ಬಿಜೆಪಿ ಸರ್ಕಾರ ಸುಳ್ಳು ಭರವಸೆ ನೀಡಿ ಜನರನ್ನು ಸಂಕಷ್ಟಕ್ಕೆ ದೂಡಿದೆ: ಎಚ್‌.ಕೆ. ಪಾಟೀಲ್‌

By Kannadaprabha NewsFirst Published Aug 28, 2022, 5:00 AM IST
Highlights

ಚುನಾ​ವಣೆ ಸಂದ​ರ್ಭ​ದ​ಲ್ಲಿ ನಿಮ್ಮ ಮುಂದೆ ಬಂದು 100 ದಿವಸದೊಳಗೆ ಪ್ರತಿ​ಯೊ​ಬ್ಬರ ಖಾತೆ​ಗೆ 15 ಲಕ್ಷ ಹಾಕುತ್ತೇವೆ. ಎಲ್ಲರೂ ಬ್ಯಾಂಕ್‌ ಖಾತೆ ತೆರೆಯಿರಿ ಎಂದರು. ಈವರೆಗೂ ಯಾರಿಗಾದರೂ ಒಂದು ನಯಾಪೈಸೆ ಬಂತಾ?: ಪಾಟೀಲ್‌

ಮುಳ​ಗುಂದ(ಆ.28): ದೇಶದ ಜನ​ತೆಗೆ ಚುನಾ​ವಣೆ ಸಂದ​ರ್ಭ​ಗ​ಳಲ್ಲಿ ರಾಜ್ಯ,​ ಕೇಂದ್ರ​ದ​ಲ್ಲಿ​ರುವ ಬಿಜೆಪಿ ಸರ್ಕಾರ ಸುಳ್ಳು ಭರ​ವ​ಸೆ​ಗ​ಳನ್ನು ನೀಡಿ ಬಡ, ಮಧ್ಯಮ ವರ್ಗದ ಜನ​ತೆ​ಯನ್ನು ಸಂಕ​ಷ್ಟಕ್ಕೆ ದೂಡಿದೆ. ದೇಶ​ವನ್ನು ಒಡೆದು ಆಳ್ವಿಕೆ ನಡೆ​ಸು​ತ್ತಿ​ರುವ ಬಿಜೆಪಿ ವಚನ ಭ್ರಷ್ಟಸರ್ಕಾ​ರ​ವಾ​ಗಿದೆ ಎಂದು ಶಾಸಕ ಎಚ್‌.​ಕೆ. ​ಪಾ​ಟೀಲ ಆರೋಪಿಸಿದರು. ಅವರು ಶನಿ​ವಾರ ಪಟ್ಟ​ಣದ ಬಾಲಲೀಲಾ ಮಹಾಂತ ಶಿವ​ಯೋ​ಗಿ​ಗಳ ಕಲಾ​ಭ​ವ​ನ​ದಲ್ಲಿ ಕೆಪಿಸಿಸಿ, ಜಿಲ್ಲಾ ಕಾಂಗ್ರೆಸ್‌ ಅಲ್ಪಸಂಖ್ಯಾತರ ಘಟಕದ ವತಿ​ಯಿಂದ ಆಯೋ​ಜಿ​ಸಿ​ದ್ದ ಮುಳಗುಂದ ಬ್ಲಾಕ್‌ ಅಲ್ಪ ಸಂಖ್ಯಾ​ತರ ಘಟ​ಕದ ನೂತ​ನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾ​ಟಿಸಿ ಮಾತ​ನಾ​ಡಿ​ದರು.

ಚುನಾ​ವಣೆ ಸಂದ​ರ್ಭ​ದ​ಲ್ಲಿ ನಿಮ್ಮ ಮುಂದೆ ಬಂದು 100 ದಿವಸದೊಳಗೆ ಪ್ರತಿ​ಯೊ​ಬ್ಬರ ಖಾತೆ​ಗೆ 15 ಲಕ್ಷ ಹಾಕುತ್ತೇವೆ. ಎಲ್ಲರೂ ಬ್ಯಾಂಕ್‌ ಖಾತೆ ತೆರೆಯಿರಿ ಎಂದರು. ಈವರೆಗೂ ಯಾರಿಗಾದರೂ ಒಂದು ನಯಾಪೈಸೆ ಬಂತಾ? ಬಡ​ವ​ರನ್ನು ಉದ್ಧಾರ ಮಾಡು​ತ್ತೇ​ವೆ, ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ ಎಂದರು. ಇಂದು ರೈತರು, ಬಡ​ವ​ರು ಜೀವನ ನಡೆಸೋದೆ ಕಷ್ಟಕರವಾಗಿದೆ. ತುಂಬಿದ ಬೆಳೆ ವಿಮಾ ಕಂತು ಸಹ ಬಂದಿಲ್ಲ. ಮಾತು ಎತ್ತಿದರೆ ಜಾತಿ, ಧರ್ಮ ಎಂದು ಮನಸ್ಸುಗಳನ್ನು ಒಡೆದು ಆಡಳಿತ ಮಾಡುತ್ತಿದ್ದಾರೆ ಎಂದು ಟೀಕಾಪ್ರಹಾರ ನಡೆಸಿದರು.

Latest Videos

40 % ಕಮಿಷನ್‌ ತನಿಖೆಯಾದರೆ ಸರ್ಕಾರದ ಬಹುಪಾಲು ಸಚಿವರು ಜೈಲಿಗೆ: ಉಗ್ರಪ್ಪ

ಮಾಜಿ ಪ್ರಧಾನಿ ಮನ​ಮೋ​ಹನ್‌ ಸಿಂಗ್‌ ಅವರು ತಮ್ಮ ಆಡಳಿತಾವಧಿಯಲ್ಲಿ 14 ಕೋಟಿ ಬಡಜನತೆಯನ್ನು ಬಡತನ ರೇಖೆಯಿಂದ ಮೇಲೆತ್ತಿದರು. ಬಿ​ಜೆ​ಪಿ ಆಡಳಿತದಲ್ಲಿ 25 ಕೋಟಿ ಜನರನ್ನು ಬಡತನ ರೇಖೆಗಿಂತ ಕೆಳಗೆ ದೂಡಿದ್ದಾರೆ. ಇದೇ ಅಚ್ಛೆ ದೀನ್‌ ಎಂದು ವ್ಯಂಗ್ಯವಾಡಿದರು.

ರಾಷ್ಟ್ರೀಯ ಭಾವನೆ ಬರಲಿ

ಇವತ್ತಿನದು ಕಲುಷಿತ ರಾಜಕಾರಣವಾಗಿದೆ. ಜಾತಿ ರಾಜಕಾರಣ ಬಿಟ್ಟು, ರಾಷ್ಟ್ರೀಯ ಭಾವನೆ ಇರಬೇಕು. ಇದೆಲ್ಲಾ ಆಗುತ್ತಾ? ಬಿಜೆಪಿ ಆಡಳಿತದಿಂದ ದೇಶದ ವಾತಾವರಣ ಕಲುಷಿತವಾಗಿದೆ. ದೇಶ​ದಲ್ಲಿ ಅಶಾಂತಿ​ ಸೃಷ್ಟಿಸಿ ಆಡ​ಳಿತ ನಡೆ​ಸು​ತ್ತಿ​ರುವ ಸರ್ಕಾ​ರಕ್ಕೆ ಮುಂದಿನ ದಿನ​ಮಾ​ನ​ಗ​ಳಲ್ಲಿ ಜನ​ರೇ ತಕ್ಕಪಾಠ ಕಲಿ​ಸು​ತ್ತಾ​ರೆ ಎಂದ​ರು.

ಇಂದು ನೂತ​ನ​ವಾಗಿ ನೇಮಕವಾದ ಪದಾ​ಧಿ​ಕಾ​ರಿ​ಗಳು ಕಾಂಗ್ರೆಸ್‌ ಬಗ್ಗೆ ಜನ​ರಲ್ಲಿ ತಿಳಿವಳಿಕೆ ನೀಡಬೇ​ಕು. ರಾಷ್ಟ್ರ ಕಟ್ಟುವ ಕೆಲಸಕ್ಕೆ ಎಲ್ಲರೂ ಕೈಜೋಡಿಸೋಣ. ಪಕ್ಷ ಸಂಘಟನೆಗೆ ಎಲ್ಲರೂ ಶ್ರಮಿಸೋಣ. ಮುಂಬ​ರುವ ಚುನಾ​ವ​ಣೆ​ಯಲ್ಲಿ ಕಾಂಗ್ರೆಸ್‌ ಆಡ​ಳಿ​ತಕ್ಕೆ ತರೋಣ ಎಂದು ಕರೆ ನೀಡಿ​ದ​ರು.

ಹೇಳಿ ಬಂದ ಯಡಿಯೂರಪ್ಪ, ತಿಂಗಳಿಗೊಮ್ಮೆ ಕರ್ನಾಟಕಕ್ಕೆ ಬರ್ತಾರಂತೆ ಮೋದಿ

ಮಾಜಿ ಸಂಸದ ಐ.ಜಿ. ಸನದಿ ಮಾತನಾಡಿ, ಸ್ವಾತಂತ್ರ್ಯ ಹೋರಾಟ ಸಂದರ್ಭದಲ್ಲಿ ನಮಗೆ ಜಾತಿ ಬರಲಿಲ್ಲ, ಅಲ್ಲಿ ರಾಷ್ಟ್ರಪ್ರೇಮ ಬಂತು. ಅನೇಕ ಮಹನೀಯರ ತ್ಯಾಗ ಬಲಿದಾನದಿಂದ ಭಾರತ ದೇಶ ಸ್ವಾತಂತ್ರ್ಯ​ವಾ​ಯಿ​ತು. ಅದರಲ್ಲಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್‌ ಇರಲಿಲ್ಲ, ಭಾರತೀಯರು ಇದ್ದರು. ಪ್ರಜಾಪ್ರಭುತ್ವ ಆಶಯಗಳನ್ನು ಗಾಳಿಗೆ ತೂರಿ ಆಡಳಿತ ನಡೆಸುತ್ತಿದ್ದಾರೆ. ಅಲ್ಪಸಂಖ್ಯಾತರ ಮತಗಳು ಇಂದು ಬೇಡ​ವಾ​ಗಿ​ದೆ. ಪ್ರಜಾ​ಪ್ರ​ಭು​ತ್ವದ ಆಶ​ಯ​ದಂತೆ ಆಡ​ಳಿತ ನಡೆ​ಸೋದು ಕಾಂಗ್ರೆಸ್‌. ಭಾರ​ತೀ​ಯ​ರೆ​ಲ್ಲರೂ ಒಂದೇ ಎನ್ನುವ ಭಾವನೆ ಎಲ್ಲ​ರ​ಲ್ಲಿಯೂ ಬರ​ಬೇಕು. ಅಂತಹ ಸೌಹಾ​ರ್ದ ಭಾವನೆ ಇರೋದು ಕಾಂಗ್ರೆಸ್‌ ಪಕ್ಷ​ದ​ಲ್ಲಿ ಎಂದರು.

ಈ ಸಂದ​ರ್ಭ​ದಲ್ಲಿ ಜಿಪಂ ಸದಸ್ಯ ವಾಸಣ್ಣ ಕುರುಡಗಿ, ಪಪಂ ಸದಸ್ಯ ಕೆ.ಎ​ಲ್‌. ​ಕ​ರಿ​ಗೌಡ್ರ ಮಾತನಾಡಿದರು. ಇದೇ ಸಂದರ್ಭದಲ್ಲಿ ಬಿಜೆಪಿ​ದಿಂದ ಮಹ್ಮದಸಾಬ ಕರ್ನಾಚಿ ಕಾಂಗ್ರೆ​ಸ್‌ಗೆ ಸೇರ್ಪಡೆಯಾದ​ರು.

ಈ ಸಂದ​ರ್ಭ​ದಲ್ಲಿ ಪಪಂ ಅಧ್ಯಕ್ಷ ಹೊನ್ನಪ್ಪ ಹಳ್ಳಿ, ಗದಗ ಜಿಲ್ಲಾ ಕಾಂಗ್ರೆಸ್‌ ಅಲ್ಪಸಂಖ್ಯಾತರ ಘಟಕದ ಜಿಲ್ಲಾ ಅಧ್ಯಕ್ಷ ಫಾರೂಕ್‌ ಹುಬ್ಬಳ್ಳಿ, ಮುಳ​ಗುಂದ ಬ್ಲಾಕ್‌ ಅಲ್ಪ​ಸಂಖ್ಯಾ​ತ​ರ ಘಟ​ಕ​ದ ಅ​ಧ್ಯಕ್ಷ ಮನಸ್ಸೂರ ಎಂ. ಹಣಗಿ, ಜಿಲ್ಲಾ ಯುವ ಕಾಂಗ್ರೆಸ್‌ ಘಟ​ಕದ ಅಧ್ಯಕ್ಷ ಅಶೋಕ ಮಂದಾಲಿ, ಮುಳ​ಗುಂದ ಬ್ಲಾಕ್‌ ಕಾಂಗ್ರೆಸ್‌ ಸಮಿ​ತಿ ಅಧ್ಯ​ಕ್ಷ ಬಸವರಾಜ ಸುಂಕಾಪುರ, ​ಪಪಂ ಸದ​ಸ್ಯ​ರಾದ ನಾಗರಾಜ ದೇಶಪಾಂಡೆ, ಷಣ್ಮು​ಖಪ್ಪ ಬಡ್ನಿ, ಮಹಾಂತಪ್ಪ ನೀಲ​ಗುಂದ, ಮಹಾ​ದೇ​ವಪ್ಪ ಗಡಾ​ದ, ಮುಖಂಡ​ರಾದ ಮಹ್ಮಮದ ಖಾಜಿ, ಇಮ್ಮಾಮಸಾಬ ಶೇಖ, ಎಂ.ಡಿ. ಬಟ್ಟೂರ, ಬಸವರಾಜ ವಾಲಿ, ಅಶೋಕ ಸೊನಗೋಜಿ, ಹಸನಸಾಬ ಗಾಡಿ, ಪಪಂ ಉಪಾ​ಧ್ಯ​ಕ್ಷೆ ಉಮಾ ಮಟ್ಟಿ, ಜಿಪಂ ಮಾಜಿ ಅಧ್ಯ​ಕ್ಷ​ ಸಿದ್ದು ಪಾಟೀಲ ಇದ್ದರು.
 

click me!