
ತುಮಕೂರು, (19): ಎಲ್ಲಾ ಸ್ವಾಮೀಜಿಗಳನ್ನು ಸೇರಿಸಿ ಅವರನ್ನೇ ಎಂಎಲ್‌ಎ, ಮಂತ್ರಿಯನ್ನಾಗಿ ಮಾಡಿಬಿಡಬೇಕು ಎಂದು ಕಾಂಗ್ರೆಸ್ ಮುಖಂಡ ಕೆ.ಎನ್.ರಾಜಣ್ಣ ವಾಗ್ದಾಳಿ ನಡೆಸಿದ್ದಾರೆ.
ಮೀಸಲಾತಿಗಾಗಿ ಸ್ವಾಮೀಜಿಗಳ ಹೋರಾಟ ವಿಚಾರಕ್ಕೆ ಸಂಬಂಧಿಸಿ ಮಾಧ್ಯಮಗಳ ಎದುರು ಗುಡುಗಿದ ರಾಜಣ್ಣ, ಈ ಸಮಸ್ಯೆ ಸರಿಹೋಗಬೇಕು ಅಂದರೆ ಎಲ್ಲಾ ಸ್ವಾಮೀಗಳು ಎಂಎಲ್‌ಎ, ಸಿಎಂ ಆಗಿಬಿಡಬೇಕು. ಆಗ ಸಮಸ್ಯೆ ಬಗೆಹರಿಯಬಹುದಷ್ಟೇ. ಇಲ್ಲಾ ಅಂದ್ರೆ ಇದು ನೆವರ್ ಎಂಡಿಂಗ್ ಪ್ರಾಬ್ಲಂ ಎಂದರು.
ಗೌಡ ಲಿಂಗಾಯತ ಸ್ವಾಮೀಜಿಗಳು ಕಾಂಜಿ ಪಿಂಜಿಗಳು ಎಂದ ವಚನಾನಂದ ಶ್ರೀ
ಕುಂಬಾರರು, ಮಡಿವಾಳರು ಈ ರೀತಿಯವರು ಮೀಸಲಾತಿ ಕೇಳಿದ್ರೇ ಪರವಾಗಿಲ್ಲ. ತಳಸಮುದಾಯದ ಶೋಷಿತರು ಮೀಸಲಾತಿ ಕೇಳೋದ್ರಲ್ಲಿ ಅರ್ಥ ಇದೆ. ಲಿಂಗಾಯತರು 2-ಎಗೆ ಬಂದರೆ ಕುರುಬರೆಲ್ಲ ಸತ್ತುಹೋಗುತ್ತಾರೆ. 2ಎನಲ್ಲಿ ಹೆಚ್ಚು ಫಲಾನುಭವಿಗಳು ಕುರುಬರೇ ಇರೋದು. ಅವರೇನಾದರೂ 2Aಗೆ ಬಂದರೆ ಕುರುಬರನ್ನ ಸಾಯಿಸಿ ಬಿಡುತ್ತಾರೆ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.