ಸಬ್‌ ಕಾ ಸಾಥ್‌ ಅಲ್ಲ; ಸಬ್‌ ಕಾ ಸತ್ಯಾನಾಶ- ಖರ್ಗೆ

By Kannadaprabha NewsFirst Published Oct 28, 2021, 7:00 AM IST
Highlights
  • ಸಬ್‌ ಕಾ ಸಾಥ್‌ ಸಬ್‌ ಕಾ ವಿಕಾಸ್‌ ಎಂದು ಹೇಳುತ್ತಲೇ ಪ್ರಧಾನಿ ನರೇಂದ್ರ ಮೋದಿ, ಏಳು ವರ್ಷದಲ್ಲಿ ‘ಸಬ್‌ ಕಾ ಸತ್ಯಾನಾಶ’ ಮಾಡಿದ್ದಾರೆ
  • ರಾಜ್ಯಸಭೆ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ.

 ಹುಬ್ಬಳ್ಳಿ (ಅ.28):  ಸಬ್‌ ಕಾ ಸಾಥ್‌ ಸಬ್‌ ಕಾ ವಿಕಾಸ್‌ (Sab Ka vikas) ಎಂದು ಹೇಳುತ್ತಲೇ ಪ್ರಧಾನಿ ನರೇಂದ್ರ ಮೋದಿ (PM Narendra Modi), ಏಳು ವರ್ಷದಲ್ಲಿ ‘ಸಬ್‌ ಕಾ ಸತ್ಯಾನಾಶ’ ಮಾಡಿದ್ದಾರೆ ಎಂದು ರಾಜ್ಯಸಭೆ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಟೀಕಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿ ನೀಡಿದ ಭರವಸೆಯಂತೆ ವರ್ಷಕ್ಕೆ 2 ಕೋಟಿಯಂತೆ 7 ವರ್ಷಕ್ಕೆ 15 ಕೋಟಿ ಉದ್ಯೋಗ ಸೃಷ್ಟಿಯಾಗಬೇಕಿತ್ತು. ಆದರೆ, ಲಕ್ಷಾಂತರ ಜನರು ಇರುವ ಉದ್ಯೋಗವನ್ನೇ (Job) ಕಳೆದುಕೊಂಡು ಕಂಗಾಲಾಗಿದ್ದಾರೆ. ಉದ್ಯೋಗ ಸೃಷ್ಟಿಸುವುದನ್ನು ಬಿಟ್ಟು ಅದಾನಿ (Adani), ಅಂಬಾನಿ (Ambani) ಅಂಥವರಿಗೆ ಸರ್ಕಾರದ ಆಸ್ತಿ ಲೀಸ್‌ ಕೊಡುತ್ತಿದ್ದಾರೆ ಎಂದರು.

ರೈತರ ಮಾರಣಹೋಮ ದೇಶಕ್ಕೇ ಕಪ್ಪುಚುಕ್ಕೆ: ಸಿಎಂ ರಾಜೀನಾಮೆ ಕೊಡಲಿ

ಕೇಂದ್ರ ಮತ್ತು ರಾಜ್ಯ ಸರ್ಕಾರದ (Karnataka Govt) ಬಳಿ ಸಾಕಷ್ಟು ಖಾಲಿ ಹುದ್ದೆಗಳಿವೆ. ಅವುಗಳನ್ನು ಭರ್ತಿ ಮಾಡಿದರೆ ಸುಮಾರು 62 ಲಕ್ಷ ಉದ್ಯೋಗ (Employment) ಸಿಗುತ್ತದೆ. ಆದರೆ, ಖಾಸಗಿಯವರಿಗೆ (Private) ಮಣೆ ಹಾಕಲಾಗುತ್ತಿದೆ ಎಂದ ಅವರು, ದೇಶದಲ್ಲಿ ಹಿಟ್ಲರ್‌ (Hitler) ಮಾದರಿ ಆಡಳಿತ ನಡೆಯತ್ತಿದೆ ಎಂದು ಛೇಡಿಸಿದರು.

ಜನರು ವೋಟು ಕೊಡುತ್ತಾರೆ ಎಂದು ಬಿಜೆಪಿಯವರು (BJP) ಏನೇನೋ ಮಾಡುತ್ತಿದ್ದಾರೆ. ಇದಕ್ಕೆಲ್ಲ ಮತದಾರರು ಉತ್ತರ ಕೊಡುವ ಕಾಲ ಶೀಘ್ರ ಬರುತ್ತದೆ ಎಂದ ಅವರು, ರೈತರು ಗೊಬ್ಬರಕ್ಕಾಗಿ ಎಲ್ಲೆಡೆ ಕ್ಯೂ ನಿಲ್ಲುತ್ತಿದ್ದಾರೆ. ಸರ್ಕಾರ 1955 ರಲ್ಲಿ ಅವಶ್ಯಕ ವಸ್ತುಗಳ ದಾಸ್ತಾನು ಮಾಡಬಾರದು ಎಂಬ ಕಾಯಿದೆ ತಂದರೂ ಶ್ರೀಮಂತರು, ಹಣವಂತರು (Money) ದಾಸ್ತಾನು ಮಾಡುತ್ತಿದ್ದಾರೆ. ರೈತರ ಬಗ್ಗೆ ಕೇಂದ್ರ ಸರ್ಕಾರಕ್ಕೆ ಕಾಳಜಿ ಇಲ್ಲ. ಏನು ಮಾಡಿದರೂ ನಡೆಯುತ್ತದೆ ಎನ್ನುವ ಮನೋಭಾವನೆ ಬಿಜೆಪಿಯವರಲ್ಲಿದೆ. ಕೇಂದ್ರ ಸಚಿವರ ಪುತ್ರ ಕಾರ್‌ ಹಾಯಿಸಿ ರೈತರನ್ನು ಕೊಲೆ ಮಾಡಿದ್ದಾನೆ. ಆತನ ತಂದೆ ರಾಜೀನಾಮೆ ನೀಡಿಲ್ಲ. ಇಂಧನ ಬೆಲೆ ಏರಿದಾಗ ಬೀದಿಗೆ ಬರುತ್ತಿದ್ದ ಬಿಜೆಪಿಯವರು, ಇದೀಗ ಪೆಟ್ರೋಲ್‌- ಡೀಸೆಲ್‌ (Petrol Diesel) ಬೆಲೆ ನೂರರ ಗಡಿ ದಾಟಿದ್ದರೂ ಎಲ್ಲಿ ಹೋಗಿದ್ದಾರೆ ಎಂದು ಖರ್ಗೆ ಪ್ರಶ್ನಿಸಿದರು.

ರಾಜ್ಯಕ್ಕೆ ಜಿಎಸ್‌ಟಿ (GST) ಪಾಲಿನ .20 ಸಾವಿರ ಕೋಟಿಗೂ ಅಧಿಕ ಹಣ ಬರಬೇಕು. ಈ ಬಗ್ಗೆ ಯಾರೂ ಕೇಳುವವರಿಲ್ಲ. ಜನರಿಂದ ಸುಲಿಗೆ ಮಾಡಿದ ಹಣ ಸಮಯಕ್ಕೆ ಸರಿಯಾಗಿ ಬರಬೇಕು. ಅದು ಬರದೇ ಇದ್ದರೆ ಯಾವ ರೀತಿಯ ಅಭಿವೃದ್ಧಿ ಆಗುತ್ತದೆ ಎಂದು ಪ್ರಶ್ನಿಸಿದರು.

ಉಪ ಚುನಾವಣೆಯಲ್ಲಿ ಹಣದ ಹೊಳೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಇದು ಬಿಜೆಪಿ ಹಾಗೂ ಅಮಿತ್‌ ಶಾ ಅವರಿಗೆ ಗೊತ್ತಿದೆ. ಚುನಾವಣೆ ಬಂದರೆ ಇಡಿ, ಸಿಬಿಐ, ಆದಾಯ ತೆರಿಗೆ ಹೇಗೆ ಬಳಸಿಕೊಳ್ಳಬೇಕು ಎಂದು ಅವರಿಗೆ ತಿಳಿದಿದೆ ಎಂದು ವ್ಯಂಗ್ಯವಾಡಿದರು.

ರಾಜ್ಯದಲ್ಲಿ ದಲಿತ ಸಿಎಂ ವಿಚಾರ: ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯೆ

ರಾಜಕಾರಣಿಗಳು ವೈಯಕ್ತಿಕ ನಿಂದನೆಯಲ್ಲಿ ತೊಡಗಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ವಿಚಾರಧಾರೆಗಳು, ಕೆಲಸ ಕಾರ್ಯಗಳ ಮೇಲೆ ಚುನಾವಣೆ ನಡೆಯಬೇಕು ಎಂದರು. ಎರಡೂ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲ್ಲಲ್ಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು ಮಲ್ಲಿಕಾರ್ಜುನ ಖರ್ಗೆ

ಖರ್ಗೆ, ಪರಂ ಕಣ್ಣೀರಿನಿಂದ ಕಾಂಗ್ರೆಸ್‌ ಸರ್ವನಾಶ: ಕಟೀಲ್‌

 ಬಿ.ಎಸ್‌.ಯಡಿಯೂರಪ್ಪ (BS Yediyurappa) ಅವರು ಹಾಕಿದ ಕಣ್ಣೀರಿನಲ್ಲಿ ಬಿಜೆಪಿ ಕೊಚ್ಚಿಕೊಂಡು ಹೋಗುತ್ತದೆ ಎಂಬ ಡಿಕೆಶಿ ಹೇಳಿಕೆಗೆ ತೀಕ್ಷ$್ಣ ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌, ಕಾಂಗ್ರೆಸ್‌ ಪಕ್ಷದಲ್ಲಿ ಮುಖ್ಯಮಂತ್ರಿ ಮಾಡಲಿಲ್ಲ ಎಂಬ ನೋವಿನಲ್ಲಿ ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಮಾಜಿ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್‌ ಅವರು ಹಾಕಿದ ಕಣ್ಣೀರಿನಿಂದ ಕಾಂಗ್ರೆಸ್‌ ಪಕ್ಷ ಸರ್ವನಾಶವಾಗಲಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಬಾಗಲಕೋಟೆ ಮತ್ತು ವಿಜಯಪುರದಲ್ಲಿ ಮಾತನಾಡಿದ ಅವರು, ಗೋಣಿಚೀಲದಿಂದ ಹಣ ತಂದು ಬಿಜೆಪಿ ಚುನಾವಣೆ ಗೆಲ್ಲಲು ಹೊರಟಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಆರೋಪಕ್ಕೆ ತಿರುಗೇಟು ನೀಡಿದ ಕಟೀಲ್‌, ನಾವು ಯಾರಿಗೂ ಟೀಕೆ ಮಾಡುತ್ತಿಲ್ಲ. ಉತ್ತರ ಕೊಡುತ್ತಿದ್ದೇವೆ. ಅಭಿವೃದ್ಧಿ ಮತ್ತು ಯೋಜನೆಗಳ ಬಗ್ಗೆ ಮಾತ್ರ ನಾವು ಹೇಳುತ್ತಿದ್ದೇವೆ ಎಂದರು.

click me!