ಕೈ ನಾಯಕ ಈಶ್ವರ ಖಂಡ್ರೆ ಅಚ್ಚರಿಯ ಹೇಳಿಕೆ

By Kannadaprabha NewsFirst Published Dec 3, 2019, 8:21 AM IST
Highlights

ರಾಜ್ಯದಲ್ಲಿ ಏನು ಬೇಕಾದರು ಆಗಬಹುದು ಎಂದು ಕಾಂಗ್ರೆಸ್ ನಾಯಕ ಈಶ್ವರ ಖಂಡ್ರೆ ಅಚ್ಚರಿಯ ಹೇಳಿಕೆ ನೀಡಿದ್ದಾರೆ. 

ಬೆಂಗಳೂರು [ನ.03]:  ಉಪ ಚುನಾವಣೆ ಫಲಿತಾಂಶದ ಬಳಿಕ ರಾಜ್ಯದಲ್ಲಿ ಏನು ಬೇಕಾದರೂ ಆಗಬಹುದು. ರಾಜಕೀಯದ ಎಲ್ಲಾ ಸಾಧ್ಯತೆಗಳೂ ಮುಕ್ತವಾಗಿದ್ದು, ಮತ್ತೆ ಮೈತ್ರಿಯೂ ಆಗಬಹುದು. ಸಮಾನಮನಸ್ಕರು ಸೇರಿ ಬಿಜೆಪಿ ಮುಕ್ತ ಮಾಡುತ್ತೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ ಕುತೂಹಲಕಾರಿ ಹೇಳಿಕೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.9ರ ಬಳಿಕ ರಾಜ್ಯದ ಜನತೆಗೆ ಸಿಹಿ ಸುದ್ದಿ ಸಿಗಲಿದೆ. ಕಾಂಗ್ರೆಸ್‌ 15 ಸ್ಥಾನಗಳಿಗೆ 15 ಸ್ಥಾನಗಳನ್ನೂ ಗೆದ್ದರೆ ಆಗ ಯಾವ ಸರ್ಕಾರ ಬರುತ್ತದೆ? ನಮ್ಮ ಸರ್ಕಾರವೇ ಬರುತ್ತೆ ತಾನೇ ಎನ್ನುವ ಮೂಲಕ ಪರೋಕ್ಷವಾಗಿ ಜೆಡಿಎಸ್‌ ಜತೆ ಮೈತ್ರಿ ಮಾಡಿಕೊಳ್ಳುವ ಸುಳಿವು ನೀಡಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕಾಂಗ್ರೆಸ್‌ ಜತೆ ಕೈ ಜೋಡಿಸುವುದಿಲ್ಲ ಎಂಬ ದೇವೇಗೌಡರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಎರಡೂ ಪಕ್ಷಗಳೂ ಜಾತ್ಯತೀತ ಪಕ್ಷಗಳು. ಮೈತ್ರಿ ಬಗ್ಗೆ ನಮ್ಮ ವರಿಷ್ಠರು ತೀರ್ಮಾನ ಮಾಡುತ್ತಾರೆ. ಕರ್ನಾಟಕ ಜನತೆಯ ಹಿತದೃಷ್ಟಿಯಿಂದ ಉತ್ತಮ ನಿರ್ಧಾರ ಆಗಲಿದೆ ಎಂಬ ವಿಶ್ವಾಸವಿದೆ. ಸಮಾನ ಮನಸ್ಕರು ಸೇರಿ ಬಿಜೆಪಿಯನ್ನು ದೂರ ಇಡುವುದು ನಮ್ಮ ಉದ್ದೇಶ. ಮಹಾರಾಷ್ಟ್ರದಲ್ಲಿ ಮೈತ್ರಿ ಮಾಡಿಕೊಂಡು ತೋರಿಸಿದ್ದೇವೆ. ಸಮಾನ ಮನಸ್ಕರು ಸೇರಿ ಬಿಜೆಪಿ ಮುಕ್ತ ಮಾಡುತ್ತೇವೆ ಎಂದು ಖಂಡ್ರೆ ಹೇಳಿದರು.

ಡಿಸೆಂಬರ್ 5 ರಂದು ರಾಜ್ಯದಲ್ಲಿ ಉಪ ಚುನಾವಣೆ ನಡೆಯಲಿದ್ದು 9 ರಂದು ಫಲಿತಾಂಶ ಪ್ರಕಟವಾಗಲಿದೆ

click me!