ಚುನಾವಣೆಯಲ್ಲಿ ಗೆಲುವಿಗಾಗಿ ಶ್ರಮದ ಜೊತೆಗೆ ಅದೃಷ್ಟದ ಮೊರೆ ಹೋದ ಕೆಪಿಸಿಸಿ ಅಧ್ಯಕ್ಷ
ಬರೋಬ್ಬರಿ 42 ವರ್ಷಗಳ ಬಳಿಕ ಕಾಂಗ್ರೆಸ್ ಹಸ್ತದ ಗುರುತು ಬದಲಾವಣೆ
ಹಸ್ತದ ಗುರತಿನಲ್ಲಿರುವ ಕೈ ರೇಖೆಗಳನ್ನು ಬದಲಿಸಲಾಗಿದೆ
ಬೆಂಗಳೂರು (ಫೆ.07): ಕಾಂಗ್ರೆಸ್‌ನಲ್ಲಿ ಅದೃಷ್ಟ ಹಾಗೂ ದೈವದ ಮೊರೆ ಹೋಗಿರುವ ಡಿ.ಕೆ. ಶಿವಕುಮಾರ್ ಕಾಂಗ್ರೆಸ್‌ನ ಹಸ್ತದ ಗುರುತಿನ ಚಿಹ್ನೆಯಲ್ಲಿದ್ದ ರೇಖೆಯನ್ನೇ ಬದಲಿಸಿದ್ದಾರೆ. ಅದನ್ನೂ ಕೂಡ ಸಂಖ್ಯಾಶಾಸ್ತ್ರಜ್ಞರ ಸಲಹೆಯ ಮೇರೆಗೆ ತಮಗೆ ಅದೃಷ್ಟ ಲಭ್ಯವಾಘಲಿದೆ ಎಂದು ಮನವರಿಕೆ ಮಾಡಿಕೊಂಡೇ ಬದಲಾವಣೆ ಮಾಡಲಾಗಿದೆ ಎಂಬುದು ತಿಳಿದಿಬಂದಿದೆ.
ರಾಜ್ಯದ ಮುಂಬರುವ ಚುನಾವಣೆಯಲ್ಲಿ ಗೆಲುವು ಸಾಧಿಸಲೇಬೇಕು, ರಾಜ್ಯದ ಚುಕ್ಕಾಣಿ ಹಿಡಿಯಲೇಬೇಕು ಎಂದು ನಿರ್ಧರಿಸಿರುವ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮೂರೂ ಪಕ್ಷಗಳು ವಿವಿಧ ಕಸರತ್ತುಗಳನ್ನು ಮಾಡುತ್ತಿವೆ. ಆದರೆ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಈ ಬಾರಿ ಶತಾಯ ಗತಾಯ ಕಾಂಗ್ರೆಸ್ ಅಧಿಕಾರಕ್ಕೆ ತರಲೇಬೇಕು ಎಂದು ಚುನಾವಣಾ ಕಾರ್ಯದಲ್ಲಿ ನಿರತಗರಾಗಿದ್ದಾರೆ. ಅದರಲ್ಲಿಯೂ ಈಗಾಗಲೇ ಮಾಜಿ ಪ್ರಧಾನಮಂತ್ರಿಗಳಾದ ಎಚ್.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ. ಕೃಷ್ಣ, ಸಿದ್ದರಾಮಯ್ಯ ಹಾಗೂ ಎಚ್.ಡಿ. ಕುಮಾರಸ್ವಾಮಿ ಅವರು ರಾಜಕೀಯ ಪ್ರಚಾರ ಕಾರ್ಯವನ್ನು ಆರಂಭಿಸಿದ ರಾಜ್ಯದ ಕುಬೇರ ಮೂಲೆಯಲ್ಲಿರುವ ಕುರುಡುಮಲೆ ಗಣೇಶನ ಸನ್ನಿಧಾನದಿಂದಲೇ ಪ್ರಚಾರ ಕಾರ್ಯವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕೂಡ ಆರಂಭಿಸಿದ್ದಾರೆ. ಈಗ ಸಂಖ್ಯಾಶಾಸ್ತ್ರದ ಮೊರೆ ಹೋಗಿರುವ ಅವರು ಮತ್ತೊಂದು ಕಾಂಗ್ರೆಸ್‌ನ ಹಸ್ತದ ಗುರುತನ್ನೇ ಬದಲಾವಣೆ ಮಾಡಲು ಮುಂದಾಗಿದ್ದಾರೆ.
Assembly Election: ಕುಬೇರನ ಮೂಲೆಯಿಂದಲೇ ಶುರು "ಬಂಡೆ" ದಂಡಯಾತ್ರೆ!
1980ರಲ್ಲಿ ರಚಿಸಲಾದ ಹಸ್ತದ ಗುರುತು ಬದಲು:
ದೇಶದಲ್ಲಿ 1980 ರಲ್ಲಿ ಕಾಂಗ್ರೆಸ್ ಪಕ್ಷದ ಅಧಿಕೃತ ಚಿಹ್ನೆಯಾಗಿ ಹಸ್ತದ ಗುರುತನ್ನು ರಚನೆ ಮಾಡಿ ಚಾಲ್ತಿಗೆ ತರಲಾಗಿದೆ. ಅಲ್ಲಿಂದ ಇಲ್ಲಿಯವರೆಗೂ ಯಾರೊಬ್ಬರೂ ಕೂಡ ಹಸ್ತದ ಗುರುತನ್ನು ಬದಲು ಮಾಡಲು ಮುಂದಾಗಿಲ್ಲ. ಆದರೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಮ್ಮ ಅದೃಷ್ಟದ ಕಾರಣಕ್ಕೆ ಕೈ ರೇಖೆಯನ್ನೇ ಬದಲಾವಣೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಬರೋಬ್ಬರಿ 42 ವರ್ಷಗಳ ಬಳಿಕ ಕಾಂಗ್ರೆಸ್ ಹಸ್ತದ ಗುರುತು ಬದಲಾವಣೆ ಮಾಡಲಾಗಿದೆ. ಹಲವಾರು ರಾಜಕೀಯ ವಿದ್ಯಮಾನಗಳ ನಡುವೆ ಕಾಂಗ್ರೆಸ್‌ನ ಹಸ್ತದ ಗುರುತಿನ ರೇಖೆಗಳನ್ನು ಬದಲಿಸಲಾಗಿದೆ. ಈ ಹಿಂದಿನ ಹಸ್ತದಲ್ಲಿ ಒಟ್ಟು ಮೂರು ಗೆರೆಗಳು ಇದ್ದವು. ಈಗ ಮತ್ತೊಂದು ಗೆರೆಯನ್ನು ಎಳೆಯಲಾಗಿದೆ.
ಡಿಕೆಶಿ ಪ್ರಜಾಧ್ವನಿ ಯಾತ್ರೆಯಲ್ಲಿ ಮಾತ್ರ ಬಳಕೆ: ಹೊಸದಾಗಿ ಡಿ.ಕೆ. ಶವಕುಮಾರ್ ಅವರು ಬದಲಾವಣೆ ಮಾಡಿರುವ ಹಸ್ತದಲ್ಲಿ ಮೂರು ಗೆರೆಯ ಜೊತೆಗೆ ಮಧ್ಯದಲ್ಲಿ ಒಂದು ಗೆರೆ ಎಳೆಯಲಾಗಿದೆ. ಈ ಗೆರೆ ತೋರು ಬೆರಳು ಮತ್ತು ಮಧ್ಯದ ಬೆರಳಿನ ಮಧ್ಯ ತಲುಪುತ್ತದೆ. ಇದನ್ನು ಖ್ಯಾತ ಸಂಖ್ಯಾಶಾಸ್ತ್ರಜ್ಞರ ಸಲಹೆ ಮೇರೆಗೆ ಹಸ್ತದಲ್ಲಿ ರೇಖೆ ಬದಲಾವಣೆ ಮಾಡಿದ ಮಾಡಲಾಗಿದೆ ಎಂದು ಕೇಳಿಬರುತ್ತಿದೆ. ಇನ್ನು ಈ ಬದಲಾವಣೆಯ ಹೊಸ ಮಾದರಿಯ ಹಸ್ತದ ಗುರುತನ್ನು ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ಪ್ರಜಾಧ್ವನಿ ಯಾತ್ರೆಯಲ್ಲಿ ಮಾತ್ರ ಬಳಕೆಯಾಗುತ್ತಿದೆ.
ಡಿಕೆಶಿ ಕುಟುಂಬದ ಬಗ್ಗೆ ವಿಡಿಯೋ: 2 ಯುಟ್ಯೂಬ್ ಚಾನಲ್‌ಗೆ ಕೇಸ್ ಬಿಸಿ
ಹಳೆಯ ಚಿಹ್ನೆಯನ್ನೇ ಬಳಸುತ್ತಿರುವ ಸಿದ್ದರಾಮಯ್ಯ: ರಾಜ್ಯದಲ್ಲಿ ಎರಡು ತಂಡಗಳಾಗಿ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ಮಾಡಲಾಗುತ್ತಿದೆ. ಅದರಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆಸುತ್ತಿರುವ ಪ್ರಜಾಧ್ವನಿ ಯಾತ್ರೆಯಲ್ಲಿ ಹಳೆಯ ಹಸ್ತದ ಗುರುತು ಬಳಸಲಾಗುತ್ತಿದೆ. ಇನ್ನು ಡಿ.ಕೆ. ಶಿವಕುಮಾರ್ ಮಾತ್ರ ಸಂಖ್ಯಾಶಾಸ್ತ್ರದ ಮೊರೆ ಹೋದ ಕಾಂಗ್ರೆಸ್ ಚಿಹ್ನೆಯನ್ನು ಬಳಸುತ್ತಿದ್ದಾರೆ. ಆದರೆ, ಈ ಹಸ್ತದ ರೇಖೆ ಬದಲಿಸಿರುವ ಚಿಹ್ನೆಯ ಬಳಕೆಗೆ ಕಾಂಗ್ರೆಸ್ ಪಡಸಾಲೆಯಲ್ಲೇ ಹಲವು ಚರ್ಚೆಗಳು ಆರಂಭವಾಗಿವೆ.
ಹಸ್ತದಲ್ಲಾದ ಬದಲಾವಣೆಗಳು ಏನು.?