ಕಾಂಗ್ರೆಸ್‌ ಬಗ್ಗೆ ಜಿ. ಪರಮೇಶ್ವರ್ ಬೇಸರ : ಅಗತ್ಯ ನಿರ್ಧಾರದ ಬಗ್ಗೆ ಮಾತನಾಡಿದ ನಾಯಕ

By Kannadaprabha News  |  First Published Dec 1, 2020, 9:29 AM IST

ಕಾಂಗ್ರೆಸ್ ಮುಖಂಡ ಪರಮೇಶ್ವರ್ ಪಕ್ಷದ ಮೇಲೆ ಅಸಮಾಧಾನ ಹೊರಹಾಕಿದ್ದಾರೆ. ಅಲ್ಲದೇ ಮುಂದಿನ ನಿರ್ಧಾರದ ಬಗ್ಗೆಯೂ ಅವರು ಮಾತನಾಡಿದ್ದಾರೆ. 


ಬೆಂಗಳೂರು (ಡಿ.01):  ರಾಜ್ಯ ಕಾಂಗ್ರೆಸ್‌ನಲ್ಲಿ ಪ್ರಮುಖ ವಿಷಯಗಳ ಬಗ್ಗೆ ಹಿರಿಯ ನಾಯಕರೆಲ್ಲರೂ ಸೇರಿ ಒಮ್ಮತದ ಹಾಗೂ ಒಗ್ಗಟ್ಟಿನ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಪಕ್ಷದ ಬೆಳವಣಿಗೆ ಮೇಲೆ ನಕಾರಾತ್ಮಕ ಪರಿಣಾಮ ಉಂಟಾಗುತ್ತದೆ ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ಬೇಸರ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.

ಅಲ್ಲದೆ, ಕಾಲಕಾಲಕ್ಕೆ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು 15 ಮಂದಿ ಸದಸ್ಯರ ಥಿಂಕ್‌ ಟ್ಯಾಂಕ್‌ ಮಾಡಬೇಕು. ನಿರಂತರವಾಗಿ ಸಭೆ ನಡೆಸಿ ಪಕ್ಷದಲ್ಲಿ ಬೆಳವಣಿಗೆಗಳ ಬಗ್ಗೆ ಪರಾಮರ್ಶೆ ನಡೆಸಿ ಪಕ್ಷದ ಬೆಳವಣಿಗೆಗೆ ಅಗತ್ಯ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

Tap to resize

Latest Videos

'ಕಾಂಗ್ರೆಸ್ ಪಕ್ಷ ಟೀಕಿಸಿದ ಸಿದ್ದರಾಮಯ್ಯ ಆ ಪಕ್ಷಕ್ಕೆ ಹೋದ್ರು' ...

ಕಾಂಗ್ರೆಸ್‌ ಹಿರಿಯ ನಾಯಕರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪಕ್ಷದಲ್ಲಿ ಪ್ರಮುಖ ನಿರ್ಧಾರಗಳನ್ನು ಎಲ್ಲ ನಾಯಕರನ್ನೂ ಸೇರಿಸಿ ತೆಗೆದುಕೊಳ್ಳುತ್ತಿಲ್ಲ ಎಂಬ ಭಾವನೆ ಇದೆ. ಇದರಿಂದ ಒಮ್ಮತದ ನಿರ್ಧಾರಗಳು ವ್ಯಕ್ತವಾಗುತ್ತಿಲ್ಲ. ಹೀಗಾಗಿ ಕನಿಷ್ಠ ಎರಡು ತಿಂಗಳಿಗೊಮ್ಮೆ ಕೋರ್‌ ಕಮಿಟಿ ಸಭೆ ಕರೆಯುವಂತಾಗಬೇಕು ಎಂದರು.

ಇನ್ನು ಶಿರಾ ಉಪ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಗಿಲ್ಲ. ನಾವೆಲ್ಲಾ ಉತ್ತಮವಾಗಿಯೇ ಕೆಲಸ ಮಾಡಿದ್ದೇವೆ. ಬಿಜೆಪಿಯವರು ಗೊಲ್ಲ ಅಭಿವೃದ್ಧಿ ನಿಗಮ ಸೇರಿದಂತೆ ವಿವಿಧ ಘೋಷಣೆಗಳ ಮೂಲಕ ಲಾಭ ಪಡೆದರು. ಇದರಿಂದ ಜೆಡಿಎಸ್‌ ಮತಗಳೆಲ್ಲಾ ಬಿಜೆಪಿ ಕಡೆ ವಾಲಿತು. ನಮ್ಮ ಮತಗಳನ್ನು ನಾವು ಉಳಿಸಿಕೊಂಡಿದ್ದೇವೆ ಎಂದು ಸ್ಪಷ್ಟನೆ ನೀಡಿದರು.

click me!