ಕಾಂಗ್ರೆಸ್ ನಾಯಕರು ಅಧಿಕಾರಿಕ್ಕೆ ಬಂದೇ ಬಿಡ್ತೀವಿ ಅನ್ನೋತರ ಆಡ್ತಿದ್ದಾರೆ, 2023 ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನವರು 75 ಸೀಟ್ ಗಳನ್ನು ಗೆಲ್ಲುವುದಿಲ್ಲ ಎಂದ ಬಿಎಸ್‌ವೈ
ವರದಿ : ವರದರಾಜ್ ಏಷಿಯಾನೆಟ್ ಸುವರ್ಣ ನ್ಯೂಸ್
ದಾವಣಗೆರೆ (ಜುಲೈ23): ಈಗಾಗಲೇ ನಾನು ಸಿದ್ದರಾಮೋತ್ಸವದ ಬಗ್ಗೆ ಸ್ಪಷ್ಟನೆ ನೀಡಿದ್ದೇನೆ, ಕಾಂಗ್ರೆಸ್ ನಾಯಕರು ಕೂಸು ಹುಟ್ಟುವ ಮುಂಚೆ ಕುಲಾಯಿ ಹೊಲಸಿದ್ರು ಎಂಬತಾಡ್ತಿದ್ದಾರೆ ಎಂದು ಸಿದ್ದರಾಮಯ್ಯ(Siddaramaiah) ಹಾಗು ಡಿಕೆ ಶಿವಕುಮಾರ್(D.K.Shivakumar) ನಡುವೆ ಸಿಎಂ ಗಾದಿಗಾಗಿ ನಡೆಯುತ್ತಿರುವ ಶೀತಲ ಸಮರವನ್ನು ವ್ಯಂಗ್ಯ ಮಾಡಿದರು.
ದಾವಣಗೆರೆ(Davangere) ಜಿಲ್ಲೆಯ ಹೊನ್ನಾಳಿ(Honnaali)ಯ ಶಾಸಕ ಎಂಪಿ ರೇಣುಕಚಾರ್ಯ(M.P.Renukacharya) ನಿವಾಸಕ್ಕೆ ಭೇಟಿ ನೀಡಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ನಾಯಕರು(Congress Leaders) ಅಧಿಕಾರಿಕ್ಕೆ ಬಂದೇ ಬಿಡ್ತೀವಿ ಅನ್ನೋತರ ಕಾಂಗ್ರೆಸ್ ನಾಯಕರ ವರ್ತನೆ ಮುಂದುವರೆದಿದೆ, 2023 ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನವರು 75 ಸೀಟ್ ಗಳನ್ನು ಗೆಲ್ಲುವುದಿಲ್ಲ ಎಂದು ಬಿಎಸ್ ಯಡಿಯೂರಪ್ಪ(B.S.Yadiyurappa) ಭವಿಷ್ಯ ನುಡಿದರು.
ವಿಜಯೇಂದ್ರ ಸ್ಪರ್ಧೆ ಬಗ್ಗೆ ಮತ್ತೊಂದು ಸ್ಪಷ್ಟನೆ ಕೊಟ್ಟ ಯಡಿಯೂರಪ್ಪ
ಮತ್ತೊಮ್ಮೆ ಶಿಕಾರಿಪುರದಲ್ಲಿ ಸ್ಪರ್ಧಿಸಿ ಎಂದು ಕೈಮುಗಿದು ಮನವಿ ಮಾಡಿದ ಅಭಿಮಾನಿಗಳು:
ಹೊನ್ನಾಳಿಯಲ್ಲಿ ಬಿಎಸ್ ಯಡಿಯೂರಪ್ಪ ನವರು ಆಗಮಿಸುತ್ತಿದ್ದಂತೆ ಅವರ ಬಳಿ ಧಾವಿಸಿದ ಅಭಿಮಾನಿಗಳು ನೀವು ಮತ್ತೊಮ್ಮೆ ಶಿಕಾರಿಪುರ ಕ್ಷೇತ್ರದಿಂದ ಸ್ಪರ್ಧಿಸಬೇಕೆಂದು ಕೈ ಮುಗಿದು ಮನವಿ ಮಾಡಿಕೊಂಡರು. ಇದೊಂದು ಬಾರಿ ಬಿಜೆಪಿ ಅಧಿಕಾರಿಕ್ಕೆ ಬಂದ್ರೇ ಅನುಕೂಲ ಆಗುತ್ತೇ ಸ್ವಾಮೀ ನೀವು ಚುನಾವಣೆಯಲ್ಲಿ ಸ್ಪರ್ಧೆ ಮಾಡ್ಬೇಕು ಎಂದು ಅಭಿಮಾನಿಗಳು ಬಿಎಸ್ವೈ ಕಾರಿನ ಬಳಿ ತೆರಳಿ ಕೈ ಮುಗಿದು ಇಂಗಿತ ವ್ಯಕ್ತಪಡಿಸಿದರಿಂದ ಯಡಿಯೂರಪ್ಪ ನವರು ಪ್ರತಿಕ್ರಿಯಿಸಿ ನೋಡೋಣ ಎಂದು ಕಿರುನಗೆ ಬೀರಿದ್ರು
Karnataka News Live Updates: 'ಪಕ್ಷ ಬಯಿಸಿದರೆ ಯಡಿಯೂರಪ್ಪ ಚುನಾವಣೆಯಲ್ಲಿ ನಿಲ್ತಾರೆ
ಯಡಿಯೂರಪ್ಪನವರನ್ನು ಕಂಡು ಭಾವುಕರಾದ ರೇಣುಕಾಚಾರ್ಯ:
ರೇಣುಕಾಚಾರ್ಯ ಮನೆಗೆ ಭೇಟಿ ನೀಡಿದ ನಂತರ ಅವರ ಪಕ್ಕದಲ್ಲೇ ಕೂತ ರೇಣುಕಾಚಾರ್ಯ ಬಿ ಎಸ್ ವೈ ತೆರಳುವವರೆಗು ಒಂದು ರೀತಿಯಲ್ಲಿ ಮೌನಕ್ಕೆ ಶರಣಾಗಿದ್ದರು.ಅವರು ಶಿಕಾರಿಪುರದಲ್ಲಿ ಸ್ಪರ್ಧಿಸುವುದಿಲ್ಲ ಪುತ್ರ ವಿಜಯೆಂದ್ರರನ್ನು ಗೆಲ್ಲಿಸಿ ಎಂದು ಹೇಳಿಕೆ ನೀಡಿದ ನಂತರ ರೇಣುಕಾಚಾರ್ಯ ಬಿ ಎಸ್ ವೈ ಕಂಡು ಕಣ್ಣೀರು ಹಾಕಿದ ಪ್ರಸಂಗವು ನಡೆದಿದೆ. ಯಡಿಯೂರಪ್ಪನವರು ಪ್ರಶ್ನಾತೀತ ನಾಯಕ..ನೂರಾರು ಹೋರಾಟ ಮಾಡಿ ನೂರಾರು ಕೇಸ್ ಗಳನ್ನು ಪಕ್ಷ ಕಟ್ಟಿದ್ದರು.ಎಲ್ಲಾ ವರ್ಗದ ಜನರನ್ನು ಸಮಾನತೆಯಿಂದ ನೋಡುವ ಧೀಮಂತ ನಾಯಕ.ಅವರು ಶಿಕಾರಿಪುರದಿಂದ ಸ್ಪರ್ಧೆ ಮಾಡಬೇಕೆಂದು ಎಲ್ಲಾ ಶಾಸಕರು ಹೇಳುತ್ತಿದ್ದಾರೆ.ಜೊತೆಗೆ ನಾನು ಕೂಡ ಒತ್ತಾಯಿಸುತ್ತೇನೆ.ಹಾಗಂತ ನಾನು ವಿಜಯೆಂದ್ರ ಸ್ಪರ್ಧೆಯನ್ನು ವಿರೋಧ ಮಾಡೋಲ್ಲ..ವಿಜಯೇಂದ್ರ ಚುನಾವಣೆ ಸ್ಪರ್ಧೆ ಬಗ್ಗೆ ಕೇಂದ್ರದ ನಾಯಕರು ವರಿಷ್ಠರು ತೀರ್ಮಾನ ಮಾಡುತ್ತಾರೆ. ಯಡಿಯೂರಪ್ಪನವರ ಬಗ್ಗೆ ನನಗೆ ಆಪಾರ ಗೌರವ ಇದೆ ಯಡಿಯೂರಪ್ಪನವರು ಮತ್ತೊಮ್ಮೆ ರಾಜ್ಯ ಪ್ರವಾಸ ಮಾಡಿ ಬಿಜೆಪಿ ಅಧಿಕಾರಕ್ಕೆ ತರಬೇಕಿದೆ.