ಸ್‌ಡಿಪಿಐ ಪಿಎಫ್ಐ ಜೊತೆ ಕಾಂಗ್ರೆಸ್ ನೇರ ಹೊಂದಾಣಿಕೆ ಮಾಡಿಕೊಂಡಿದೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ(KS Eshwarappa) ಆರೋಪ ಮಾಡಿದ್ದಾರೆ.
ಶಿವಮೊಗ್ಗ (ಮಾ.18) : ದೇಶದ್ರೋಹಿ ಎಸ್‌ಡಿಪಿಐ ಪಿಎಫ್ಐ ಜೊತೆ ಕಾಂಗ್ರೆಸ್ ನೇರ ಹೊಂದಾಣಿಕೆ ಮಾಡಿಕೊಂಡಿದೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ(KS Eshwarappa) ಆರೋಪ ಮಾಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರದ್ರೋಹಿ ಸಂಘಟನೆಗಳು ಬಾಂಬ್ ಉತ್ಪಾದನೆ ಪ್ರಯತ್ನ ನಡೆಸಿ, ಉಗ್ರ ಚಟುವಟಿಕೆಯಲ್ಲಿ ಈ ಸಂಘಟನೆಗಳು ಯುವಕರಿಗೆ ಕುಮ್ಮಕ್ಕು ನೀಡಿತ್ತು. ರಾಜ್ಯದ ಗೃಹ ಇಲಾಖೆ ಈ ರೀತಿ ದುಷ್ಕೃತ್ಯ ನಡೆಸಿದವರನ್ನು ಬಂಧಿಸಿತ್ತು. ಅನೇಕ ಮುಸಲ್ಮಾನ್ ಗೂಂಡಾಗಳನ್ನು ಗಡಿಪಾರು ಮಾಡಿದೆ ಎಂದರು.
ಶಾಂತವಾಗಿದ್ದ ಶಿವಮೊಗ್ಗ(Shivamogga)ದಲ್ಲಿ ಹರ್ಷನ ಕೊಲೆ(Harsha Murder case)ಯಾಗಿತ್ತು. ಸಾವರ್ಕರ್ ಫ್ಲೆಕ್ಸ್ ಹರಿದು ಹಾಕಲಾಗಿತ್ತು. ಕುಕ್ಕರ್ ಬಾಂಬ್ ಸ್ಫೋಟದಲ್ಲಿ ಬಂಧಿತ ವ್ಯಕ್ತಿ ಅಮಾಯಕ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್(DK Shivakumar) ಹೇಳಿಕೆ ನೀಡಿದ್ದರು. ಆದರೆ ಆತ ಉಗ್ರ ಸಂಘಟನೆ ಜೊತೆ ಸಂಪರ್ಕ ಇರುವುದು ಗೊತ್ತಾಗಿದೆ. ಹೀಗಿದ್ದರೂ ಕೆಲವು ಕಾಂಗ್ರೆಸ್ ಮುಖಂಡರು ದೇಶದ್ರೋಹಿಗಳನ್ನು ಬೆಂಬಲಿಸಿಕೊಂಡು ಬರುತ್ತಿರುವುದು ನಿಜಕ್ಕೂ ದುರಂತದ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
Hijab Row: ಕಾಂಗ್ರೆಸ್, ಎಸ್‌ಡಿಪಿಐ ಒಳ ಒಪ್ಪಂದವಿದು: ಕಟೀಲ್
ಕೋಲಾರ(Kolar)ದಲ್ಲಿ ಮಾಜಿ ಸಿಎಂ ಸಿದ್ಧರಾಮಯ್ಯ(Siddaramaiah) ಸ್ಪರ್ಧಿಸುವುದಿಲ್ಲ ಎಂದು ನಾನು ಇದನ್ನು ಮೊದಲೇ ಹೇಳಿದ್ದೆ. ಅವರು ಕೋಲಾರದಿಂದ ಸ್ಪರ್ಧೆ ಮಾಡಲ್ಲ ಎಂದಿದ್ದೆ. ಅಲ್ಲಿ ಹಿಂದುಳಿದವರ ಸಂಖ್ಯೆ ಹೆಚ್ಚಿದೆ. ಸಿದ್ದರಾಮಯ್ಯ ಎಲ್ಲಿ ಹೋಗ್ತಾರೋ ಗೊತ್ತಿಲ್ಲ. ಬದಾಮಿ ಕ್ಷೇತ್ರ ದೂರ ಆಗುತ್ತೆ, ವರುಣಗೂ ಹೋಗಲ್ಲ. ಮೂರ್ನಾಲ್ಕು ಬಾರಿ ಗೆದ್ದ ಚಾಮುಂಡೇಶ್ವರಿ ಕ್ಷೇತ್ರ(Chamundeshwari constituency) ಹತ್ತಿರವಿದೆ. ಅಲ್ಲಿ ಹೋಗಲ್ಲ ಇವರು. ಏಕೆಂದರೆ ಅಲ್ಲಿ ಅವರಿಗೆ ಜನ ಸೋಲಿಸ್ತಾರೆ ಎಂಬ ಭಯ ಇದೆ ಎಂದು ವ್ಯಂಗ್ಯವಾಡಿದರು.
ಯಾವುದೇ ಕಾರಣಕ್ಕೂ ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧಿಸಲ್ಲ. ಇದನ್ನು ಹಿಂದಿನಿಂದಲೂ ನಾನು ಹೇಳುತ್ತಾ ಬಂದಿದ್ದೇನೆ. ಸಿದ್ದರಾಮಯ್ಯಗೆ ಯಾವುದೇ ಜಾತಿ ಬೆಂಬಲ ಇಲ್ಲ. ಲಿಂಗಾಯತರು ಬೆಂಬಲಿಸಲ್ಲ, ಒಕ್ಕಲಿಗರು ಮತ ಹಾಕಲ್ಲ. ಕುರುಬರು ಅವರ ಜೊತೆ ಇಲ್ಲ. ಅಲ್ಪಸಂಖ್ಯಾತರನ್ನು ಮಾತ್ರ ಅವರು ಅವಲಂಬಿಸಿದ್ದಾರೆ ಎಂದರು.
ಬಿಜೆಪಿ ಅತಿ ದೊಡ್ಡ ರಾಷ್ಟ್ರೀಯ ಪಕ್ಷವಾಗಿದೆ. ಹೀಗಾಗಿ ಅಲ್ಲಲ್ಲಿ ಅಸಮಾಧಾನ ಇರುವುದು ಸಹಜ. ಪಕ್ಷದಲ್ಲಿನ ಎಲ್ಲಾ ಗೊಂದಲ ನಿವಾರಣೆ ಆಗುತ್ತೆ. ಸಚಿವ ವಿ. ಸೋಮಣ್ಣ ವಿಚಾರ ಬಗೆಹರಿದಿದೆ.ರಮೇಶ್ ಜಾರಕಿಹೊಳಿ ವಿಚಾರವೂ ನಿವಾರಣೆಯಾಗಿದೆ ಎಂದರು.
ಕಾಂಗ್ರೆಸ್, ಎಸ್‌ಡಿಪಿಐ ನಂಟು ತನಿಖೆ ಆಗಲಿ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
ಮಾರ್ಚ್ 25ರಂದು ದಾವಣಗೆರೆಗೆ ಪ್ರಧಾನಿ ನರೇಂದ್ರ ಮೋದಿ ಬರಲಿದ್ದಾರೆ. 10 ಲಕ್ಷ ಜನ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಇನ್ನು ವಿಜಯ ಸಂಕಲ್ಪ ಯಾತ್ರೆ ಮಾ.1ರಿಂದ ಆರಂಭವಾಗಿತ್ತು. ಹಳೇ ಮೈಸೂರಿನಿಂದ ತಮ್ಮ ಯಾತ್ರೆ ಆರಂಭ ಆಗಿತ್ತು. ಹೋದಲ್ಲೆಲ್ಲ ಅಭೂತ ಪೂರ್ವ ಬೆಂಬಲ ವ್ಯಕ್ತವಾಗಿದೆ. ಮೂರು ಕ್ಷೇತ್ರ ಬಾಕಿ ಉಳಿದಿದ್ದು ಇಂದು ಬೆಳಿಗ್ಗೆ ಶಿವಮೊಗ್ಗ ಗ್ರಾಮಾಂತರ, ಸಂಜೆ ನಗರದಲ್ಲಿ ಯಾತ್ರೆ ಸಂಚರಿಸಲಿದೆ. ನಗರದ ಕಾರ್ಯಕ್ರಮಕ್ಕೆ ಮಾಜಿ ಸಿಎಂ ಯಡಿಯೂರಪ್ಪ, ಕೇಂದ್ರ ಸಚಿವ ಪ್ರಲ್ಹಾದ ಜೋಷಿ ಭಾಗಿಯಾಗಲಿದ್ದಾರೆ ಎಂದು ಹೇಳಿದರು.
ಗೋಷ್ಠಿಯಲ್ಲಿ ಶಾಸಕರಾದ ಕೆಬಿ ಅಶೋಕ ನಾಯ್ಕ್, ಡಿ.ಎಸ್. ಅರುಣ್, ಎಸ್. ರುದ್ರೇಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ಪ್ರಮುಖರಾದ ಎಸ್. ದತ್ತಾತ್ರಿ ಮತ್ತಿತರರು ಉಪಸ್ಥಿತರಿದ್ದರು.