
ಬೆಳಗಾವಿ (ಜೂ.03): ಲೋಕಸಭಾ ಚುನಾವಣೆ ಮುಗಿದ ಬಳಿಕ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಸ್ಥಗಿತಗೊಳ್ಳುತ್ತವೆ ಎಂದು ರಾಜ್ಯಸಭಾ ಮಾಜಿ ಸದಸ್ಯ ಡಾ.ಪ್ರಭಾಕರ ಕೋರೆ ಭವಿಷ್ಯ ನುಡಿದರು. ನಗರದ ಗಾಂಧಿಭವನದಲ್ಲಿ ಮಂಗಳವಾರ ಬೆಳಗಾವಿ ಉತ್ತರ ಮಂಡಲದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಮೊದಲನೆ ಸಲ ಬೇಟಿ ಬಚಾವ್ ಬೇಟಿ ಪಾಡಾವ್ ಯೋಜನಡಿ ಭಾಗ್ಯಲಕ್ಷ್ಮಿ ಯೋಜನೆ ರಾಜ್ಯದಲ್ಲಿ ಯಡಿಯೂರಪ್ಪ ಜಾರಿಗೆ ತಂದರು. ಆದರೆ, ಈಗನ ಸರ್ಕಾರ ಆ ಯೋಜನೆ ರದ್ದು ಮಾಡಿದ್ದಾರೆ. ಬಾಲ ಸಂಜೀವಿನಿ ಯೋಜನೆ ರದ್ದು ಮಾಡಿದ್ದಾರೆ.
ಈಗಿನ ಸರ್ಕಾರದ ಹತ್ತಿರ ದುಡ್ಡೆ ಇಲ್ಲ. ಅವರ ಗ್ಯಾರಂಟಿ ಸಲುವಾಗಿ ಎಲ್ಲ ಯೋಜನೆಗಳು ಸ್ಥಗಿತಗೊಂಡಿದೆ. ಲೋಕಸಭಾ ಚುನಾವಣೆ ಮೂಗಿದ ಬಳಿಕ ಅವರ ಗ್ಯಾರಂಟಿಗಳು ನಿಲ್ಲಲಿದೆ. ಅವರ ಗ್ಯಾರಂಟಿಗೆ ಮರಳಾಗಬೇಡಿ ಎಂದು ತಿಳಿಸಿದರು. ಮಾಜಿ ಸಿಎಂ, ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಮಾತನಾಡಿ, ಹುಬ್ಬಳ್ಳಿಯಲ್ಲಿ ನೇಹಾ ಹತ್ಯೆ ಆಗಿದ್ದು, ಲವ್ ಜಿಹಾದ್ ಮಾಡಿ ಬ್ರೇನ್ ವಾಷ್ ಮಾಡಲಾಗಿದೆ. ಇದನ್ನು ಸಿದ್ದರಾಮಯ್ಯ ಖಂಡಿಸುವ ಕೆಲಸ ಮಾಡುತ್ತಿಲ್ಲ. ಸಿದ್ದರಾಮಯ್ಯ ವೈಯಕ್ತಿಕ ಕಾರಣಕ್ಕೆ ಮರ್ಡರ್ ಆಗಿದೆ ಎಂದು ಹೇಳಿದ್ದಾರೆ. ಹಿಂದು ಹುಡುಗ ಮುಸ್ಲಿಂ ಹುಡುಗಿಯನ್ನು ಮರ್ಡರ್ ಮಾಡಿದ್ದರೇ ಅವರ ಮನೆಗೆ ಓಡಿ ಹೋಗ್ತಿದ್ದರು ಎಂದು ಕಾಂಗ್ರೆಸ್ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದರು.
ಪೆನ್‌ಡ್ರೈವ್ ಸಂತ್ರಸ್ತೆ ಅಪಹರಣ ಪ್ರಕರಣ: ಎಚ್.ಡಿ.ರೇವಣ್ಣಗೆ ಹೈಕೋರ್ಟ್ ನೋಟಿಸ್
ಮಹಿಳಾ ಮೀಸಲಾತಿ ನಗರಸಭೆ ಪುರಸಭೆ ತಾಲೂಕು ಪಂಚಾಯತಿಯಲ್ಲಿ, ಅಸೆಂಬ್ಲಿ, ಎಂಪಿ, ಎಂಎಲ್‌ಎಗೆ ಮೀಸಲಾತಿ ಇರಲಿಲ್ಲ. ಅದಕ್ಕೆ ಶೇ.33 ಮೀಸಲಾತಿ ನೀಡಲಾಗಿದೆ. ಬಸವಣ್ಣನವರ ಸಮಾನತೆಯ ರೀತಿಯಲ್ಲಿ ಎಲ್ಲರಿಗೂ ಅವಕಾಶ ನೀಡಲಾಗಿದೆ. 4 ಬಾರಿ ಸುರೇಶ್ ಅಂಗಡಿಗೆ ಆಶೀರ್ವಾದ ಮಾಡಿದ್ದೀರಿ. ಮಂಗಲ ಅಂಗಡಿ ಸಹ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಮೋದಿ ಪ್ರತಿನಿಧಿಯಾಗಿ ನಾನು ಇಲ್ಲಿ ಸ್ಪರ್ಧೆ ಮಾಡ್ತಿದ್ದಿನಿ, ನನಗೆ ಆಶೀರ್ವಾದ ಮಾಡುವ ಮೂಲಕ ನರೇಂದ್ರ ಮೋದಿಯವರನ್ನು 3ನೇ ಬಾರಿ ಪ್ರಧಾನಿ ಮಾಡಿ ಎಂದು ಕೋರಿದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷ ಅನಿಲ ಬೆನಕೆ, ಮಾಜಿ ಶಾಸಕ ಸಂಜಯ ಪಾಟೀಲ, ಸಂಸದೆ ಮಂಗಲ ಅಂಗಡಿ, ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷೆ ಗೀತಾ ಸುತಾರ, ಪಾಲಿಕೆ ಮೇಯರ್ ಸವಿತಾ ಕಾಂಬಳೆ, ವಿಧಾನ ಪರೀಷತ್ ಸದಸ್ಯ ಹಣಮಂತ ನಿರಾಣಿ, ಮಾಜಿ ವಿಧಾನ ಪರೀಷತ್ ಸದಸ್ಯ ಮಹಾಂತೇಶ ಕವಟಗಿಮಠ, ಮಾಜಿ ಶಾಸಕ ಸಂಜಯ ಪಾಟೀಲ್, ಡಾ.ರವಿ ಪಾಟೀಲ್, ಡಾ ವಿ.ಐ.ಪಾಟೀಲ್, ಎಂ.ಬಿ. ಜಿರಳಿ, ರಮೇಶ ದೇಶಪಾಂಡೆ, ರಾಜೇಂದ್ರ ಹರಕುಣಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಕೇಂದ್ರದಲ್ಲಿ ಮತ್ತೆ ಬಿಜೆಪಿ ಸರ್ಕಾರ: ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ್
ಮೋದಿಯವರು ಪ್ರತಿ ಹಣ್ಣು ಮಕ್ಕಳಿಗೆ ಗ್ಯಾಸ್ ನೀಡುವ ಕೆಲಸ ಮಾಡಿದ್ದಾರೆ. ಈಗ ಮಹಿಳೆಯರ ಹೇಸರಿನ ಮೇಲೆ ಮನೆ ಕಟ್ಟಿಸಿಕೂಡುವ ವ್ಯವಸ್ಥೆ ಮಾಡಲಿದ್ದಾರೆ. ಮಹಿಳೆಯರಿಗೆ ರಾಜಕೀಯವಾಗಿ ಶೇ.33 ನೀಡಲಿದ್ದಾರೆ. ಮುಂದಿನ 5 ವರ್ಷದಲ್ಲಿ ಪಿಒಕೆ ನಮ್ಮ ವಶವಾಗಲಿದೆ. ಜಗದೀಶ್ ಶೆಟ್ಟರ್ ತುಂಬಾ ಅನುಭವವಿರುವ ರಾಜಕಾರಣಿ. ಅವರು ಎಲ್ಲಿಯೂ ಚುನಾವಣೆಗೆ ನಿಂತರು ತಪ್ಪಿಲ್ಲ. ಹಾಗಾಗಿ ಜಗದೀಶ್ ಶೆಟ್ಟರ್‌ನ್ನು ಗೆಲ್ಲಿಸಬೇಕು.
-ಡಾ.ಪ್ರಭಾಕರ ಕೋರೆ, ರಾಜ್ಯಸಭಾ ಮಾಜಿ ಸದಸ್ಯರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.