ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯರನ್ನು ಕೋಲಾರಕ್ಕೆ ಆಹ್ವಾನಿಸಿದ್ದೇವೆ, ಅವರು ನಮ್ಮ ನಾಯಕರು. ಸಿದ್ದರಾಮಯ್ಯ ಕೋಲಾರಕ್ಕೆ ಬಂದರೆ ಸ್ವಾಗತಿಸುತ್ತೇವೆ. ರಾಜ್ಯದ ಯಾವುದೇ ಭಾಗದಲ್ಲಿ ಬೇಕಾದರೂ ಸ್ಪರ್ಧಿಸುವ ಅರ್ಹತೆ ಅವರಿಗೆ ಇದೆ.
ಕೋಲಾರ (ಜ.05): ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯರನ್ನು ಕೋಲಾರಕ್ಕೆ ಆಹ್ವಾನಿಸಿದ್ದೇವೆ, ಅವರು ನಮ್ಮ ನಾಯಕರು. ಸಿದ್ದರಾಮಯ್ಯ ಕೋಲಾರಕ್ಕೆ ಬಂದರೆ ಸ್ವಾಗತಿಸುತ್ತೇವೆ. ರಾಜ್ಯದ ಯಾವುದೇ ಭಾಗದಲ್ಲಿ ಬೇಕಾದರೂ ಸ್ಪರ್ಧಿಸುವ ಅರ್ಹತೆ ಅವರಿಗೆ ಇದೆ. ಅವರು ಕಾಂಗ್ರೆಸ್ ಪಕ್ಷದ ಪ್ರೋಟೋಕಾಲ್‌ನಲ್ಲಿ ಇರುವವರು ಎಂದು ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ತಿಳಿಸಿದರು. ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಹೈಕಮಾಂಡ್ ಸೂಚಿಸುವ ಕೆಲಸ ಮಾಡುತ್ತೇನೆ, ಎಲ್ಲಿ ಅರ್ಜಿ ಹಾಕಬೇಕೆಂದರೆ ಅಲ್ಲಿ ಹಾಕುತ್ತೇನೆ. ರಾಜ್ಯದ ರಾಜಕಾರಣಕ್ಕೆ ಬರಲು ನಿರ್ಧರಿಸಿಲ್ಲ. ಹೈಕಮಾಂಡ್ ಸೂಚಿಸಿದರೆ ಮಾತ್ರ ಅರ್ಜಿ ಹಾಕುತ್ತೇನೆ, ದೊಡ್ಡಬಳ್ಳಾಪುರದಲ್ಲಿ ನಾನು ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಜಿಲ್ಲೆಯಲ್ಲಿ ಭಿನ್ನಮತ ಬಿಟ್ಟು ಒಂದಾಗುತ್ತೇವೆ: ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಶೀಘ್ರದಲ್ಲೇ ಭರ್ತಿ ಮಾಡಲಾಗುವುದು. ಜಿಲ್ಲೆಯಲ್ಲಿ ಭಿನ್ನಮತ ಮರೆತು ಎಲ್ಲರೂ ಒಗ್ಗಟ್ಟಾಗಿ ಹೋಗಲು ನಿರ್ಧರಿಸಿದ್ದೇವೆ, ಈ ಪತ್ರಿಕಾಗೋಷ್ಠಿಗೆ ನಾನು ಯಾವ ಶಾಸಕರನ್ನು ಆಹ್ವಾನಿಸಿಲ್ಲ. ಹಾಗಾಗಿ ಯಾರೂ ಬಂದಿಲ್ಲ, ಸಿದ್ದರಾಮಯ್ಯ ಜ.9ರಂದು ಕೋಲಾರಕ್ಕೆ ಬಂದಾಗ ನಿಮ್ಮ ಪ್ರಶ್ನೆಗಳಿಗೆ ಅವರೇ ಸ್ಪಷ್ಟಪಡಿಸಲಿದ್ದಾರೆ ಎಂದರು. ಅಂಬೇಡ್ಕರ್‌ರನ್ನು ಕಾಂಗ್ರೆಸ್ ಪಕ್ಷವು ಸರಿಯಾಗಿ ನಡೆಸಿಕೊಳ್ಳಲಿಲ್ಲ ಎಂಬುವುದು ವಿರೋಧ ಪಕ್ಷವು ಮಾಡುತ್ತಿರುವ ಅರ್ಥವಿಲ್ಲದ ಅರೋಪ, ಭಾರತದ ಸ್ವಾತಂತ್ರ್ಯಕ್ಕಾಗಿ ಎಲ್ಲಾ ಧರ್ಮ-ಜಾತಿಗಳ ಶ್ರಮವಿದೆ. ಇದನ್ನು ಬೇರ್ಪಡಿಸಿ ರಾಜಕೀಯ ಮಾಡಲು ಸಂಚು ರೂಪಿಸುತ್ತಿರುವುದು ದುರಂತದ ವಿಷಯ ಎಂದು ಬಿಜೆಪಿ ಆರೋಪಗಳಿಗೆ ತಿರುಗೇಟು ನೀಡಿದರು.
ಕಾಂಗ್ರೆಸ್ ಬೆಳಗುತ್ತಿದ್ದರೆ, ಬಿಜೆಪಿ ಮುಳುಗುತ್ತಿದೆ: ಡಿ.ಕೆ.ಶಿವಕುಮಾರ್
ಸಿದ್ದರಾಮಯ್ಯ ಪಕ್ಷದ ಹೈಕಮಾಂಡ್: ಸಿದ್ದರಾಮಯ್ಯ ರಾಜ್ಯದಲ್ಲಿ ನಮ್ಮ ಪಕ್ಷದ ಹೈಕಮಾಂಡ್. ಅವರು ಎಲ್ಲಿ ಬೇಕಾದರೂ ಸ್ಪರ್ಧಿಸಬಹುದು ಅಥವಾ ಬೇರೆಯವರಿಗೆ ಟಿಕೆಟ್ ಕೊಡಬಹುದು, ನಾವುಗಳು ಏನಿದ್ದರೂ ಪಕ್ಷದ ಶಿಸ್ತಿನ ಸಿಪಾಯಿಗಳಾಷ್ಟೆ. ಪಕ್ಷವನ್ನು ಬಿಟ್ಟು ಹೋಗಿರುವವರ ಬಗ್ಗೆ ಬೆಸುಗೆ ಹಾಕಲು ಮಾಲೂರಿನಲ್ಲಿ ಪ್ರಯತ್ನಿಸಿದೆ. ಎಲ್ಲರೂ ಒಗ್ಗಟ್ಟಿನಿಂದ ಹೋದಾಗ ಯಶಸ್ಸು ಸುಲಭವಾಗಲಿದೆ, ಮಾಲೂರು ಶಾಸಕ ನಂಜೇಗೌಡ ಮತ್ತು ಮಾಜಿ ಶಾಸಕ ಎ.ನಾಗರಾಜ್ ಅವರದ್ದು ಗುರು-ಶಿಷ್ಯರ ಸಂಬಂಧ ಎಂದು ಹೇಳಿದರು.
ಲವ್ ಜಿಹಾದ್: ನಳಿನ್ ಕಟೀಲ್ ಹೇಳಿಕೆಗೆ ಕಾಂಗ್ರೆಸ್ ಕಿಡಿ
ಕಾಂಗ್ರೆಸ್ ಜಾತಿಗಳನ್ನು ಒಡೆದಿಲ್ಲ: ಕಾಂಗ್ರೆಸ್ ಯಾವತ್ತೂ, ಎಂದಿಗೂ ಭಯೋತ್ಪಾಧನೆಯಂತಹ ಚಟುವಟಿಕೆಗಳಿಗೆ ಪ್ರೋತ್ಸಾಹಿಸುವುದಿಲ್ಲ. ಕಾಂಗ್ರೆಸ್ ಮಹಾತ್ಮಗಾಂಧಿ, ನೆಹರು, ಶಾಸ್ತಿ್ರ, ಅಂಬೇಡ್ಕರ್ ಸಂಘಟಿಸಿದ ಪಕ್ಷವಾಗಿದೆ. ಶಾಂತಿ, ಶಿಸ್ತು, ಸಮಾನತೆ, ಏಕತೆ, ಐಕ್ಯತೆಗಳು, ದೇಶಭಕ್ತಿ, ಸಂಘಟನೆಗೆ ಹೆಚ್ಚು ಆದ್ಯತೆ ನೀಡಿದಂತ ಪಕ್ಷವಾಗಿದೆ. ಕಾಂಗ್ರೆಸ್ ಅಧಿಕಾರಕ್ಕಾಗಿ ಜಾತಿ, ಜಾತಿಗಳನ್ನು ಒಡೆದು ಅಳುವಂತ ಕೆಲಸ ಎಂದಿಗೂ ಮಾಡಿಲ್ಲ. ಮಾಡುವುದಿಲ್ಲ. ನಮ್ಮಲ್ಲಿ ಮೂಲ ಕಾಂಗ್ರೆಸ್-ಹೊಸಬರು ಹಳಬರು ಯಾರೂ ಇಲ್ಲ ಎಲ್ಲರೂ ಒಟ್ಟಿಗೆ ಹೋಗುತ್ತೇವೆ. ಕಾಂಗ್ರೆಸ್‌ನಲ್ಲಿ ಅಭ್ಯರ್ಥಿಗಳು ಒಬ್ಬರೇ ಇರುತ್ತಾರೆ. ಪರ್ಯಾಯ ಅಭ್ಯರ್ಥಿಗಳು ಇರುವುದಿಲ್ಲ ಎಂದು ಹೇಳಿದರು.