ಮುಸ್ಲಿಮರನ್ನು ದ್ವೇಷಿಸಬೇಡಿ ಎಂದು ಪ್ರಧಾನಿ ಮೋದಿ ಅವರು ತಮ್ಮ ಪಕ್ಷದ ನಾಯಕರಿಗೆ ನೀಡಿರುವ ಸಲಹೆ ‘ಭೂತದ ಬಾಯಲ್ಲಿ ಭಗವದ್ಗೀತೆ’ ಬಂದಂತೆ. ಅವರ ಇಡೀ ರಾಜಕೀಯ, ಸಾಮಾಜಿಕ ಜೀವನವೇ ಸುಳ್ಳು, ದ್ವೇಷ ಮತ್ತು ಪ್ರತೀಕಾರದಿಂದ ತುಂಬಿದೆ.
ಬೆಂಗಳೂರು (ಜ.21): ಮುಸ್ಲಿಮರನ್ನು ದ್ವೇಷಿಸಬೇಡಿ ಎಂದು ಪ್ರಧಾನಿ ಮೋದಿ ಅವರು ತಮ್ಮ ಪಕ್ಷದ ನಾಯಕರಿಗೆ ನೀಡಿರುವ ಸಲಹೆ ‘ಭೂತದ ಬಾಯಲ್ಲಿ ಭಗವದ್ಗೀತೆ’ ಬಂದಂತೆ. ಅವರ ಇಡೀ ರಾಜಕೀಯ, ಸಾಮಾಜಿಕ ಜೀವನವೇ ಸುಳ್ಳು, ದ್ವೇಷ ಮತ್ತು ಪ್ರತೀಕಾರದಿಂದ ತುಂಬಿದೆ. ಕೇವಲ ಚುನಾವಣೆಯಲ್ಲಿ ಲಾಭ ಪಡೆಯುವ ಒಂದೇ ಉದ್ದೇಶಕ್ಕೆ ಇಂತಹ ಹೇಳಿಕೆ ನೀಡಿದ್ದಾರೆ ಎಂದು ವಿಧಾನ ಪರಿಷತ್‌ನ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಟೀಕಿಸಿದ್ದಾರೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಚುನಾವಣೆ ಹತ್ತಿರ ಬಂದಿದೆ. ತಾವು ಪ್ರಯೋಗಿಸಿದ ಲವ್ ಜಿಹಾದ್, ಹಿಜಾಬ್, ಹಲಾಲ್ ವಿವಾದಗಳಿಂದ ಹೊಡೆತ ಕೊಡುತ್ತೆ ಎಂದು ಗೊತ್ತಾಗಿದೆ. ಹಾಗಾಗಿ ಇಂತಹ ಹೇಳಿಕೆ ನೀಡುತ್ತಿದ್ದಾರೆ. ಅಲ್ಲದೆ, ತಾವು ಇಂತಹ ಹೇಳಿಕೆ ನೀಡಿದರೂ ಜನ ನಂಬಲ್ಲ ಎಂಬುದು ಗೊತ್ತಿದೆ. ಅದಕ್ಕೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ವಾಪಸ್ ಕರೆಸಿಕೊಂಡಿದ್ದಾರೆ. ಯಡಿಯೂರಪ್ಪ ಟಿಪ್ಪು ಟೋಪಿ ಹಾಕಿದ್ದರು. ಅವರ ಮಾತನ್ನಾದರೆ ಮುಸ್ಲಿಮರು ಕೇಳುತ್ತಾರೆ ಎಂದು ಮುಂದೆ ಬಿಟ್ಟಿದ್ದಾರೆ ಎಂದರು.
ಶೀಘ್ರ ಬಿಜೆಪಿ, ಜೆಡಿಎಸ್ ಶಾಸಕರು ಕಾಂಗ್ರೆಸ್ಸಿಗೆ ಬರುತ್ತಾರೆ: ಡಿಕೆಶಿ ‘ಬಾಂಬ್’
ನಾನು ಪ್ರಧಾನಿ ಮೋದಿ ಅವರನ್ನು ಬಿಜೆಪಿಯ ಕಾರ್ಯದರ್ಶಿಯಾಗಿದ್ದಾಗಿನಿಂದ ರಾಜಕೀಯವಾಗಿಯೂ ಬಲ್ಲೆ, ವೈಯಕ್ತಿಕವಾಗಿಯೂ ಬಲ್ಲೆ. ಅಮಿತ್ ಶಾ ಅವರನ್ನೂ ಅಷ್ಟೆ. ಹಾಗಾಗಿಯೇ ಅವರಿಬ್ಬರ ಜಾತಕದ ಬಗ್ಗೆ ಮಾತನಾಡುವ, ಟೀಕಿಸುವ ಧೈರ್ಯ ನನಗಿದೆ. ಕರ್ನಾಟಕದಲ್ಲಿ ನೆರೆ ಬಂದು ಜನ ಸಂಕಷ್ಟದಲ್ಲಿದ್ದಾಗ ಮೋದಿ ರಾಜ್ಯಕ್ಕೆ ಬರಲಿಲ್ಲ. ಈಗ ರಾಜ್ಯದಲ್ಲಿ ರಾಜಕೀಯ ಟೂರಿಸಂ ಮಾಡುತ್ತಿದ್ದಾರೆ. ನಾವು ಪೆನ್ನು ಪುಸ್ತಕ ವಿಚಾರ ಮಾತಾಡಿದರೆ ಪ್ರಜ್ಞಾ ಠಾಕೂರ್ ಮತ್ತಿತರ ಬಿಜೆಪಿ ನಾಯಕರು ಬಂದೂಕು, ಚಾಕೂ ಚೂರಿ ವಿಚಾರ ಮಾತಾಡ್ತಾರೆ.
ಸಿದ್ದು-ಡಿಕೆಶಿಗೆ ಅಳಿವು ಉಳಿವಿನ ಪ್ರಶ್ನೆ: ಈ ಚುನಾವಣೆ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರಿಗೆ ರಾಜಕೀಯವಾಗಿ ಅಳಿವು ಉಳಿವಿನ ಪ್ರಶ್ನೆಯಾಗಿದೆ. ಟಿಕೆಟ್ ನೀಡಲು ಪ್ರದೇಶ ಕಾಂಗ್ರೆಸ್ ಸಮಿತಿ, ಜಿಲ್ಲಾ ಕಾಂಗ್ರೆಸ್ ಸಮಿತಿಗಳು ಹಾಗೂ ಹೈಕಮಾಂಡ್ ನಿಂದ ಪ್ರತ್ಯೇಕ ಸರ್ವೆ ನಡೆದಿವೆ. ಸಿದ್ದರಾಮಯ್ಯ ಅವರೂ ಸರ್ವೆ ಮಾಡಿದ್ದಾರೆ. ಶಿವಕುಮಾರ್ ಅವರು ಅವರ ಬುದ್ದಿವಂತಿಕೆ ಮೇಲೆ ಸರ್ವೆ ಮಾಡ್ತಾರೆ. ನಮ್ಮಲ್ಲಿ ಮನಬೇಧವಿಲ್ಲ, ಮತಬೇಧವಿದೆ. ಮೊನ್ನೆ ಸಿದ್ದರಾಮಯ್ಯ ಮತ್ತು ಕೆ.ಎಚ್.ಮುನಿಯಪ್ಪ ಅವರ ನಡುವೆ ಹೊಂದಾಣಿಕೆ ಆಗಲಿಲ್ಲವೆ ಹಾಗೆ ಎಲ್ಲ ಕ್ಷೇತ್ರದಲ್ಲೂ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಟಿಕೆಟ್ ಹಂಚಿಕೆ ಆಗುತ್ತದೆ ಎಂದರು.
ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ವೇಶ್ಯೆ ರೀತಿ ಶಾಸಕ ಸ್ಥಾನ ಮಾರಾಟ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಇದೀಗ, ಲೈಂಗಿಕ ಕಾರ್ಯಕರ್ತರ ಬಗ್ಗೆ ನಮಗೆ ಅಪಾರ ಗೌರವವಿದೆ. ಅವರಿಗೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ ಎಂದು ಹೇಳಿದ್ದಾರೆ. ನನ್ನ ಹೇಳಿಕೆ ನಂತರ ಕೆಲವರು ಹೇಳಿಕೆ ಕೊಟ್ಟಿದ್ದಾರೆ. ಕೆಲವರು ತಾವು ಗರತಿಯಂತೆ ಮಾತನಾಡುತ್ತಿದ್ದಾರೆ. ಬಿಜೆಪಿಯವರು ನನ್ನ ಹೇಳಿಕೆಯನ್ನು ತಿರುಚಿ ಉಲ್ಲೇಖ ಮಾಡುತ್ತಿದ್ದಾರೆ. ಲೈಂಗಿಕ ಕಾರ್ಯಕರ್ತರ ಬಗ್ಗೆ ಅನಗತ್ಯ ವಿವಾದ ಸೃಷ್ಟಿಸುತ್ತಿದ್ದಾರೆ ಎಂದರು.
ನನ್ನ ಮೇಲೆ ಹಲ್ಲೆ ನಡೆಸಿದ್ದು ರೌಡಿಗಳು: ಸಚಿವ ಬಿ.ಸಿ.ಪಾಟೀಲ್
ಬಿಜೆಪಿಯಲ್ಲಿ ಸ್ಯಾಂಟ್ರೊ ರವಿ, ಸಿ.ಟಿ. ರವಿ, ಫೈಟರ್ ರವಿ, ಪಿಂಪ್ ರವಿಗಳೇ ತುಂಬಿ ತುಳುಕುತ್ತಿದ್ದಾರೆ. ಇಂಥವರಿಂದ ರಾಜ್ಯದ ಅಭಿವೃದ್ಧಿ ನಿರೀಕ್ಷಿಸಲು ಸಾಧ್ಯವಿಲ್ಲ. ಬಿಜೆಪಿ ಮುಖಂಡರಾದ ಯತ್ನಾಳ ಅವರೇ ಖುದ್ದಾಗಿ ಬಿಜೆಪಿ ಸರ್ಕಾರದ ಮಂತ್ರಿಗಳು ‘ಸಪ್ಲೈ ಮಾಡಿ’ ಮಂತ್ರಿಗಳಾಗಿದ್ದಾರೆ ಎಂದು ಹೇಳಿದ್ದಾರೆ. ಅದೇ ಪಕ್ಷದ ಇನ್ನೊಬ್ಬರು ಇವರೆಲ್ಲ ಇಂಥ ಕೆಲಸ ಮಾಡಿ ಮಂತ್ರಿ ಆಗಿದ್ದಾರೆ ಎಂದು ಹೇಳುತ್ತಿದ್ದಾರೆ. ಆದರೆ, ಅದನ್ನೆಲ್ಲ ಹೇಳಿ ನನ್ನ ಬಾಯಿ ಹೊಲಸು ಮಾಡಿಕೊಳ್ಳುವುದಿಲ್ಲ ಎಂದರು.