ಆರ್‌ಎಸ್‌ಎಸ್‌ ಬಗ್ಗೆ ಮಾತಾಡಲು ಕಾಂಗ್ರೆಸ್‌ಗೆ ನೈತಿಕತೆ ಇಲ್ಲ: ವಿಜಯೇಂದ್ರ

By Kannadaprabha News  |  First Published Oct 1, 2022, 8:00 PM IST

ಪಿಎಫ್‌ಐನ್ನು ಆರ್‌ಎಸ್‌ಎಸ್‌ಗೆ ಹೋಲಿಸುವುದು ಸರಿಯಲ್ಲ: ವಿಜೇಯೆಂದ್ರ ಕಿಡಿ


ಹುಮನಾಬಾದ್(ಅ.01): ದೇಶಕ್ಕಾಗಿ ಶ್ರಮಿಸುತ್ತಿರುವ ಆರ್‌ಎಸ್‌ಎಸ್‌ ಸಂಘಟನೆ ಬಗ್ಗೆ ಮಾತಾಡಲು ಕಾಂಗ್ರೆಸ್‌ ಪಕ್ಷಕ್ಕೆ ನೈತಿಕತೆ ಇಲ್ಲ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಾಂಗ್ರೆಸ್‌ ಮುಖಂಡರ ವಿರುದ್ಧ ಕಿಡಿಕಾರಿದರು.

ಶುಕ್ರವಾರ ತಾಲೂಕಿನ ಹುಡಗಿ ಗ್ರಾಮದಲ್ಲಿ ಎಸ್‌.ಟಿ ಮೋರ್ಚಾ ವತಿಯಿಂದ ಪ್ರಧಾನಿ ಮೋದಿ ಅವರ ಜನ್ಮದಿನ ನಿಮಿತ್ತ ಶಾಲಾ ಮಕ್ಕಳಿಗೆ ಬ್ಯಾಗ್‌ ವಿತರಣೆಗೆ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್‌ಎಸ್‌ಎಸ್‌ ಹಿನ್ನೆಲೆ ಗೊತ್ತಿರದವರು ಬ್ಯಾನ್‌ ಮಾಡುವ ಕುರಿತು ಮಾತನಾಡುತ್ತಿದ್ದಾರೆ. ಕಾಂಗ್ರೆಸ್‌ನ ಅನೇಕ ಮುಖಂಡರು ಈ ರೀತಿ ಉಡಾಫೆ ಮಾತುಗಳು ಹೇಳುತ್ತಿದ್ದಾರೆ. ಇದೀಗ ಪಿಎಫ್‌ಐ ಸಂಘಟನೆ ಬ್ಯಾನ್‌ ಆಗಿದ್ದು, ದೇಶಕ್ಕಾಗಿ ಶ್ರಮಿಸುವ ಆರ್‌ಎಸ್‌ಎಸ್‌ ಸಂಘಟನೆಯೊಂದಿಗೆ ಹೋಲಿಕೆ ಮಾಡುವ ದುಸ್ಸಹಾಸ ಕಾಂಗ್ರೆಸ್‌ ಮುಖಂಡರು ಮಾಡುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

Latest Videos

undefined

ಕಾಂಗ್ರೆಸ್‌ ಲೀಡರ್‌ಲೆಸ್‌ ಪಾರ್ಟಿ, ಸಿದ್ದು ಡರ್ಟಿ ಪಾಲಿಟಿಕ್ಸ್‌: ಅರುಣ ಸಿಂಗ್‌

ಆರ್‌ಎಸ್‌ಎಸ್‌ ಎಲ್ಲಿಯೂ ದೇಶ ವಿರೋಧಿ ಚಟುವಟಿಕೆಗಳಲ್ಲಿ ಭಾಗವಹಿಸಿಲ್ಲ. ಇದು ದೇಶ ಕಟ್ಟುವ ವಿಚಾರಧಾರೆ ಹೊಂದಿದೆ ಎಂಬುದು ತಿಳಿದುಕೊಳ್ಳಬೇಕು. ಬಿಜೆಪಿಯ ನಾಯಕರು ಸಂಘದಿಂದ ಬೆಳೆದು ಬಂದಿದ್ದಾರೆ ಎಂದ ಅವರು ಕಾಂಗ್ರೆಸ್‌ನ ಭಾರತ್‌ ಜೋಡೋ ಯಾತ್ರೆಯಿಂದ ಬಿಜೆಪಿಗೆ ಯಾವುದೇ ರೀತಿಯ ಪರಿಣಾಮ ಬೀಳಲ್ಲ ಎಂದರು.

ಪಕ್ಷದ ಜಿಲ್ಲಾಧ್ಯಕ್ಷ ಶಿವಾನಂದ ಮಂಠಾಳಕರ್‌, ಬಸವಕಲ್ಯಾಣ ಶಾಸಕ ಶರಣು ಸಲಗರ, ಬುಡಾ ಅಧ್ಯಕ್ಷ ಬಾಬುವಾಲಿ, ಮಾಜಿ ಶಾಸಕ ಪ್ರಕಾಶ ಖಂಡ್ರೆ, ಮುಖಂಡರಾದ ಈಶ್ಚರ ಸಿಂಗ್‌ ಠಾಕೂರ್‌, ಬಸವರಾಜ ಆರ್ಯ, ಸೋಮನಾಥ ಪಾಟೀಲ, ಡಾ. ಸಿದ್ದಲಿಂಗಪ್ಪ ಪಾಟೀಲ, ಚಂದು ಪಾಟೀಲ, ಪದ್ಮಾಕರ್‌ ಪಾಟೀಲ, ಸುಭಾಷ ಗಂಗಾ, ಪ್ರಭಾಕರ ನಾಗರಾಳೆ, ಮಹೇಶ ಪಾಲಂ, ಗುಂಡುರೆಡ್ಡಿ, ವಿಶ್ವನಾಥ ಪಾಟೀಲ, ನಾಗೇಶ ಕಲ್ಲೂರ್‌, ಎಸ್‌.ಟಿ ಮೋರ್ಚಾ ಮುಖಂಡ ದಯಾನಂದ ಮೇತ್ರೆ, ಪ್ರಕಾಶ ತಾಳಮಡಗಿ ಇದ್ದರು.
 

click me!