ಅಭಿವೃದ್ಧಿ ಅಲ್ಲ, ಭಾವನಾತ್ಮಕ ವಿಷಯದಿಂದ ಚುನಾವಣೆ ಗೆಲ್ಲುವ ತಂತ್ರ ಬಿಜೆಪಿಯದ್ದು: ದರ್ಶನಾಪೂರ

By Kannadaprabha News  |  First Published Sep 7, 2023, 11:00 PM IST

ಬೆಲೆ ಏರಿಕೆ, ಗ್ಯಾಸ್, ಎಣ್ಣೆಕಾಳು ಮತ್ತಿತರ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಚುನಾವಣೆ ಪೂರ್ವದಿಂದಲೂ ಈ ಸ್ಥಿತಿ ನೋಡುತ್ತಿದ್ದೇವೆ. ಅದಕ್ಕಾಗಿಯೇ ರೈತರ ಜೀವನ ಮೇಲೆತ್ತಲು ನಮ್ಮ ಸರ್ಕಾರ ಐದು ಗ್ಯಾರಂಟಿಗಳನ್ನು ಜಾರಿಗೊಳಿಸುತ್ತಿದೆ: ಸಚಿವ ಶರಣಬಸಪ್ಪ ದರ್ಶನಾಪೂರ 


ವಿಜಯಪುರ(ಸೆ.07):  ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣೆ ಸಂದರ್ಭದಲ್ಲಿ ಸಾಧನೆ ಮುಂದಿಟ್ಟುಕೊಂಡು ಚುನಾವಣೆ ಎದುರಿಸಿಲ್ಲ. ಜನರ ಭಾವನಾತ್ಮಕ ವಿಷಯಗಳನ್ನು ಕೆರಳಿಸಿ ಚುನಾವಣೆ ಗೆಲ್ಲುವುದು ಅವರ ತಂತ್ರವಾಗಿದೆ ಎಂದು ಸಣ್ಣ ಕೈಗಾರಿಕೆ ಸಚಿವ ಶರಣಬಸಪ್ಪ ದರ್ಶನಾಪೂರ ಅವರು ಹೇಳಿದರು. ಬುಧವಾರ ನಗರದ ಸ್ಫೂರ್ತಿ ರೆಸಾರ್ಟ್ ನಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿ, ಇಂಡಿಯಾ ಬದಲು ಭಾರತ ಎಂದು ಹೆಸರು ಬದಲಾವಣೆ ಮಾಡುವ ವಿಚಾರವಾಗಿ ಅವರು ಪ್ರತಿಕ್ರಿಯೆ ನೀಡಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣೆ ಸಂದರ್ಭದಲ್ಲಿ ಎಂದೂ ಅಭಿವೃದ್ಧಿ ಪರ ಮಾತನಾಡಿಲ್ಲ. ಅಭಿವೃದ್ಧಿ ಮಾಡಿದ್ದೇವೆ. ಮತ ಹಾಕುವಂತೆ ಮತದಾರರಿಗೆ ಮನವಿ ಮಾಡಿಕೊಂಡಿಲ್ಲ. ಚುನಾವಣೆ ಕಾಲಕ್ಕೆ ಏನಾದರೂ ಒಂದು ಜನರ ಮನಸ್ಸು ಕೆದಕುವ ವಿಷಯ ತರುತ್ತಾರೆ ಎಂದರು.

Tap to resize

Latest Videos

ಬರ ಪರಿಸ್ಥಿತಿಯಲ್ಲಿ ವಿಜಯಪುರ ರೈತರಿಗೆ ಮತ್ತೊಂದು ಬರೆ: ಡ್ಯಾಂನಿಂದ ಕೆನಾಲ್‌ಗೆ ಬಿಟ್ಟರು ಜಮೀನು ಸೇರದ ನೀರು..!

ಹಿಂದೆ ರಾಮ ಮಂದಿರ ನಿರ್ಮಾಣ ವಿಚಾರ ತಂದರು. ಆಗ ಯಾರೂ ಬೇಡ ಎನ್ನಲಿಲ್ಲ. ಈಗ ಮತ್ತೆ ಜನರ ಭಾವನೆಗಳನ್ನು ಕೆರಳಿಸಲು ಇಂಡಿಯಾ ಹೆಸರು ಬದಲಿಸಿ ಭಾರತ ಮಾಡಲು ಹೊರಟಿದ್ದಾರೆ ಎಂದು ಟೀಕಿಸಿದರು.
ಜನರ ಭಾವನೆಗಳನ್ನು ಕೆರಳಿಸಿ ದೇಶದ ಜನರನ್ನು ಒಡೆದು ಆಳುತ್ತಿದ್ದಾರೆ. ಇದರಿಂದ ಏನು ಸಾಧಿಸುತ್ತಾರೆಯೋ ಗೊತ್ತಿಲ್ಲ. ನಾವು ಅಭಿವೃದ್ಧಿ ಮಾಡಿದ್ದೇವೆ ಎಂದು ಜನರ ಮುಂದೆ ಹೋದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದರು.

ನಮ್ಮಲ್ಲಿ ಕಲ್ಯಾಣ ಕರ್ನಾಟಕ ಎಂದು ಹೆಸರು ಬದಲಾವಣೆ ಮಾಡಿದ್ದಾರೆ. ಅದರಿಂದ ಜನರ ಮನಸ್ಥಿತಿ ಬದಲಾಗಲಿಲ್ಲ. ಹೆಸರು ಮುಖ್ಯವಲ್ಲ. ಕೆಲಸದ ಮೂಲಕ ಬದಲಾವಣೆ ಮಾಡಿ ತೋರಿಸಬೇಕು ಎಂದು ಹೇಳಿದರು.

ಪರಿಹಾರಕ್ಕಾಗಿ ರೈತರು ಆತ್ಮಹತ್ಚೆ ಮಾಡಿಕೊಳ್ಳುತ್ತಾರೆ ಎಂಬ ಸಚಿವ ಶಿವಾನಂದ ಪಾಟೀಲ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಪರಿಹಾರಕ್ಕಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂಬುವುದು ತಪ್ಪು. ರೈತರು ಬೇರೆ ಸಮಸ್ಯೆಗಳಿಂದ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಸಂಗ ಬಂದಿರುತ್ತದೆ. ಒಮ್ಮೆ ಜೀವ ಹೋದರೆ ಮರಳಿ ಬರುವುದಿಲ್ಲ ಎಂದರು.

ಲೋಕಸಭೆ ಚುನಾವಣೆ 2024: ಎಂ.ಬಿ.ಪಾಟೀಲಲ್‌ಗೆ ನನ್ನ ಟಿಕೆಟ್‌ ಬಗ್ಗೆ ಚಿಂತೆ ಬೇಡ, ಜಿಗಜಿಣಗಿ

ಬೆಲೆ ಏರಿಕೆ, ಗ್ಯಾಸ್, ಎಣ್ಣೆಕಾಳು ಮತ್ತಿತರ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಚುನಾವಣೆ ಪೂರ್ವದಿಂದಲೂ ಈ ಸ್ಥಿತಿ ನೋಡುತ್ತಿದ್ದೇವೆ. ಅದಕ್ಕಾಗಿಯೇ ರೈತರ ಜೀವನ ಮೇಲೆತ್ತಲು ನಮ್ಮ ಸರ್ಕಾರ ಐದು ಗ್ಯಾರಂಟಿಗಳನ್ನು ಜಾರಿಗೊಳಿಸುತ್ತಿದೆ ಎಂದು ಹೇಳಿದರು.

ಹಿಂದೂ ಧರ್ಮದ ಹುಟ್ಟಿನ ಬಗ್ಗೆ ಸಚಿವ ಜಿ. ಪರಮೇಶ್ವರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಸಚಿವ ದರ್ಶನಾಪೂರ ಅವರು, ಈ ಬಗ್ಗೆ ಪರಮೇಶ್ವರ ಅವರನ್ನೇ ಕೇಳಿ ಎಂದರು.

click me!