ಸಿಟಿ ರವಿ ಸ್ವಲ್ಪ ದಿನದಲ್ಲೇ ಬೆಳಗಾವಿ ಗ್ಯಾಂಗ್ ಸೇರ್ತಾರೆ: ಪ್ರಿಯಾಂಕ್ ಖರ್ಗೆ

By Ravi JanekalFirst Published Aug 14, 2024, 12:55 PM IST
Highlights

ಬಿಜೆಪಿಯಲ್ಲಿ ನಾಯಕತ್ವದ ಕೊರತೆ ಇದೆ. ಅಲ್ಲಿ ನಾಯಕತ್ವಕ್ಕಾಗಿ ತಿಕ್ಕಾಟ ನಡೆಯುತ್ತಿದೆ. ಇದೆಲ್ಲ ಬಿವೈ ವಿಜಯೇಂದ್ರ ವಿರುದ್ಧ ಆರ್ ಅಶೋಕ್ ವಿರುದ್ಧ ನಡೆದಿರುವ ಬಂಡಾಯ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.

ಕಲಬುರಗಿ (ಆ.14): ಬಿಜೆಪಿಯಲ್ಲಿ ನಾಯಕತ್ವದ ಕೊರತೆ ಇದೆ. ಅಲ್ಲಿ ನಾಯಕತ್ವಕ್ಕಾಗಿ ತಿಕ್ಕಾಟ ನಡೆಯುತ್ತಿದೆ. ಇದೆಲ್ಲ ಬಿವೈ ವಿಜಯೇಂದ್ರ ವಿರುದ್ಧ ಆರ್ ಅಶೋಕ್ ವಿರುದ್ಧ ನಡೆದಿರುವ ಬಂಡಾಯ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.

ಕಲಬುರಗಿಯಲ್ಲಿ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಸಚಿವರು, ಬಿಜೆಪಿಯವರು ತಮ್ಮ ಅಸಮರ್ಥ ನಾಯಕತ್ವವನ್ನು ಮುಚ್ಚಿಕೊಳ್ಳಲು ರಾಜ್ಯಪಾಲರ ಕಚೇರಿಯನ್ನ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು.

Latest Videos

ಗ್ಯಾರಂಟಿ ಯೋಜನೆ ಪರಿಷ್ಕರಣೆ ಬಗ್ಗೆ ನಾನು ಮಾತಾಡೊಲ್ಲ; ದುರುಪಯೋಗ ಆಗಬಾರದು ಅಷ್ಟೇ: ಮಧು ಬಂಗಾರಪ್ಪ

ಮುಡಾ ವಿಚಾರದಲ್ಲಿ ಸಿಟಿ ರವಿ ಹೇಳಿಕೆಗೆ ತಿರುಗೇಟು ನೀಡಿದ ಸಚಿವರು, ಒಂದೂವರೆ ವರ್ಷದಿಂದ ನೀವೇಕೆ ತನಿಖೆ ಮಾಡಲಿಲ್ಲ ಎಂದು ಸಿಟಿ ರವಿ ಕೇಳ್ತಾರೆ. ಸಿಟಿ ರವಿ ಈ ಮೊದಲು ವಿಜಯೇಂದ್ರ ವಿರುದ್ಧ ಹೋರಾಡುತ್ತಿದ್ದರು. ಈಗ ಎಂಎಲ್ಸಿ ಮಾಡಿದ ನಂತರ ಅಡ್ಜಸ್ಟ್ ಮಾಡಿಕೊಂಡಿದ್ದಾರೆ. ಇನ್ನು ಸ್ವಲ್ಪ ದಿನ ಹೋಗ್ಲಿ ಸಿಟಿ ರವಿ ಸಹ ಬೆಳಗಾವಿ ಗ್ಯಾಂಗ್ಸ್ ಸೇರ್ತಾರೆ. ಸಿಟಿ ರವಿ ಹಿಂದೆ ಮಂತ್ರಿ ಇದ್ರು ಆದರೆ ಅವರಿಗೆ ಆಗ ಜವಾಬ್ದಾರಿ ಇರ್ಲಿಲ್ವಾ? ಅವರ್ಯಾಕೆ ತನಿಖೆಗೆ ಆಗ್ರಹಿಸಲಿಲ್ಲ? ನಾವು ವಿಚಾರ ಗೊತ್ತಾದ ತಕ್ಷಣ ತನಿಖೆಗೆ ಒಳಪಡಿಸಿದ್ದೇವೆ. ಇವರು ನೇಮಕಾತಿ ಮಾಡಿದ ಆ ಚೇರ್ಮನ್‌ಗಳು ಅದೇ ಅಧಿಕಾರಿಗಳು ಮಾಡಿದ್ದಲ್ಲವಾ? ಆಗ ಇವರೇನು ಮಾಡುತ್ತಿದ್ದರು? ಬೆಳಗಾವಿ ಗ್ಯಾಂಗ್‌ನವರಿಗೆ ಸ್ಪಷ್ಟವಾದ ಪ್ರಶ್ನೆಗೆ ಉತ್ತರ ಕೊಡಬೇಕಾದವರು ನರೇಂದ್ರ ಮೋದಿ, ಅಮಿತ್ ಶಾ, ಜೆಪಿ ನಡ್ಡಾ ತಂಡ ಎಂದು ತಿರುಗೇಟು ನೀಡಿದರು.

ಆಧುನಿಕ ಪರಿಕಲ್ಪನೆಯಲ್ಲಿ ಸೊರಬ ಅಭಿವೃದ್ಧಿಗೆ ಆದ್ಯತೆ: ಸಚಿವ ಮಧು ಬಂಗಾರಪ್ಪ

ಇನ್ನು ಗ್ಯಾರಂಟಿ ಯೋಜನೆ ಪರಿಷ್ಕರಣೆ ವಿಚಾರದ ಬಗ್ಗೆ ಮಾತನಾಡಿದ ಸಚಿವರು. ಗ್ಯಾರಂಟಿ ಯೋಜನೆ ಪರಿಷ್ಕರಣೆ ಪ್ರಶ್ನೆಯೇ ಇಲ್ಲ. ಇತ್ತೀಚೆಗೆ ಸಿಎಂ ಅವರು ಡಿಸಿಗಳು ಮತ್ತು ಸಿಇಒಗಳ ಜೊತೆ ಮೀಟಿಂಗ್ ಮಾಡುವ ಸಂದರ್ಭದಲ್ಲಿ ರಿಪೋರ್ಟ್‌ಗಳಲ್ಲಿ ವ್ಯತ್ಯಾಸ ಇದ್ದವು. ನಮ್ಮದೊಂದು ರೀತಿಯ ರಿಪೋರ್ಟ್ ಇತ್ತು. ನೀತಿ ಆಯೋಗದ ರಿಪೋರ್ಟ್ ಇನ್ನೊಂದು ರೀತಿ ಇತ್ತು. ಬಡತನ ರೇಖೆಗಿಂತ ಕೆಳಗಿರುವವ ಜನಸಂಖ್ಯೆಯಲ್ಲಿ ಬಹಳ ತಾರತಮ್ಯ ಇದೆ ಎನ್ನುವುದು ಕಂಡುಬಂತು. ಹೀಗಾಗಿ ಅದನ್ನು ಸರಿಪಡಿಸುವುದು ಹೇಗೆ ಎನ್ನುವ ಬಗ್ಗೆ ಚರ್ಚೆ ನಡೆದಿದೆ. ಆದರೆ ಗ್ಯಾರಂಟಿ ಯೋಜನೆಗಳನ್ನ ನಿಲ್ಲಿಸುವ ಬಗ್ಗೆ ಅಥವಾ ಪರಿಷ್ಕರಿಸುವ ಬಗ್ಗೆ ಯಾವುದೇ ರೀತಿಯ ಚರ್ಚೆ ಆಗಿಲ್ಲ . ಬಿಪಿಎಲ್ ಕಾರ್ಡಗಳಲ್ಲಿ ಫೇಕ್ ಏನಾದರೂ ಇದ್ದರೆ ಅದನ್ನು ಸರಿಪಡಿಸುವ ಅಭಿಯಾನ ಹಮ್ಮಿಕೊಳ್ಳುತ್ತಿದ್ದೇವೆ ಹೊರತು ಯಾವುದೇ ರೀತಿಯಾದಂತಹ ಮಾನದಂಡ ಪರಿಸ್ಕರಿಸುವ ವಿಚಾರ ಇಲ್ಲ ಎಂದು ಸ್ಪಷ್ಟಪಡಿಸಿದರು.

click me!