ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾ ಪ್ರಕರಣದ ತನಿಖೆ ಚುರುಕುಗೊಂಡಿರುವ ಮಧ್ಯೆ ಕಾಂಗ್ರೆಸ್ ಹಿರಿಯ ನಾಯಕರೊಬ್ಬರು ಹೊಸ ಬಾಂಬ್ ಸಿಡಿಸಿದ್ದಾರೆ.
ಗದಗ, (ಸೆ.05): ರಾಜಕಾರಣಿಗಳು ಮತ್ತು ಅಧಿಕಾರಿಗಳು ಸಹ ಈ ಡ್ರಗ್ಸ್ ಮಾಫಿಯಾ ಹಿಂದೆ ಅಡಗಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಎಚ್.ಕೆ. ಪಾಟೀಲ್ ಗಂಭೀರ ಆರೋಪ ಮಾಡಿದ್ದಾರೆ.
ಇಂದು (ಶನಿವಾರ) ಗದಗನಲ್ಲಿ ಮಾತನಾಡಿದ ಅವರು, ಡ್ರಗ್ಸ್ ಕೇವಲ ಸಿನಿಮಾದವರಿಗೆ ಮಾತ್ರ ಸೀಮಿತವಾಗಿಲ್ಲ. ಇದರ ಹಿಂದೆ ರೌಡಿ, ಅಧಿಕಾರಿಗಳು ಹಾಗೂ ರಾಜಕಾರಣಿಗಳು ಇದ್ದಾರೆ. ಇದರ ಹಿಂದೆ ಸರ್ಕಾರಿ ವ್ಯವಸ್ಥೆಯೂ ಕೈಜೋಡಿಸಿದ್ದಾರೆ ಎಂದು ಬಾಂಬ್ ಸಿಡಿಸಿದರು.
ಡ್ರಗ್ಸ್ ಮಾಫಿಯಾ ಗದ್ದಲದ ಮಧ್ಯೆ ಸಂಚಲನ ಮೂಡಿಸಿದ ಸಿದ್ದರಾಮಯ್ಯ ಪತ್ರ
ಈ ರೀತಿಯ ಚೈನ್ ಸಿಸ್ಟಮ್‌ಗೆ ಕಡಿವಾಣ ಹಾಕಲು ರಾಜಕೀಯ ಇಚ್ಛಾಶಕ್ತಿ ಬೇಕು. ಮುಖ್ಯಮಂತ್ರಿ, ಗೃಹ ಸಚಿವರುಕೈಗೊಳ್ಳುವ ಕ್ರಮಗಳು ಗಟ್ಟಿಯಾಬೇಕು. ಆರಂಭಗೊಂಡ ತನಿಖೆ ವೇಗವಾಗಿ ಪೂರ್ಣಗೊಳ್ಳಬೇಕು. ಯಾವುದೇ ಕಾರಣಕ್ಕೂ ತನಿಖೆ ಅರ್ಧಕ್ಕೆ ಕೈಬಿಡಬಾರದು ಎಂದು ಸಲಹೆ ನೀಡಿದರು.
ಡ್ರಗ್ಸ್ ದೊಡ್ಡ ಮಟ್ಟದಲ್ಲಿ ಬೆಳೆಯಲು ವ್ಯವಸ್ಥೆಯೇ ಕಾರಣ. ಇದನ್ನು ಮಟ್ಟಹಾಕಲು ವಿರೋಧ ಪಕ್ಷ ಕೈಜೋಡಸಲಿದೆ ಎಂದು ಹೇಳಿದರು.