
ಹುಬ್ಬಳ್ಳಿ(ಸೆ.08): ಇಂಡಿಯಾ ಘಟ್‌ಬಂಧನ್ ಒಗ್ಗಟು ನೋಡಿ ಬಿಜೆಪಿಯವರು ಭಯಗೊಂಡಿದ್ದಾರೆ. ಇಂಡಿಯಾ ವಿದೇಶದ್ದು ಎಂಬ ತಕರಾರು ಈಗ ಶುರುವಾಗಿದೆ. ‘ಇಂಡಿಯಾ’ ಹೆಸರು ಜನಪ್ರಿಯತೆ ಪಡೆಯುತ್ತಿದೆ ಎಂದು ಗೊತ್ತಾಗಿಯೇ ಹೀಗೆ ಹೆಸರು ಬದಲಾಯಿಸುತ್ತಿದ್ದಾರೆ. ಮೋದಿಯವರಿಗೆ 9 ವರ್ಷದ ಬಳಿಕ ‘ಭಾರತ’ ನೆನಪಾಗಿದೆ ಎಂದು ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ನಾಯಕ ಜಗದೀಶ್ ಶೆಟ್ಟರ್ ವ್ಯಂಗ್ಯವಾಡಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಬಿಜೆಪಿಯವರಿಗೆ ಭಾರತ ಎನ್ನುವುದು ಈಗೇಕೆ ನೆನಪಾಯಿತು? ಪ್ರಧಾನಿ ಮೋದಿ ಅವರದ್ದು ಇದು 2ನೇ ಅವಧಿ. ಕೇವಲ ರಾಜಕೀಯಕ್ಕಾಗಿ ಹೀಗೆ ಮಾಡುತ್ತಿದ್ದಾರೆ. ಇಂಡಿಯಾ ಡಿಬೇಟ್ ಶುರು ಮಾಡಿದ್ದು ಮೊದಲು ಎನ್‌ಡಿಎನವರು ಎಂಬ ಅರಿವು ಇರಲಿ ಎಂದರು.
ಶೆಟ್ಟರ್ ಪಕ್ಷ ಬಿಡುವಾಗ ಸಮಾಜವನ್ನು ಕೇಳಿದ್ದಾರೆಯೇ?: ಶಾಸಕ ಮಹೇಶ ಟೆಂಗಿನಕಾಯಿ
ವೈಯಕ್ತಿಕ ಹೇಳಿಕೆ:
ಉದಯನಿಧಿ ಹೇಳಿಕೆ ವೈಯಕ್ತಿಕವಾದದ್ದು. ಸನಾತನ ವಿಚಾರವನ್ನು ಗಟ್ಟಿಯಾಗಿ ಮಾತಾಡಲು ಮೋದಿಯವರೇ ಹೇಳಿದ್ದಾರೆ. ಯಾವುದೇ ಕೆಲಸ ಮಾಡದೇ ಇದ್ದಾಗ ಇಂತಹ ಭಾವನಾತ್ಮಕ ವಿಷಯ ಮುನ್ನೆಲೆಗೆ ಬರುತ್ತವೆ ಎಂದರು.
ಇನ್ನು ಪ್ರಶ್ನೆಯೊಂದಕ್ಕೆ ಉತ್ತರಿಸಿ, ಒಂದೇ ದಿನ ಚುನಾವಣೆ ನಡೆದರೆ ಒಳ್ಳೆಯದು. ಆದರೆ, ಅದು ಈಗ ಆಗುತ್ತಿಲ್ಲ. ಒಮ್ಮೆಲೇ ಚುನಾವಣೆ ಆಗಬೇಕೆಂದರೆ ಈಗ ಆಡಳಿತದಲ್ಲಿರುವ ಕರ್ನಾಟಕ ಸರ್ಕಾರ ವಿಸರ್ಜಿಸಬೇಕಾ? ಇದೆಲ್ಲ ಆಗದ ಮಾತು ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.