
ಯಲಬುರ್ಗಾ(ಮಾ.22): ಈ ಹಿಂದೆ ಕಾಂಗ್ರೆಸ್ ಮಾಡಿದ ಜನಪರ ಯೋಜನೆಗಳನ್ನು ಬಿಜೆಪಿಯವರು ನಮ್ಮ ಸರ್ಕಾರದ ಯೋಜನೆಗಳೆಂದು ಪ್ರಚಾರ ಪಡೆಯುತ್ತಿದ್ದಾರೆ ಎಂದು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಹೇಳಿದರು.
ಪಟ್ಟಣದಲ್ಲಿ ಕಾಂಗ್ರೆಸ್ ವತಿಯಿಂದ ಸೋಮವಾರ ರಾತ್ರಿ ಆಯೋಜಿಸಿದ್ದ ತಾಲೂಕಿನ ಹಗೇದಾಳ ಗ್ರಾಮದಲ್ಲಿ ಕೊಪ್ಪಳ ಏತ ನೀರಾವರಿ ಯೋಜನೆಯ ಹಗೇದಾಳ ಗ್ರಾಮದ ಜಾಕ್‌ವೆಲ್‌ಗೆ ಕೃಷ್ಣಾ ನೀರು ಬಂದಿರುವ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಬೈಕ್ ರಾರಯಲಿ ಹಾಗೂ ಗ್ಯಾರಂಟಿ ಕಾರ್ಡ್ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ನಾನು ಶಾಸಕ, ಸಚಿವನಾದ ಮೇಲೆ ಕ್ಷೇತ್ರದಲ್ಲಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದು ಅಭಿವೃದ್ಧಿಪಡಿಸಿದ್ದೇನೆ ಎಂದರು.
ಪಂಚಮಸಾಲಿ ಮೀಸಲಾತಿ; ಮಾ.23ಕ್ಕೆ ಘೋಷಿಸುವ ನಿರೀಕ್ಷೆ: ಯತ್ನಾಳ್
ಬಿಜೆಪಿ ಸರ್ಕಾರ ಜನರಿಂದ ಆಯ್ಕೆಯಾಗಿ ಬಂದದ್ದಲ್ಲ, ಕಾಂಗ್ರೆಸ್, ಜೆಡಿಎಸ್‌ನ 17 ಶಾಸಕರನ್ನು ಆಪರೇಶನ್ ಕಮಲದ ಮೂಲಕ ಕರೆತಂದು, ವಾಮಮಾರ್ಗದಿಂದ ಅಧಿಕಾರಕ್ಕೆ ಬಂದಿದೆ. ಈ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಯೋಜನೆಗಳಿಲ್ಲ. ಜನಸಾಮಾನ್ಯರು ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಬೇಸತ್ತು ಹೋಗಿದ್ದಾರೆ. ಜನರನ್ನು ಉದ್ಧಾರ ಮಾಡುವ ಸರ್ಕಾರವಲ್ಲ, ಇದು ಹಣ ಲೂಟಿ ಹೊಡೆಯುವ ಭ್ರಷ್ಟಸರ್ಕಾರವಾಗಿದೆ ಎಂದು ಬಿಜೆಪಿಯ ವಿರುದ್ಧ ವಾಗ್ದಾಳಿ ನಡೆಸಿದರು.
ಬೈಕ್ ರಾರಯಲಿ:
ಕುಕನೂರು ಪಟ್ಟಣದಿಂದ ಆಗಮಿಸಿದ ಬೈಕ್ ರಾರಯಲಿಗೆ ಮಾಜಿ ಸಚಿವ ಬಸವರಾಜ ರಾಯರಡ್ಡಿ ಸಾಥ್ ನೀಡುವ ಮೂಲಕ 31 ಗ್ರಾಮಗಳ ಕೆರೆಗಳಿಗೆ ಭೇಟಿ ನೀಡಿ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ, ಯಂಕಣ್ಣ ಯರಾಶಿ, ವೀರನಗೌಡ ಬಳೋಟಗಿ, ಹನುಮಂತಗೌಡ ಪಾಟೀಲ, ಅಖ್ತರಸಾಬ್ ಖಾಜಿ, ಸಂಗಣ್ಣ ಟೆಂಗಿನಕಾಯಿ, ಅಂದಾನಗೌಡ ಪೊಲೀಸ್‌ಪಾಟೀಲ, ಸಾವಿತ್ರಿ ಗೊಲ್ಲರ, ಶರಣಪ್ಪ ಉಪ್ಪಾರ, ಜಯಶ್ರೀ ಕಂದಕೂರ, ಗಿರಿಜಾ ಸಂಗಟಿ, ಡಾ. ನಂದಿತಾ ದಾನರಡ್ಡಿ, ಶರಣಮ್ಮ ಪೂಜಾರ, ಶರಣಪ್ಪ ಗಾಂಜಿ, ಡಾ. ಎಸ್.ಸಿ. ದಾನರಡ್ಡಿ, ಈಶ್ವರ ಅಟಮಾಳಗಿ, ಸುಧೀರ ಕೊರ್ಲಳ್ಳಿ, ಮಲ್ಲು ಜಕ್ಕಲಿ, ಸುರೇಶ ದಾನಕೈ ಮತ್ತಿತರರು ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.