ಬಿಜೆಪಿಗರಿಗೆ ಸುಳ್ಳನ್ನು ನಿಜ ಮಾಡೋದು, ನಿಜವನ್ನು ಸುಳ್ಳು ಮಾಡೋದು ಬಿಟ್ಟರೆ ಬೇರೆ ಏನು ಗೊತ್ತಿಲ್ಲ: ಜಾರಕಿಹೊಳಿ

By Kannadaprabha News  |  First Published Sep 13, 2022, 2:28 PM IST

ದೇಶದಲ್ಲಿ ಬಿಜೆಪಿ ಆಡಳಿತ ಕಿತ್ತೊಗೆಯುವ ಕೆಲಸವಾಗಲಿ, ನೆಹರು ಆಡಳಿತದಿಂದಲೇ ದೇಶದಲ್ಲಿ ಟೆಕ್ನಾಲಜಿ ಬಂದಿದ್ದು, ಮೋದಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದೆ: ಸತೀಶ ಆರೋಪ


ಬಾಗಲಕೋಟೆ(ಸೆ.13):  ಬಿಜೆಪಿ ಅವರಿಗೆ ಸುಳ್ಳನ್ನು ನಿಜ ಮಾಡುವುದು, ನಿಜವನ್ನು ಸುಳ್ಳು ಮಾಡುವುದು ಬಿಟ್ಟರೆ ಬೇರೆ ಏನು ಗೊತ್ತಿಲ್ಲ. ಬಿಜೆಪಿ ಪಕ್ಷಕ್ಕೆ ಚುನಾವಣೆ ಹೇಗೆ ಮಾಡುವುದು, ಸೋತರೆ ಹೇಗೆ ಗೆದ್ದವರನ್ನು ಖರೀದಿ ಮಾಡುವುದು ಎನ್ನುವುದೇ ಚಿಂತೆ ಹೊರತು ದೇಶದ ಅಭಿವೃದ್ಧಿಯ ಚಿಂತೆ ಇಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.

ನವನಗರದ ಕಲಾ ಭವನದಲ್ಲಿ ಭಾನುವಾರ ಕಾಂಗ್ರೆಸ್‌ ಪಕ್ಷ ಹಮ್ಮಿಕೊಂಡಿದ್ದ ದಲಿತ ಚಿಂತಕ ಪರಶುರಾಮ ಮಹಾರಾಜನವರ ಹಾಗೂ ಬೆಂಬಲಿಗರು ಕಾಂಗ್ರೆಸ್‌ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೋದಿ ಸರ್ಕಾರ ಆಡಳಿತಕ್ಕೆ ಬಂದಾಗ ಶೋಷಣೆಗೊಳಪಟ್ಟವರನ್ನು, ಬಡ ಜನರನ್ನು ಹಾಗೂ ಅವರ ಮಕ್ಕಳನ್ನು ಮುಂದೆ ತರುವ ಕೆಲಸ ಮಾಡುತ್ತದೆ ಎಂದು ನಂಬಿದ್ದೇವು. ಆದರೆ, ಅವರು ತಮಗೆ ಬೇಕಾದವರನ್ನು ಶ್ರೀಮಂತರನ್ನಾಗಿ ಮಾಡುವ ಕೆಲಸ ಮಾಡುತ್ತಿದ್ದಾರೆ. ಇದರಿಂದ ದೇಶದಲ್ಲಿ ದಲಿತರು ಬಡವರಾಗಿಯೇ ಉಳಿಯುವಂತಾಗಿದೆ. ದೇಶದಲ್ಲಿ ಬದಲಾವಣೆ ಅವಶ್ಯಕತೆ ಇದೆ ಎಂದು ತಿಳಿಸಿದರು.

Tap to resize

Latest Videos

undefined

ಕಾಲು ಒದ್ದೆಯಾಗತ್ತೆ ಅಂತ ಬೋಟ್‌, ವಯಸ್ಸಾಯ್ತು ಯಾವ ಆಟನೂ ಆಡೋಕಾಗಲ್ಲ ಎಂದ ಸಿದ್ದರಾಮಯ್ಯ

ಬಿಜೆಪಿ ಸರ್ಕಾರದ ದುರಾಡಳಿತದಿಂದ ದೇಶದ ಜಿಡಿಪಿ ಕುಸಿದು ಹೋಗಿದೆ. ಜನರು ನೌಕರಿಗಳನ್ನು ಕಳೆದುಕೊಳ್ಳುವಂತಾಗಿದೆ. ಮೋದಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದೆ. ಜನರಿಗೆ ಸುಳ್ಳು ಆಶ್ವಾಸನೆಗಳನ್ನು ನೀಡಿ ಅ​ಧಿಕಾರ ಚಲಾಯಿಸುತ್ತಿದ್ದಾರೆ. ದೇಶದಲ್ಲಿ ಬಿಜೆಪಿಯು ಶಿಕ್ಷಣದಲ್ಲಿ ಹೊಸ ನೀತಿ ತಂದಿದೆ. ಇದರಿಂದ ಬಡ ಮಕ್ಕಳು ಗ್ರ್ಯಾಜುವೇಟ್‌ಗಳಾಗದಂತೆ ಮಾಡುತ್ತಿದ್ದಾರೆ. ಈ ಹೊಸ ನೀತಿಯ ಬಗ್ಗೆ ಅಧ್ಯಯನ ಮಾಡಬೇಕಾಗಿದೆ ಎಂದರು.

ಮಾಜಿ ಸಚಿವ ಎಚ್‌.ವೈ.ಮೇಟಿ ಮಾತನಾಡಿ, ಬಿಜೆಪ ಪಕ್ಷ 70 ವರ್ಷದಿಂದ ಕಾಂಗ್ರೆಸ್‌ ಪಕ್ಷ ಏನು ಮಾಡಿಲ್ಲ ಎಂದು ಹೇಳುತ್ತಿದೆ. ದೇಶದ ಅಭಿವೃದ್ಧಿಗೆ ತಳಪಾಯ ಊರಿದ್ದೆ ಕಾಂಗ್ರೆಸ್‌ ಪಕ್ಷ ಎನ್ನುವುದು ಮರೆತಿದೆ. ದೇಶದಲ್ಲಿ ಶೇ.90 ರಷ್ಟುಮನೆಯಲ್ಲಿ ಅಕ್ಕಿ ತಂದು ಊಟ ಮಾಡುವಂತಾಗಿದೆ ಎಂದರೆ ಅದು ಸಿದ್ದರಾಮಯ್ಯ ಆಡಳಿತರ ಕಾಂಗ್ರೆಸ್‌ ಸರ್ಕಾರದಿಂದಲೇ ಬಿಜೆಪಿಯ ಸೂಳ್ಳು ಮಾತುಗಳಿಗೆ ಕಿವಿಗೊಡದೆ ಕಾಂಗ್ರೆಸ್‌ ಪಕ್ಷದ ಗೆಲುವಿಗಾಗಿ ಶ್ರಮಿಸುವ ಮೂಲಕ ದೇಶ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್‌ ಆಡಳಿತ ಬರುವ ಹಾಗೆ ಕೆಲಸ ಮಾಡಬೇಕಿದೆ ಎಂದು ತಿಳಿಸಿದರು.

ಪರಶುರಾಮ ಮಹಾರಾಜನ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯ ನಂತರ ಮಾತನಾಡಿದ ಅವರು, ದೇಶದಲ್ಲಿ ಬಿಜೆಪಿ ಪಕ್ಷ ಆಡಳಿತಕ್ಕೆ ಬಂದಿದ್ದು, ತಮ್ಮ ಶಕ್ತಿಯಿಂದಲ್ಲ. ಸೆಕ್ಯೂಲರ್‌ ಪಾರ್ಟಿಗಳಿಂದ 2014 ರಿಂದ ಧಾರ್ಮಿಕ ತಾರತಮ್ಯ ಜಾಸ್ತಿ ಆಗುತ್ತಿದೆ. 2016 ರಿಂದ ಬಹುತ್ವದಿಂದ ಏಕತ್ವದ ಕಡೆ ಸಾಗುತ್ತಿದೆ. ರಾಜಕಾರಣಿಗಳಿಗೆ ಧರ್ಮ ಇರಬಾರದು. ಧರ್ಮ ಸೇರಿದರೆ ದೇಶ ಸರ್ವನಾಶವಾಗುತ್ತದೆ. ಕೋಮ ದೇಶವಾಗುತ್ತದೆ. ಕೋಮು ಹಾಗೂ ದ್ವೇಶದ ಆಡಳಿತದಿಂದ ಈ ದೇಶದ ಪರಂಪರೆ ನಾಶವಾಗುತ್ತದೆ ಎಂದರು.

ಪೆಟ್ರೋಲ್‌ ಒಂದು ಸಾವಿರ ರುಪಾಯಿ ಆದರೂ ಮೋದಿಗೆ ಓಟ್‌ ಹಾಕುತ್ತೇವೆ ಎನ್ನುವವರು ಕಾಂಗ್ರೆಸ್‌ ಸರ್ಕಾರದಲ್ಲಿ ಪೆಟ್ರೋಟ್‌ ಏರಿಸಿದಾಗ ರಸ್ತೆಯಲ್ಲೆಲ್ಲ ಬಿದ್ದು ಹೋರಾಟ ಮಾಡುತ್ತಿದ್ದರು. ನಮ್ಮ ಭಾರತದ ಸಂವಿಧಾನವು ನಾಶ ಮಾಡುವಂತವರ ಕೈಯಲ್ಲಿ ಸಿಕ್ಕಿ ಹಾಕಿಕೊಂಡಿದೆ. ಎರಡು ಪಿರಿಡ್‌ನಲ್ಲಿ ದೇಶ ಈ ಸ್ಥಿತಿಗೆ ಬಂದಿದೆ ಎಂದರೆ ಇನ್ನು ಇದೇ ರೀತಿ ಮುಂದುವರೆದರೆ ದೇಶಕ್ಕೆ ಉಳಿಗಾಲವಿಲ್ಲ. ಗ್ರಾಮ ಮಟ್ಟದಿಂದ ಕೇಂದ್ರದವರೆಗೂ ಬಿಜೆಪಿ ಪಕ್ಷವನ್ನು ಕಿತ್ತೊಗೆದು ಬಿಜೆಪಿ ಮುಕ್ತ ದೇಶವನ್ನಾಗಿ ಮಾಡಬೇಕಾಗಿದೆ ಆಗಲೇ ದೇಶ ಅಭಿವೃದ್ಧಿಯಾಗುತ್ತದೆ ಎಂದರು.

ನೆಹರು ಸರ್ಕಾರದಿಂದಲೇ ದೇಶ ಹಸಿವು ಮುಕ್ತವಾಗಿದ್ದು, ಟೆಕ್ನಾಲಜಿಯಲ್ಲಿ ಮುಂದುವರೆದಿದ್ದು, ಆದರೆ, ಕೋಮು ಸಂಘಟನೆಗಳು ನೆಹರುವಿನ ಬಗ್ಗೆ ಅಪಪ್ರಚಾರ ಮಾಡುವ ಮೂಲಕ ಜನರ ದಿಕ್ಕು ಪತ್ತಿಸಿ ಕಾಂಗ್ರೆಸ್‌ ಬೆಂಬಲ ನೀಡದಂತೆ ಮಾಡುತ್ತಿವೆ. ಆದರೆ, ಈಗ ಜನರಿಗೆ ಎಲ್ಲ ಅರ್ಥವಾಗಿದೆ. ಇದೇ ರೀತಿ ಹೋದರೆ ಮುಂದಿನ ದಿನಗಳಲ್ಲಿ ಹೊಟ್ಟೆಗೆ ಅನ್ನ ಇಲ್ಲದಂತಾಗಿದೆ ಎಂದು ತಿಳಿದು ಕಾಂಗ್ರೆಸ್‌ ಬೆಂಬಲ ನೀಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಜಿಲ್ಲೆ, ರಾಜ್ಯ, ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್‌ ಆಡಳಿತಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿಯ ದೊಡ್ಡ ಭೂ ಹಗರಣ ಬಯಲಿಗೆಳೆವೆ: ಎಚ್‌ಡಿ ಕುಮಾರಸ್ವಾಮಿ

ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಎಸ್‌.ಜಿ. ನಂಜಯ್ಯನಮಠ, ಕಾಂಗ್ರೆಸ್‌ ಮಹಿಳಾ ಜಿಲ್ಲಾಧ್ಯಕ್ಷೆ ರಕ್ಷಿತಾ ಈಟಿ, ಸುಶಿಲಕುಮಾರ ಬೆಳಗಲಿ, ಡಾ.ದೇವರಾಜ ಪಾಟೀಲ, ಅರುಣ ಗರಸಂಗಿ, ಎ.ಎ.ದಂಡಿಯಾ, ಮಂಜುನಾಥ ವಾಸನದ, ಡಾ.ಎಂ.ಎಸ್‌.ದಡ್ಡೆನ್ನವರ, ಕಾಂಗ್ರೆಸ್‌ ಮಾಧ್ಯಮ ವಕ್ತಾರ ನಾಗರಾಜ ಹದ್ಲಿ, ಬಸವರಾಜ ಅಣ್ಣೀಗೆರಿ, ದ್ಯಾಮಣ್ಣ ಗಾಳಿ, ದಾಮಕ್ಕಾ ಮೇಟಿ, ನಗರಸಭೆ ಸದಸ್ಯ ಚನ್ನವೀರ ಅಂಗಡಿ, ಬಸವರಾಜ ಹಳ್ಳದ, ಮುಂತಾದವರು ಉಪಸ್ಥಿತರಿದ್ದರು.
ಕಾಂಗ್ರೆಸ್‌ ಪಕ್ಷವು ಪಕ್ಷದ ಹಿನ್ನೆಲೆಯಲ್ಲಿ ಕೆಲಸ ಮಾಡುವ ಪಕ್ಷವಾಗಿದೆ. ನಿಷ್ಠಾವಂತ ಆಡಳಿತ ನೀಡುವುದಕ್ಕಾಗಿ ಪಕ್ಷದ ಕಾರ್ಯಕರ್ತರನ್ನು ತರಬೇತಿ ಮಾಡುತ್ತಿದೆ. ಈ ದೇಶದ ಇತಿಹಾಸ ತಿಳಿಯದಿದ್ದರೇ ಕಾಂಗ್ರೆಸ್‌ ಪಕ್ಷದ ಬಗ್ಗೆ ತಿಳಿಯಲು ಸಾಧ್ಯವಿಲ್ಲ. ರಾಷ್ಟ್ರದಲ್ಲಿ ಬದಲಾವಣೆಗೆ ಕಾಂಗ್ರೆಸ್‌ ಪಕ್ಷದ ಆಡಳಿತ ಈ ದೇಶಕ್ಕೆ ಅವಶ್ಯಕತೆ ಇದೆ ಅಂತ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ತಿಳಿಸಿದ್ದಾರೆ. 

ಇಂದಿರಾ ಗಾಂಧಿ 20 ಅಂಶಗಳ ಕಾರ್ಯಕ್ರಮ ನೀಡದಿದ್ದರೇ ನಾವು ಯಾರು ರಾಜಕೀಯದಲ್ಲಿ ಇರುತ್ತಿರಲಿಲ್ಲ. ಇಂದಿರಾ ಹಾಗೂ ದೇವರಾಜ ಅರಸು ಅವರನ್ನು ನೆನಪಿಸಿಕೊಳ್ಳಬೇಕು. ಕಾಂಗ್ರೆಸ್‌ ಪಕ್ಷ ಸಾಕಷ್ಟುಅಭಿವೃದ್ಧಿ ಕೆಲಸ ಮಾಡಿದೆ. ಬಡವರ ಪರ ಕೆಲಸ ಮಾಡುತ್ತಿದೆ. ಕಾಂಗ್ರೆಸ್‌ ಪಕ್ಷದ ಬುದ್ಧ, ಬಸವ, ಅಂಬೇಡ್ಕರ್‌ ಅವರ ಸಿದ್ಧಾಂತಗಳನ್ನು ಅಳವಡಿಸಿಕೊಂಡಿರು ಪಕ್ಷವಾಗಿದೆ. ಆದ್ದರಿಂದಲೇ ಇಂದು ಪರಶುರಾಮ ಮಹಾರಾಜನ ಅವರು ಕಾಂಗ್ರೆಸ್‌ ಸೇರ್ಪಡೆಗೊಂಡಿದ್ದಾರೆ. ಕಾಂಗ್ರೆಸ್‌ ತತ್ವಗಳ ಸಿದ್ಧಾಂತ ನಂಬಿ ಕಾಂಗ್ರೆಸ್‌ ಪಕ್ಷಕ್ಕೆ ಬಂದಿದ್ದಾರೆ ಅಂತ ಮಾಜಿ ಸಚಿವ ಎಚ್‌.ವೈ.ಮೇಟಿ ತಿಳಿಸಿದ್ದಾರೆ.  
 

click me!