ಕುಮಾರಸ್ವಾಮಿಯನ್ನು ರಾಜಕೀಯವಾಗಿ ಮುಗಿಸಲು ಕಾಂಗ್ರೆಸ್ ಯತ್ನ: ಶರವಣ

By Kannadaprabha NewsFirst Published Oct 1, 2024, 6:34 AM IST
Highlights

ಚಂದ್ರಶೇಖರ್ ಅವರ ಆಸ್ತಿ- ಪಾಸ್ತಿ ಬಗ್ಗೆಯೂ ತನಿಖೆಯಾಗಬೇಕು. ಒಬ್ಬ ಪೋಲಿಸ್ ಅಧಿಕಾರಿಯಿಂದ 20 ಕೋಟಿ ರೂಪಾಯಿ ಕೇಳಿದ್ದರೆಂಬ ಆರೋಪದ ಬಗ್ಗೆಯೂ ತನಿಖೆ ನಡೆಯಬೇಕು. ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ ಅಧಿಕಾರಿ ಮೇಲೆ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ ವಿಧಾನ ಪರಿಷತ್ ಸದಸ್ಯ ಟಿ.ಎ. ಶರವಣ 

ಬೆಂಗಳೂರು(ಅ.01):  ಕೇಂದ್ರ ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ರಾಜಕೀಯವಾಗಿ ಮುಗಿಸಲು ರಾಜ್ಯ ಕಾಂಗ್ರೆಸ್ ಸರ್ಕಾರ ಸಂಚು ರೂಪಿಸಿದೆ ಎಂದು ವಿಧಾನ ಪರಿಷತ್ ಸದಸ್ಯ ಟಿ.ಎ. ಶರವಣ ಆರೋಪಿಸಿದ್ದಾರೆ.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಪೊಲೀಸ್ ವ್ಯವಸ್ಥೆ ದುರ್ಬಳಕೆ ಮಾಡಿಕೊಂಡು ಕುಮಾರಸ್ವಾಮಿ ಅವರನ್ನು ಕಾನೂನು ಬಲೆಯಲ್ಲಿ ಸಿಲುಕಿಸಲು ಕಾಂಗ್ರೆಸ್ ಷಡ್ಯಂತ್ರ ನಡೆಸಿದೆ. ಈ ಪಿತೂರಿಗೆ ಜೆಡಿಎಸ್ ಜಗ್ಗುವುದಿಲ್ಲ. ಕುಮಾರಸ್ವಾಮಿ ಅವರನ್ನು ನಿಂದಿಸುವ ಪತ್ರ ಬರೆದಿರುವ ಲೋಕಾಯುಕ್ತ ಹಿರಿಯ ಅಧಿಕಾರಿ ಚಂದ್ರಶೇಖರ್ ಅವರನ್ನು ತಕ್ಷಣ ಅಮಾನತು ಮಾಡಲು ಕ್ರಮ ಕೈಗೊಳ್ಳಬೇಕು. ಚುನಾಯಿತ ನಾಯಕರ ವಿರುದ್ಧವೇ ಪಿತೂರಿ ನಡೆಸಿರುವ ಪೊಲೀಸ್ ಅಧಿಕಾರಿ ಮೇಲಿರುವ ಆರೋಪಗಳ ಬಗ್ಗೆ ತನಿಖೆಯಾಗಬೇಕು ಆಗ್ರಹಿಸಿದರು. 

Latest Videos

ಚುನಾವಣೆ ಫಲಿತಾಂಶ ಜೆಡಿಎಸ್‌ ಬಲಿಷ್ಠ ಎಂಬುದಕ್ಕೆ ಸಾಕ್ಷಿ: ಶರವಣ

ಚಂದ್ರಶೇಖರ್ ಅವರ ಆಸ್ತಿ- ಪಾಸ್ತಿ ಬಗ್ಗೆಯೂ ತನಿಖೆಯಾಗಬೇಕು. ಒಬ್ಬ ಪೋಲಿಸ್ ಅಧಿಕಾರಿಯಿಂದ 20 ಕೋಟಿ ರೂಪಾಯಿ ಕೇಳಿದ್ದರೆಂಬ ಆರೋಪದ ಬಗ್ಗೆಯೂ ತನಿಖೆ ನಡೆಯಬೇಕು. ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ ಅಧಿಕಾರಿ ಮೇಲೆ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

click me!