
ಬೆಂಗಳೂರು (ಏ.04): ಕಾಂಗ್ರೆಸ್‌ಗೆ ಅಂಬೇಡ್ಕರ್ ಅವರ ಮೇಲೆ ಹಾಗೂ ಅವರು ಬರೆದಿರುವ ಸಂವಿಧಾನದ ಮೇಲೆ ನಂಬಿಕೆ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೀಸಲಾತಿ ಕುರಿತು ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ ಅವರ ಟ್ವೀಟ್ ಕುರಿತು ಸೋಮವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಮೀಸಲಾತಿ ನೀಡಿರುವುದು ಕಾನೂನು ಬಾಹಿರ, ಸಂವಿಧಾನ ವಿರೋಧಿ ಎಂದು ಕೆಳಮಟ್ಟದ ಶಬ್ದಗಳನ್ನು ಬಳಸಿದ್ದಾರೆ. ಜನಸಂಖ್ಯೆ ಆಧಾರಿತವಾಗಿ ಮೀಸಲಾತಿ ನೀಡಬೇಕು ಎಂದು ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಅವಕಾಶ ಕಲ್ಪಿಸಿದ್ದಾರೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯಗಳ ಬಹು ವರ್ಷಗಳ ಬೇಡಿಕೆಯನ್ನು ಈಡೇರಿಸಿ ಸಂವಿಧಾನದ ಪರಿಚ್ಛೇದ 9ಕ್ಕೆ ಸೇರಿಸಲು ಶಿಫಾರಸು ಮಾಡಲಾಗಿದೆ ಎಂದರು. ಕಾಂಗ್ರೆಸ್ ಅವರ ಕಾಲದಲ್ಲಿ ಏನೂ ಮಾಡದೇ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರನ್ನು ಬರೀ ಮತ ಬ್ಯಾಂಕ್‌ಗಾಗಿ ಬಳಕೆ ಮಾಡಲಾಗಿದೆ. ನಾಗಮೋಹನ್ ದಾಸ್ ವರದಿ ಬಂದು ನಾಲ್ಕು ವರ್ಷ ಆಗಿದೆ ಎಂದು ಸುಳ್ಳು ಹೇಳುತ್ತಿದ್ದಾರೆ. ಯಡಿಯೂರಪ್ಪ ಅವಧಿಯಲ್ಲಿ ವರದಿ ಬಂದ ಆರು ತಿಂಗಳಿಗೆ ವಿಸ್ತರಣೆ ಮಾಡಿದರು. ನನ್ನ ಅವಧಿಯಲ್ಲಿ ಸರ್ವ ಪಕ್ಷಗಳ ಸಭೆ ಕರೆದು ಒಪ್ಪಿಗೆ ಪಡೆಯಲಾಯಿತು. ನಂತರ ಸಚಿವ ಸಂಪುಟದಲ್ಲಿ ಪರಿಶಿಷ್ಟಜಾತಿ ಮತ್ತು ಪಂಗಡದವರ ಪರ ನಿರ್ಣಯ ಕೈಗೊಳ್ಳಲಾಯಿತು. ಈಗ ಆದೇಶ ಹೊರಡಿಸಿ ಶೆಡ್ಯೂಲ್ 9 ಕ್ಕೆ ಸೇರಿಸಲಾಗಿದೆ ಎಂದು ಹೇಳಿದರು.
ಮುಸ್ಲಿಮರಿಗೆ ಸೌಲಭ್ಯ ನೀಡಿಲ್ಲವೆಂದರೆ ರಾಜಕೀಯ ನಿವೃತ್ತಿ: ಬಿ.ಎಸ್.ಯಡಿಯೂರಪ್ಪ
ನಮ್ಮ ಕೆಲಸ ನೋಡಿ ಕಾಂಗ್ರೆಸ್ ತಳಮಳ: ನಾವು ಸಾಮಾಜಿಕ ನ್ಯಾಯದ ಪರಿಪಾಲನೆ ಮಾಡಿರುವುದನ್ನು ಟೀಕೆ ಮಾಡುತ್ತಿದ್ದಾರೆ. ಕಾಂಗ್ರೆಸ್ ದಲಿತ, ಹಿಂದುಳಿದ ವರ್ಗ, ಲಿಂಗಾಯತ, ಒಕ್ಕಲಿಗರ ವಿರೋಧಿಯಾಗಿದೆ. ಎಲ್ಲರಿಗೂ ನ್ಯಾಯ ಕೊಡಿಸುವ ಕೆಲಸ ಮಾಡುತ್ತಿದ್ದೇವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಮೀಸಲಾತಿ ಹಿಂಪಡೆಯುವುದಾಗಿ ಹೇಳುತ್ತಿದೆ. ಅವರು ಅಧಿಕಾರಕ್ಕೆ ಬರುವ ಹಾಗೂ ಹಿಂಪಡೆಯುವ ಪ್ರಶ್ನೆಯೇ ಇಲ್ಲ. ಅವರಿಗೆ ಆ ಶಕ್ತಿ ಹಾಗೂ ಅವಕಾಶವೂ ಇಲ್ಲ. ನಮ್ಮ ಕೆಲಸ ನೋಡಿ ತಳಮಳಗೊಂಡು ಈ ರೀತಿ ಮಾತನಾಡುತ್ತಿದ್ದಾರೆ ಎಂದರು.
ಕಾಂಗ್ರೆಸ್ಸಿನವರು ಮಕ್ಮಲ್ ಟೋಪಿ ಹಾಕ್ತಾರೆ: ಕಾಂಗ್ರೆಸ್ಸಿನವರು ಕೆಲಸ ಮಾಡುವುದಕ್ಕಿಂತ ಸುಳ್ಳು ಹೇಳಿ ಜನರಿಗೆ ಮಕ್ಮಲ್ ಟೋಪಿ ಹಾಕುತ್ತಾರೆ, ಹುಷಾರಾಗಿರಬೇಕು ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಹೇಳಿದರು. ತಾಲೂಕಿನ ಮರಳಿ ಬಳಿಯ ರಿಚ್ ಹೋಟೆಲ್‌ನಲ್ಲಿ ಜರುಗಿದ ಬಿಜೆಪಿ ಡಿಜಿಟಲ್ ಕಾರ್ಯಕರ್ತರು ಸಮ್ಮೇಳನದಲ್ಲಿ ಅವರು ಮಾತನಾಡಿದರು. ಕಾಂಗ್ರೆಸ್ಸಿನವರಿಗೆ ಕೆಲಸವಿಲ್ಲ, ಜನರಿಗೆ ಮೋಸ ಮಾಡುವುದೇ ದೊಡ್ಡ ಕೆಲಸವಾಗಿದೆ. ಕಾಂಗ್ರೆಸ್ಸಿನವರು ಗ್ಯಾರಂಟಿ ಕಾರ್ಡ್ ಕೊಡುವುದಾಗಿ ಹೇಳುತ್ತಾರೆ.
ಕಾಂಗ್ರೆಸ್ಸಿನ ಗ್ಯಾರಂಟಿ ಕಾರ್ಡ್‌ಗೆ ಮೋಸ ಹೋಗಬೇಡಿ: ಸಚಿವ ಹಾಲಪ್ಪ ಆಚಾರ್
ಇದು ಶುದ್ಧ ಸುಳ್ಳು ಎಂದು ಹೇಳಿದ ಅವರು, ಬಿಜೆಪಿ ಸರ್ಕಾರ ತಾಂಡಾಗಳ 1.85 ಲಕ್ಷ ಜನರಿಗೆ ಹಕ್ಕು ನೀಡಿದೆ. ಇದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಾಧನೆಯಾಗಿದೆ ಎಂದರು. ಕಾರ್ಯಕರ್ತರು ಸಭೆ, ಬೈಠಕ್‌ಗಳನ್ನು ಮೊಬೈಲ್‌ನಲ್ಲಿ ರಿಕಾರ್ಡ್ ಮಾಡಬೇಡಿ, ಇದು ದುರಭ್ಯಾಸವಾಗಿದೆ. ಸರ್ಕಾರದ ಯೋಜನೆ, ಪ್ರಗತಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಾಕಿ ಜನರಿಗೆ ಮಾಹಿತಿ ನೀಡಬೇಕು ಎಂದರು. ಮೇ 14ರ ವರೆಗೆ ಬಿಜೆಪಿಯ ಯಾವ ಕಾರ್ಯಕರ್ತರೂ ವಿಶ್ರಾಂತಿ ಪಡೆಯಬಾರದು. ಮೇ 14ಕ್ಕೆ ಪ್ರಮಾಣ ವಚನ ಸ್ವೀಕಾರ, ಬಿಜೆಪಿಯ ಪರಿಪೂರ್ಣ ಸರ್ಕಾರ ಬರುತ್ತದೆ ಎಂದು ಸಂತೋಷ ವಿಶ್ವಾಸ ವ್ಯಕ್ತಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.