* ಕಾರಣ ಕೇಳಿ ಕೇಳಿ ನೋಟಿಸ್ ಜಾರಿ ಮಾಡಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಲ್ತಾಪ್ ಹುಸೇನ್ ಹಳ್ಳೂರು
* ಸದ್ಯ ಧಾರವಾಡದಲ್ಲಿ ಸದ್ದು ಮಾಡುತ್ತಿರು ದೀಪಕ್ ಚಿಂಚೋರೆ ಹೇಳಿಕೆ
* ಮೊದಲಿಗೆ ರಮೇಶ ಜಾರಕಿಹೊಳಿ ಆಪ್ತರಾಗಿದ್ದ ಚಿಂಚೋರೆ
ವರದಿ: ಪರಮೇಶ್ವರ ಅಂಗಡಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಧಾರವಾಡ
ಧಾರವಾಡ(ಮೇ.20): ರಾಜ್ಯದಲ್ಲಿ ಒಂದು ಕಡೆ ಕಾಂಗ್ರೆಸ್ ಪಕ್ಷವನ್ನ ಅಧಿಕಾರಕ್ಕೆ ತರಬೇಕು ಎಂದು ಕೆಪಿಸಿಸಿ ಅಧ್ಯಕ್ಷ್ಯ ಡಿಕೆ ಶಿವಕುಮಾರ, ಮಾಜಿ ಸಿಎಂ ಸಿದ್ದರಾಮಯ್ಯ ರಾಜ್ಯ ಪ್ರವಾಸವನ್ನ ಮಾಡಿ ಪಕ್ಷವನ್ನ ಬಲಪಡಿಸುತ್ತಿದ್ದಾರೆ. ಇನ್ನೊಂದೆಡೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ತಮಗೆ ಹೇಗೆ ಬೇಕೋ ಹಾಗೇ ಹೇಳಿಕೆಗಳನ್ನ ಕೊಡ್ತಾ ಪಕ್ಷಕ್ಕೆ ಡ್ಯಾಮೇಜ್ ಮಾಡ್ತಾ ಇದಾರೆ ಅಂತ ಕಾಂಗ್ರೆಸ್ ಮುಖಂಡ, ಹುಬ್ಬಳ್ಳಿ- ಧಾರವಾಡ ಪಶ್ಚಿಮ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ, ದೀಪಕ್ ಚಿಂಚೋರೆಗೆ ಕಾರಣ ಕೇಳಿ ಕಾಂಗ್ರೆಸ್ ಪಕ್ಷ ನೋಟಿಸ್ ಜಾರಿ ಮಾಡಿದೆ. ನೋಟಿಸನ್ನ ಜಿಲ್ಲಾಧ್ಯಕ್ಷ ಅಲ್ತಾಪ್ ಹುಸೇನ್ ಹಳ್ಳೂರು ಕಾರಣ ಕೇಳಿ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ.
undefined
ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ ಕಾಂಗ್ರೆಸ್ ಪಕ್ಷದ ಮುಖಂಡ ದೀಪಕ್ ಚಿಂಚೋರೆ ನನಗೆ ಯಾವ ಪಕ್ಷ ಟಿಕೆಟ್ ಕೊಡುತ್ತೆ ಆ ಪಕ್ಷದಿಂದ ಕಣಕ್ಕೆ ಇಳಿಯುತ್ತೇನೆ ಅಂತ ಮಾತನಾಡಿದ್ದರು. ಬಹಿರಂಗ ಕಾರ್ಯಕ್ರಮದಲ್ಲಿ ಮಾತನಾಡಿದ ದೀಪಕ್ ಚಿಂಚೋರೆ ಹೇಳಿಕೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಮುಜುಗುರ ತಂದಿದೆ ಅಂತ ಕೆಲ ಕಾಂಗ್ರೆಸ್ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
MLC Election: ಹೊರಟ್ಟಿ ಹಣಿಯಲು ಜೆಡಿಎಸ್ ಫ್ಲ್ಯಾನ್..!
ಸದ್ಯ ಮುಂಬರುವ ಚುನಾವಣೆಯಲ್ಲಿ ನಾನು ಮತ್ತು ಇಸ್ಮಾಯಿಲ್ ತಮಾಟಗಾರ ಇಬ್ಬರು ಚುನಾವಣೆಗೆ ಸ್ಪರ್ಧೆ ಮಾಡುವವರೆ, ಯಾವ ಪಕ್ಷದಿಂದ ಯಾರು ಟಿಕೆಟ್ ಕೊಡ್ತಾರೆ ಆ ಪಕ್ಷದಿಂದ ಕಣಕ್ಕೆಇಳಿಯುತ್ತೇವೆ ಎಂದು ಮುಸ್ಲಿಂ ಸಮುದಾಯದವರು ಏರ್ಪಡಿಸಿದ ಖಾಸಗಿ ಕಾರ್ಯಕ್ರಮದಲ್ಲಿ ಬಹಿರಂಗವಾಗಿ ಮಾತನಾಡಿದ್ದರು. ಇಬ್ಬರೂ ನಾಯಕರುಗಳು ಮೊದಲಿನಿಂದಲೂ ಕಾಂಗ್ರೆಸ್ ಪಕ್ಷದಲ್ಲಿ ಇದ್ದು ಎಐಸಿಸಿ ಸದಸ್ಯರಾಗಿರುವ ದೀಪಕ್ ಚಿಂಚೋರೆ ಹೇಳಿಕೆ ಸದ್ಯ ಧಾರವಾಡದಲ್ಲಿ ಸದ್ದು ಮಾಡುತ್ತಿದೆ. ಮೊದಲಿಗೆ ರಮೇಶ ಜಾರಕಿಹೊಳಿ ಆಪ್ತರಾಗಿರುವ ದೀಪಕ್ ಚಿಂಚೋರೆ ಈ ರೀತಿಯಾಗಿ ಗೊಂದಲದ ಹೇಳಿಕೆಯನ್ನ ನೀಡಿದ್ದಾರೆ.
ಇನ್ನು ಹುಬ್ಬಳ್ಳಿ- ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕರಾದ ಅರವಿಂದ ಬೆಲ್ಲದ ಅವರನ್ನ ಸೋಲಿಸಲು ಕಾಂಗ್ರೆಸ್ ಪಣ ತೊಟ್ಟಿದ್ದು ಒಂದು ಕಡೆಯಾದ್ರೆ ಇತ್ತ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರುವ ಪ್ರಭಲ ಮುಖಂಡ ಹಿಂದು ಲಿಂಗಾಯತ ಸಮುದಾಯದ ನಾಗರಾಜ್ ಗೌರಿ ಕೂಡಾ ಟಕೆಟ್ ಆಕಾಂಕ್ಷಿಯಾಗಿದ್ದಾರೆ. ಇವರು ಕೂಡಾ ಡಿ.ಕೆ.ಶಿವಕುಮಾರ ಆಪ್ತರಲ್ಲೊಬ್ಬರಾಗಿದ್ದು ಬಹುತೇಕ ಕಾಂಗ್ರೆಸ್ ಟಿಕೆಟ್ ನನಗೆ ಸಿಗಲ್ಲ ಎಂದು ದೀಪಕ್ ಚಿಂಚೋರೆ ಈ ರೀತಿಯಾಗಿ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಹೇಳಿಕೆಯನ್ನ ನೀಡುತ್ತಿದ್ದಾರೆ. ಒಟ್ಟಿನಲ್ಲಿ ಬೆಲ್ಲದ ಅವರನ್ನ ಸೋಲಿಸಲೂ ಯಾವ ಆಭ್ಯರ್ಥಿಯನ್ನ ಕಣಕ್ಕೆ ಇಳಿಸುತ್ತಾರೆ ಎಂಬುದು ಅಷ್ಟೆ ಸಸ್ಪೆನ್ಸ್ ಆಗಿ ಉಳಿದಿದೆ.