬೆಳೆಸಿದ್ದವು. ಆದರೆ ಬಿಜೆಪಿ ಸರ್ಕಾರ ಕೇವಲ 3 ವರ್ಷದಲ್ಲಿ ಇದನ್ನು 146ನೇ ಸ್ಥಾನಕ್ಕೆ ತಳ್ಳಿದೆ ಎಂದು ಆರೋಪಿಸಿದರು.

ಕೇಂದ್ರ ಸರ್ಕಾರಕ್ಕೆ ರಾಜ್ಯದಿಂದ ಕಳೆದ 8 ವರ್ಷದಲ್ಲಿ .19 ಲಕ್ಷ ಕೋಟಿ ತೆರಿಗೆ ಸಂಗ್ರಹವಾಗಿದ್ದು, ಇದರಲ್ಲಿ ಬೆಂಗಳೂರಿನ ಪಾಲು .15 ಲಕ್ಷ ಕೋಟಿ ಇದೆ. ಕೇಂದ್ರ ಸರ್ಕಾರ ಸರಿಯಾಗಿ ಅನುದಾನ ನೀಡಿದ್ದರೆ ಬೆಂಗಳೂರು ಇಷ್ಟುಕಳಪೆ ಸ್ಥಾನಕ್ಕೆ ಕುಸಿಯುತ್ತಿರಲಿಲ್ಲ. ಇನ್ನಾದರೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಚ್ಚೆತ್ತು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಬಿಬಿಎಂಪಿ ಚುನಾವಣೆಯಲ್ಲಿ ಜನತೆ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಎಚ್ಚರಿಸಿದರು.

Karnataka Politics: ಕರ್ನಾ​ಟ​ಕ​ದಲ್ಲಿ ಇರು​ವುದು ಮಾಫಿಯಾ ಸರ್ಕಾರ: ರಾಮಲಿಂಗಾ ರೆಡ್ಡಿ

ಐಸಿಯುನಲ್ಲಿ ಬೆಂಗಳೂರು

ಪಿಂಚಣಿದಾರರ ಸ್ವರ್ಗವಾಗಿದ್ದ ಬೆಂಗಳೂರು ಇಂದು ರಸ್ತೆಗುಂಡಿಗಳ ನಗರವಾಗಿದೆ. ಕಾಸ್ಮೋಪಾಲಿಟನ್‌ ಸಿಟಿ ಪಟ್ಟಹೋಗಿ ಕೋಮುವಾದದ ನಗರವಾಗಿದ್ದು, ಐಸಿಯುನಲ್ಲಿದೆ ಎಂದು ಮಾಜಿ ಸಚಿವ ಪ್ರಿಯಾಂಕ್‌ ಖರ್ಗೆ ಆತಂಕ ವ್ಯಕ್ತಪಡಿಸಿದರು.

ಹಿಂದೆ ಬೆಂಗಳೂರಿಗೆ ಒಳ್ಳೆಯ ಹೆಸರಿತ್ತು. ಆದಾಯ ಕಡಿಮೆ ಇದ್ದರೂ ಉತ್ತಮ ಜೀವನ ನಡೆಸಬಹುದಾಗಿದ್ದು ಪಿಂಚಣಿದಾರರಿಗೆ ಸ್ವರ್ಗವಾಗಿತ್ತು. ಕಾಸ್ಮೋಪಾಲಿಟನ್‌ ನಗರ ಎಂದೂ ಕರೆಸಿಕೊಂಡಿತ್ತು. ಆದರೆ ಬಿಜೆಪಿಯ ಭ್ರಷ್ಟಆಡಳಿತದಿಂದ ರಸ್ತೆಗುಂಡಿಗಳ ನಗರವಾಗಿ ತೀವ್ರ ನಿಗಾ ಘಟಕ (ಐಸಿಯು)ದಲ್ಲಿದೆ. ಉದ್ದಿಮೆಗಳು ಬೇರೆ ರಾಜ್ಯಗಳಿಗೆ ವಲಸೆ ಹೋಗುತ್ತಿದ್ದು, ಎಚ್ಚೆತ್ತುಕೊಳ್ಳದಿದ್ದರೆ ಬ್ರ್ಯಾಂಡ್‌ ಬೆಂಗಳೂರಿಗೆ ಆಪತ್ತು ಬರಲಿದೆ ಎಂದು ಎಚ್ಚರಿಸಿದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿದ್ದರಾಮಯ್ಯ ಆಡಳಿತ ಕೇವಲ ಟೀಕೆಯಲ್ಲಿ ಮುಳುಗಿದೆ: ಕೇಂದ್ರ ಸಚಿವ ವಿ.ಸೋಮಣ್ಣ ಆರೋಪ
ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮಧ್ಯೆ ಖುರ್ಚಿ ಕಾದಾಟ ಇಲ್ಲ: ಬಸವರಾಜ ರಾಯರೆಡ್ಡಿ