ಕಮೀಷನ್ ಆರೋಪದಲ್ಲಿ ಹುರುಳಿಲ್ಲ. ಗುತ್ತಿಗೆದಾರರ ಸಂಘದ ಕೆಂಪಣ್ಣ ಕಾಂಗ್ರೆಸ್‌ನಿಂದ ಕಮೀಷನ್ ಪಡೆದಿದ್ದಾರೆ ಎನ್ನುವ ಸರ್ಕಾರವು ಆ ಕುರಿತು ತನಿಖೆಗೆ ಆದೇಶಿಸಬೇಕು. ಆಗ ಯಾರು ಕಮೀಷನ್ ತೆಗೆದುಕೊಂಡಿದ್ದಾರೆ ಎಂಬ ಸತ್ಯ ತಿಳಿಯಲಿದೆ: ಪರಮೇಶ್ವರ
ಹುಬ್ಬಳ್ಳಿ(ಆ.29): ಶಿಕ್ಷಣ ಇಲಾಖೆಯಲ್ಲಿನ ಭ್ರಷ್ಟಾಚಾರದ ಕುರಿತು ನೋಂದಾಯಿತ ಅನುದಾನರಹಿತ ಖಾಸಗಿ ಶಾಲೆಗಳ ಆಡಳಿತ ಸಂಘ (ರುಪ್ಸಾ) ಪ್ರಧಾನಿಗೆ ಪತ್ರ ಬರೆದಿದ್ದು, ಈ ಮೂಲಕ ರಾಜ್ಯ ಸರ್ಕಾರವು ಇಲಾಖಾವಾರು ನಡೆಸುತ್ತಿರುವ ಭ್ರಷ್ಟಾಚಾರ ಜಗಜ್ಜಾಹೀರುಗೊಂಡಿದೆ ಎಂದು ಮಾಜಿ ಉಪಮುಖ್ಯಮಂತ್ರಿ, ಕಾಂಗ್ರೆಸ್ ಶಾಸಕ ಡಾ.ಜಿ.ಪರಮೇಶ್ವರ ಹೇಳಿದರು.
ಭಾನುವಾರ ನಗರದ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಮೀಷನ್ ಆರೋಪದಲ್ಲಿ ಹುರುಳಿಲ್ಲ. ಗುತ್ತಿಗೆದಾರರ ಸಂಘದ ಕೆಂಪಣ್ಣ ಕಾಂಗ್ರೆಸ್‌ನಿಂದ ಕಮೀಷನ್ ಪಡೆದಿದ್ದಾರೆ ಎನ್ನುವ ಸರ್ಕಾರವು ಆ ಕುರಿತು ತನಿಖೆಗೆ ಆದೇಶಿಸಬೇಕು. ಆಗ ಯಾರು ಕಮೀಷನ್ ತೆಗೆದುಕೊಂಡಿದ್ದಾರೆ ಎಂಬ ಸತ್ಯ ತಿಳಿಯಲಿದೆ ಎಂದರು.
ಸಾವರ್ಕರ ಸ್ವಾತಂತ್ರ್ಯ ಹೋರಾಟಗಾರ ಅಲ್ಲ: ಗಣಿಹಾರ
ಕಾರ್ಯಕರ್ತರು ಪಕ್ಷ ಬಲಪಡಿಸಲಿದ್ದಾರೆ:
ಇನ್ನು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, 137 ವರ್ಷಗಳ ಇತಿಹಾಸವಿರುವ ಕಾಂಗ್ರೆಸ್‌ನ್ನು ಹಲವು ನಾಯಕರು ತೊರೆದಿದ್ದಾರೆ ಮತ್ತು ಒಡಕು ಮೂಡಿಸಿದ್ದಾರೆ. ಈ ಆ ಸಾಲಿಗೆ ಗುಲಾಂ ನಬಿ ಆಜಾದ್ ಸೇರಿದ್ದಾರೆ. ಇಂತಹ ಬೆಳವಣಿಗೆ ಎಲ್ಲ ಪಕ್ಷಗಳಲ್ಲಿಯೂ ಸಾಮಾನ್ಯ. ಕಾಂಗ್ರೆಸ್‌ನಿಂದ ಬೇರೆ ಪಕ್ಷಕ್ಕೆ ಹೋದವರು ದೊಡ್ಡ ನಾಯಕರಾಗಿದ್ದಾರೆ. ಇವುಗಳ ನಡುವೆಯೂ ಪಕ್ಷ ಉಳಿದಿದೆ. ಹೊಸ ನಾಯಕತ್ವ ಬರುತ್ತಲೇ ಇದೆ. ದೇಶದ ಪ್ರತಿ ಹಳ್ಳಿ ಹಳ್ಳಿಯಲ್ಲಿಯೂ ಕಾಂಗ್ರೆಸ್ ಕಾರ್ಯಕರ್ತರಿದ್ದಾರೆ. ಅವರು ಪಕ್ಷವನ್ನು ಬಲಪಡಿಸಲಿದ್ದಾರೆ ಎಂದರು.