ಗಾಂಧಿ ಕನಸು ನನಸಿಗಾಗಿ ಯಾತ್ರೆ: ಜಿ.ಪರಮೇಶ್ವರ್‌

By Kannadaprabha News  |  First Published Oct 6, 2022, 10:30 PM IST

ದೇಶದ ಪ್ರತಿಯೊಬ್ಬ ಭಾರತೀಯನಿಗೂ ಸಮಾನತೆ ಸಿಗಬೇಕು ಹಾಗೂ ಭಾರತದ ಪ್ರಜೆಗಳೆಲ್ಲರೂ ಭಾವೈಕ್ಯತೆಯಿಂದ ಬಾಳಬೇಕು: ಪರಂ 


ಕೊರಟಗೆರೆ(ಅ.06):  ದೇಶದ ಪ್ರತಿಯೊಬ್ಬ ಭಾರತೀಯನಿಗೂ ಸಮಾನತೆ ಸಿಗಬೇಕು ಹಾಗೂ ಭಾರತದ ಪ್ರಜೆಗಳೆಲ್ಲರೂ ಭಾವೈಕ್ಯತೆಯಿಂದ ಬಾಳಬೇಕು ಇದು ಮಹಾತ್ಮ ಗಾಂಧಿರವರ ಕನಸಾಗಿದೆ. ಇದನ್ನು ಸಫಲಗೊಳಿಸಲು ಕಾಂಗ್ರೆಸ್‌ ಪಕ್ಷದ ನಾಯಕ ರಾಹುಲ್‌ ಗಾಂಧಿ ಭಾರತ್‌ ಜೋಡೋ ಯಾತ್ರೆಯನ್ನು ಮಾಡುತ್ತಿದ್ದಾರೆ ಎಂದು ಮಾಜಿ ಉಪಮುಖ್ಯಮುಂತ್ರಿ ಡಾ.ಜಿ.ಪರಮೇಶ್ವರ್‌ ತಿಳಿಸಿದರು.

ಪಟ್ಟಣದ ಮುಕ್‌ಬುಲ್‌ ವೃತ್ತ ಮತ್ತು ಮಟನ್‌ ಮಾರ್ಕೆಟ್‌ ವೃತ್ತದಲ್ಲಿ ಗಾಂಧಿ ಮತ್ತು ಶಾಸ್ತ್ರಿ ಜಯಂತಿ ಅಂಗವಾಗಿ ನೂತನ ಕಾಂಗ್ರೆಸ್‌ ಪಕ್ಷದ ಅಲ್ಪಸಂಖ್ಯಾತ ನಗರ ಘಟಕ ಕಚೇರಿಯನ್ನು ಉದ್ಘಾಟಿಸಿ ಹಾಗೂ ಇಬ್ಬರು ಮಹಾನ್‌ ನಾಯಕರ ಜಯಂತಿಯನ್ನು ಆಚರಿಸಿ ಮಾತನಾಡಿದರು.

Tap to resize

Latest Videos

ಸೋನಿಯಾ ಬರ್ತಾರೆ, ಒಟ್ಟಿಗೆ ನಡೆಯೋಣ ಬನ್ನಿ: ಡಿಕೆಶಿ

ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯದರ್ಶಿ ಇಮ್ರಾನ್‌ ಹುಸೇನ್‌, ಇಕ್ಬಾಲ್‌ ಅಹಮದ್‌, ಕಾಂಗ್ರೆಸ್‌ ಪಕ್ಷದ ನಗರ ಘಟಕದ ಅಧ್ಯಕ್ಷ ಜುಬೇರ್‌, ತಾಲೂಕು ಅಲ್ಪಸಂಖ್ಯಾತ ಘಟಕೆ ಅಧ್ಯಕ್ಷ ಮುಬಾರಕ್‌ಪಾಷ, ಚುನಾವಣೆ ಪ್ರಚಾರ ಸಮಿತಿ ಅಧ್ಯಕ್ಷ ಮುನ್ನಾಬಾಯ್‌, ಪಪಂ ಸದಸ್ಯರಾದ ಎ.ಡಿ.ಬಲರಾಮಯ್ಯ, ನಂದೀಶ್‌, ನಾಗರಾಜು, ಪಪಂ ಮಾಜಿ ಸದಸ್ಯ ಸೈಯದ್‌ ಸೈಷುಲ್ಲಾ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಕೊಡ್ಲಹಳ್ಳಿ ಅಶ್ವತನಾರಾಯಣ್‌, ಅರಕೆರೆ ಶಂಕರ್‌, ಮಹಿಳಾ ಅಧ್ಯಕ್ಷೆ ಜಯಮ್ಮ, ಮುಖಂಡರಾದ ಹುಸೇನ್‌ ಸಾಬ್‌, ಮಕ್ತಿಯಾರ್‌, ಜಮೀರ್‌ ಅಹಮದ್‌, ಫರೂಖ್‌, ಅಮಾನುಲ್ಲಾ, ಮುನ್ನಾಫ್‌, ಸರ್ಧಾರ್‌ ಹುಸೇನ್‌, ಸಾದಿಕ್‌ಪಾಷ ಸೇರಿದಂತೆ ಇನ್ನಿತರರು ಹಾಜರಿದ್ದರು.
 

click me!