ಬಿಜೆಪಿ ಸರ್ಕಾರದ ದುರಾಡಳಿತದಿಂದಾಗಿ ಕರ್ನಾಟಕದ ಇಮೇಜ್‌ ಹಾಳಾಗಿದೆ: ಎಂಬಿಪಾ

By Kannadaprabha News  |  First Published Sep 13, 2022, 2:52 PM IST

40 ಪರ್ಸೆಂಟೇಜ್‌ ಸರ್ಕಾರ ತೊಲಗಲಿ, ಆರ್ಥಿಕ ಸ್ಥಿತಿ ಹದಗೆಡಿಸಿದ ಬಿಜೆಪಿ: ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್‌ 


ವಿಜಯಪುರ(ಸೆ.13): ರಾಜ್ಯದಲ್ಲಿನ ಆಡಳಿತರೂಢ ಬಿಜೆಪಿ ಸರ್ಕಾರದ ದುರಾಡಳಿತದಿಂದಾಗಿ ರಾಜ್ಯದ ಇಮೇಜ್‌ ಸಂಪೂರ್ಣ ಹಾಳಾಗಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಹೇಳಿದರು. ಸೋಮವಾರ ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಜನರು ಈ ಸರ್ಕಾರವನ್ನು ಬೇಗ ಕಿತ್ತು ಹಾಕಿದಷ್ಟು ಒಳ್ಳೆಯದಾಗುತ್ತದೆ. ಮುಂದೆ ಒಳ್ಳೆಯ ಸರ್ಕಾರ ಬರಬೇಕು ಎಂದು ಹೇಳಿದರು. ಬಿಜೆಪಿ ಸರ್ಕಾರದ ದುರಾಡಳಿತದಿಂದಾಗಿ ರಾಜ್ಯದ ಇಮೇಜ್‌ ಬಹಳಷ್ಟು ಹಾಳಾಗಿದೆ. ವ್ಯವಸ್ಥೆಯನ್ನು ಹಾಳುಗೆಡವಿದ್ದಾರೆ. ಈ ವ್ಯವಸ್ಥೆಯನ್ನು ಸರಿಪಡಿಸಲು ಕನಿಷ್ಠ ಎರಡು ವರ್ಷಗಳಷ್ಟುಸಮಯ ಬೇಕಾಗುತ್ತದೆ. ಡ್ಯಾಮೇಜ್‌ ಕಂಟ್ರೋಲ್‌ ಮಾಡಬೇಕಿದೆ ಎಂದ ಅವರು, ಆರ್ಥಿಕ ಪರಿಸ್ಥಿತಿಯನ್ನೂ ಹದಗೆಡಿಸಿದ್ದಾರೆ. ಮತ್ತೆ ನಮ್ಮ ರಾಜ್ಯ ನಂ.1 ಸ್ಥಾನಕ್ಕೆ ಬರಬೇಕಿದೆ. ಗತವೈಭವ ಮರಳಬೇಕಿದೆ. 40 ಪರ್ಸೆಂಟೇಜ್‌ ಸರ್ಕಾರ ತೊಲಗಬೇಕಿದೆ ಎಂದು ಹೇಳಿದರು.

ಬಿಜೆಪಿ ಸರ್ಕಾರದ ಅಕ್ರಮಗಳನ್ನು ಹೊರಹಾಕಲು ಎಚ್‌.ಡಿ.ಕುಮಾರಸ್ವಾಮಿ ಸಾಥ್‌ ನೀಡಿದ್ದಾರೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಕುಮಾರಸ್ವಾಮಿ ಯಾವಾಗ ಯಾರ ಜೊತೆಗೆ ಸಾಥ್‌ ಕೊಡುತ್ತಾರೆಯೋ ಒಂದೂ ಗೊತ್ತಾಗುತ್ತಿಲ್ಲ. ಮೈಸೂರು ಮೇಯರ್‌ ಆಯ್ತು, ಅಲ್ಲಿ ಸಾಥ್‌ ಕೊಟ್ಟರು. ಉಪ ಚುನಾವಣೆಯಲ್ಲಿ ಮುಸ್ಲಿಂ ಅಭ್ಯರ್ಥಿ ಹಾಕಿ ಕಾಂಗ್ರೆಸ್‌ ಸೋಲಿಸಿದರು. ಚುನಾವಣೆಯಲ್ಲಿ ಕುಮಾರಸ್ವಾಮಿಯವರಿಗೆ ಸಾಥ್‌ ಕೊಡಲು ಕಾಂಗ್ರೆಸ್ಸಿನವರು ನಾವು ಬಹಳಷ್ಟುಯೋಚನೆ ಮಾಡಬೇಕಾಗುತ್ತದೆ. ಸಾಥ್‌ ಕೊಡುವ ನಿರ್ಧಾರವನ್ನು ಪಕ್ಷ ನಿರ್ಧಾರ ತಗೆದುಕೊಳ್ಳುತ್ತದೆ ಎಂದರು.

Tap to resize

Latest Videos

ಪಿಎಸ್‌ಐ ಕೇಸಲ್ಲಿ ಆರಗ ಕೂಡ ಜೈಲಿಗೆ ಹೋಗ್ತಾರೆ: ಹರಿಪ್ರಸಾದ್‌

ಸಿ.ಟಿ.ರವಿ ವಿರುದ್ಧ ವಾಗ್ದಾಳಿ:

ಸಿದ್ದರಾಮಯ್ಯ ವಿರುದ್ಧ ಸಿ.ಟಿ.ರವಿ ಕಚ್ಚೆಹರುಕ ಪದ ಬಳಕೆ ಮಾಡಿದ ಮಾತಿಗೆ ತೀಕ್ಷ$್ಣ ಪ್ರತಿಕ್ರಿಯೆ ನೀಡಿದ ಎಂಬಿಪಾ ಅವರು, ಸಿ.ಟಿ.ರವಿ ಹೇಳಿಕೆಯನ್ನು ನಾನು ಗಮನಿಸಿಲ್ಲ. ಅವರು ಆ ರೀತಿ ಪದ ಬಳಕೆ ಮಾಡಿದ್ದರೆ ಅದು ಶೋಚನೀಯ. ಇದು ಸಿ.ಟಿ.ರವಿ ಅವರಿಗೆ ಗೌರವ ತರುವಂಥದ್ದಲ್ಲ. ಸಿದ್ದರಾಮಯ್ಯ ಹಿರಿಯ ನಾಯಕರು. ಜನ ಈ ರೀತಿಯ ಹೇಳಿಕೆಯನ್ನು ಸಹಿಸಿಕೊಳ್ಳುವುದಿಲ್ಲ. ಸಿ.ಟಿ.ರವಿ ಅವರು ತಕ್ಷಣ ಸಿದ್ದರಾಮಯ್ಯನವರ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ಜನಸ್ಪಂದನೆ ಕಾರ್ಯಕ್ರಮದಲ್ಲಿ ಖಾಲಿ ಕುರ್ಚಿ:

ಬಿಜೆಪಿ ಆಯೋಜಿಸಿದ್ದ ಜನಸ್ಪಂದನ ಕಾರ್ಯಕ್ರಮದಲ್ಲಿ ಜನರೇ ಇರಲಿಲ್ಲ. ಖಾಲಿ ಕುರ್ಚಿಗಳನ್ನು ಉದ್ದೇಶಿಸಿ ಭಾಷಣ ಮಾಡಿದರು. ಸ್ಮೃತಿ ಇರಾನಿ, ಬಿ.ಎಸ್‌.ಯಡಿಯೂರಪ್ಬಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಖಾಲಿ ಕುರ್ಚಿಗಳನ್ನು ಉದ್ದೇಶಿಸಿ ಮಾತನಾಡಿದರು ಎಂದು ವ್ಯಂಗ್ಯವಾಡಿದರು. ಬಿಜೆಪಿ ಸಮಾವೇಶದಲ್ಲಿದ್ದ ಖಾಲಿ ಕುರ್ಚಿಗಳ ಇರುವ ವಿಡಿಯೊ ನನ್ನ ಬಳಿ ಇವೆ. ಖಾಲಿ ಕುರ್ಚಿಗಳಿಗೆ ಲಕ್ಷಾಂತರ ಜನರು ಎಂದು ಹೇಳಿದ್ದಾರೆ. ಇದೇ ಬಿಜೆಪುಯ ಅಸಲಿಯತ್ತು ಎಂದು ಅವರು ಗೇಲಿ ಮಾಡಿದರು.
 

click me!