ರಾಷ್ಟ್ರ ರಾಜಕಾರಣದಲ್ಲಿ ಬದಲಾವಣೆ ಸನ್ನಿಹಿತ: ಎಚ್‌.ಡಿ.ದೇವೆಗೌಡ

By Govindaraj SFirst Published Jan 5, 2023, 11:29 AM IST
Highlights

ರಾಷ್ಟ್ರ ರಾಜಕಾರಣದಲ್ಲಿ ಬದಲಾವಣೆ ಆಗುವ ದಿನಗಳು ಸನಿಹವಾಗಿವೆ. ಗೌಡ ಬದುಕಿದ್ದಾನೆ. ಏನ್ನನಾದರೂ ಮಾಡುತ್ತಾನೆ ಎನ್ನುವಷ್ಟರ ಮಟ್ಟಿಗೆ ವಿರೋಧಿ​ಗಳು ಯೋಚನೆ ಮಾಡುತ್ತಾರೆ ಎಂದಾದರೇ ಅದಕ್ಕೆ ಶಕ್ತಿ ನೀಡಿದವರು ಜಿಲ್ಲೆಯ ಜನತೆ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೆಗೌಡ ಹೇಳಿದರು.

ಚನ್ನರಾಯಪಟ್ಟಣ (ಜ.05): ರಾಷ್ಟ್ರ ರಾಜಕಾರಣದಲ್ಲಿ ಬದಲಾವಣೆ ಆಗುವ ದಿನಗಳು ಸನಿಹವಾಗಿವೆ. ಗೌಡ ಬದುಕಿದ್ದಾನೆ. ಏನ್ನನಾದರೂ ಮಾಡುತ್ತಾನೆ ಎನ್ನುವಷ್ಟರ ಮಟ್ಟಿಗೆ ವಿರೋಧಿ​ಗಳು ಯೋಚನೆ ಮಾಡುತ್ತಾರೆ ಎಂದಾದರೇ ಅದಕ್ಕೆ ಶಕ್ತಿ ನೀಡಿದವರು ಜಿಲ್ಲೆಯ ಜನತೆ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೆಗೌಡ ಹೇಳಿದರು. ವಿಧಾನ ಪರಿಷತ್‌ ಸದಸ್ಯ ಡಾ.ಸೂರಜ್‌ ರೇವಣ್ಣ ಹುಟ್ಟುಹಬ್ಬದ ಪ್ರಯುಕ್ತ ಪಟ್ಟಣದ ಮಾಧ್ಯಮಿಕ ಶಾಲಾ ಆವರಣದಲ್ಲಿ ಆಯೋಜಿಸಿದ್ದ ಎರಡು ದಿನಗಳ ರಾಜ್ಯಮಟ್ಟದ ಕಬ್ಬಡಿ ಪಂದ್ಯಾವಳಿಯಲ್ಲಿ ಭಾಗಿಯಾಗಲು ಆಗಮಿಸಿ ಮಾತನಾಡಿದರು.

ಇಡೀ ದೇಶವೇ ಬಿಜೆಪಿ ಪಕ್ಷದ ಆಡಳಿತ ಕಾಣುತ್ತದೆ ಎಂಬ ಭ್ರಮೆಯಲ್ಲಿ ಬಿಜೆಪಿ ನಾಯಕರಿದ್ದಾರೆ. ದೇಶದಲ್ಲಿ ಬದಲಾವಣೆ ಆಗುವ ದಿನಗಳು ಹತ್ತಿರವಿದ್ದು, ಬಿಜೆಪಿಯೇತರ ಪಕ್ಷಗಳು ಧೃತಿಗೆಡುವ ಅವಶ್ಯಕತೆಯಿಲ್ಲ. ಇದಕ್ಕೆ ಮುಂದೆ ನಡೆಯುವ ಘಟನೆಗಳೇ ಸಾಕ್ಷಿಯಾಗಲಿವೆ ಎಂದರು. ರಾಜಕೀಯವಾಗಿ ನನಗೆ ಶಕ್ತಿ ನೀಡಿದ ಜಿಲ್ಲೆಯನ್ನು, ಜನರ ಪ್ರೀತಿಯನ್ನು ನಾನು ಎಂದಿಗೂ ಮರೆತಿಲ್ಲ ಎಂದು ಭಾವುಕರಾದರು.

ಅಮಿತ್‌ ಶಾ ಕಾರ್ಯವೈಖರಿಗೆ ಮಾಜಿ ಪ್ರಧಾನಿ ದೇವೇಗೌಡ ಮೆಚ್ಚುಗೆ

ರೈತರಿಗಾಗಿ ಜೀವನ ಮುಡಿಪಾಗಿಟ್ಟಏಕೈಕ ಪ್ರಧಾನಿ ದೇವೇಗೌಡರು: ದೇಶದಲ್ಲಿ ರೈತರಿಗಾಗಿ ಜೀವನವನ್ನು ಮುಡಿಪಾಗಿಟ್ಟಏಕೈಕ ಪ್ರಧಾನಮಂತ್ರಿ ಎಂದರೆ ಅದು ದೇವೇಗೌಡರು ಮಾತ್ರ ಎಂದು ರಾಜ್ಯ ಜೆಡಿಎಸ್‌ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಹೇಳಿದರು. ಪಿರಿಯಾಪಟ್ಟಣ ತಾಲೂಕಿನ ಬಮ ಅಂಬಲಾರೆ ಗ್ರಾಮದಲ್ಲಿ ಪಿರಿಯಾಪಟ್ಟಣ ತಾಲೂಕು ಜೆಡಿಎಸ್‌ ಯುವ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಯುವ ಚೈತನ್ಯ ಯಾತ್ರೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರೈತರು ಜನಸಾಮಾನ್ಯರ ಬಗ್ಗೆ ಸದಾ ಚಿಂತಿಸುವ ಎಚ್‌.ಡಿ. ಕುಮಾರಸ್ವಾಮಿ ಅವರನ್ನು ಬೆಂಬಲಿಸಿ ಜೆಡಿಎಸ್‌ನ್ನು ಅಧಿಕಾರಕ್ಕೆ ತರಬೇಕು ಎಂದು ಹೇಳಿದರು. ಶಾಸಕ ಕೆ. ಮಹದೇವ್‌ ಮಾತನಾಡಿ, ರೈತರಿಗೆ ಏನಾದರೂ ಅನುಕೂಲವಾಗಬೇಕಾದರೆ 2023ರ ಚುನಾವಣೆಯಲ್ಲಿ ಜೆಡಿಎಸ್‌ ಅಧಿಕಾರಕ್ಕೆ ಬರಬೇಕು, ಇಲ್ಲದಿದ್ದರೆ ರೈತರ ಉಳಿವಿಗೆ ಕಷ್ಟವಾಗಲಿದೆ, ರಾಷ್ಟ್ರೀಯ ಪಕ್ಷಗಳು ರೈತರು, ಜನಸಾಮಾನ್ಯರನ್ನು ಶೋಷಣೆ ಮಾಡಲಿವೆ ಎಂದು ಎಚ್ಚರಿಸಿದರು. ಜಿ.ಡಿ. ಹರೀಶ್‌ಗೌಡ ಮಾತನಾಡಿ, ಪಿರಿಯಾಪಟ್ಟಣ ತಾಲೂಕಿನಲ್ಲಿ ಶಾಸಕ ಕೆ. ಮಹದೇವ್‌ ಮನುಷ್ಯನಿಗೆ ಅಗತ್ಯವಾಗಿ ಬೇಕಾಗಿರುವ ರಸ್ತೆ, ಶಿಕ್ಷಣ, ನೀರಾವರಿ ಯೋಜನೆಗೆ ಹೆಚ್ಚು ಮಹತ್ವ ನೀಡಿರುವುದನ್ನು ಮತದಾರರು ಗಮನಿಸಬೇಕು. ಯುವಕರು ಚಿಂತಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ಟಿಕೆಟ್‌ ನಿರ್ಧಾರ ಜನರದ್ದು, ಬಿ ಫಾರ್ಮ್‌ ನಿರ್ಧಾರ ನನ್ನದು: ಎಚ್‌.ಡಿ.ದೇವೇಗೌಡ

ಬೆಟ್ಟದಪುರ ಟೋಲ್‌ಗೇಟ್‌ನಿಂದ ಹಂಬಲಾರೆ ಗ್ರಾಮದವರೆಗೆ ಸಾವಿರಾರು ಕಾರ್ಯಕರ್ತರೊಂದಿಗೆ ಬೈಕ್‌ ರಾರ‍ಯಲಿಯಲ್ಲಿ ಪಾಲ್ಗೊಂಡಿದ್ದರು. ಮೈಮುಲ್‌ ಅಧ್ಯಕ್ಷ ಪಿ.ಎಂ. ಪ್ರಸನ್ನ, ಜಿಪಂ ಮಾಜಿ ಸದಸ್ಯ ಮಂಜುನಾಥ್‌, ಜೆಡಿಎಸ್‌ ತಾಲೂಕು ಘಟಕದ ಅಧ್ಯಕ್ಷ ಅಣ್ಣಯ್ಯಶೆಟ್ಟಿ, ರಾಜ್ಯ ವಕ್ತಾರೆ ನಜ್ಮಾ ನಜೀರ್‌, ಗ್ರಾಪಂ ಅಧ್ಯಕ್ಷೆ ರವಿನಾ, ಮುಖಂಡರಾದ ಸುಮಿತ್ರಾ, ಶಂಕರೇಗೌಡ, ನಾಗಯ್ಯ, ಐಲಾಪುರ ರಾಮು, ಬಿ.ಜೆ. ದೇವರಾಜು, ಗೋವಿಂದೆಗೌಡ, ಗಗನ್‌, ಅತ್ತರ್‌ ಮತೀನ್‌, ಹೇಮಂತ್‌, ನಾಗರಾಜು, ಜವರಪ್ಪ, ಕುಲ್‌, ಸೋಮಶೇಖರ್‌, ವಿದ್ಯಾಶಂಕರ್‌, ಮಣಿ, ಪ್ರೀತಿ ಅರಸ್‌, ನಾಗೇಂದ್ರ, ಮೈಲಾರಪ್ಪ, ಯಶಸ್‌ಗೌಡ, ಅಣ್ಣೆಗೌಡ, ತಾಲೂಕಿನ ವಿವಿಧಡೆಯಿಂದ ಆಗಮಿಸಿದ ಪಕ್ಷದ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಇದ್ದರು.

click me!