ಕಾಂಗ್ರೆಸ್ ಸರ್ಕಾರ 10 ಕೆಜಿ ಅಕ್ಕಿ ನೀಡುವ ಭರವಸೆ ನೀಡಿತ್ತು. ಕೇಂದ್ರದ ನರೇಂದ್ರ ಮೋದಿ ಸರ್ಕಾರ ಕೊಡುತ್ತಿರುವ 5 ಕೆಜಿ ಅಕ್ಕಿಯನ್ನು ಸೇರಿಸಿ 10 ಕೆ.ಜಿ. ಎಂದು ಲೆಕ್ಕ ಹೇಳುತ್ತಿದೆ. ಇದು ಸರಿಯಲ್ಲ.
ಶಿವಮೊಗ್ಗ (ಜೂ.19): ಕಾಂಗ್ರೆಸ್ ಸರ್ಕಾರ 10 ಕೆಜಿ ಅಕ್ಕಿ ನೀಡುವ ಭರವಸೆ ನೀಡಿತ್ತು. ಕೇಂದ್ರದ ನರೇಂದ್ರ ಮೋದಿ ಸರ್ಕಾರ ಕೊಡುತ್ತಿರುವ 5 ಕೆಜಿ ಅಕ್ಕಿಯನ್ನು ಸೇರಿಸಿ 10 ಕೆ.ಜಿ. ಎಂದು ಲೆಕ್ಕ ಹೇಳುತ್ತಿದೆ. ಇದು ಸರಿಯಲ್ಲ. ಕೇಂದ್ರ ಸರ್ಕಾರ ನೀಡುವ ಅಕ್ಕಿಯನ್ನು ಸೇರಿಸಿ, ಪ್ರತಿ ಕುಟುಂಬಕ್ಕೆ 15 ಕೆಜಿ ಅಕ್ಕಿ ಕಾಂಗ್ರೆಸ್ ಸರ್ಕಾರ ನೀಡಬೇಕು ಎಂದು ಶಾಸಕ ಬಿ.ವೈ.ವಿಜಯೇಂದ್ರ ಒತ್ತಾಯಿಸಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಅಕ್ಕಿ ಯೋಜನೆಯನ್ನು ಕಾಂಗ್ರೆಸ್ಸಿಗರು ತಮ್ಮ ಫೋಟೋ ಅಂಟಿಸಿಕೊಂಡು ಪ್ರಚಾರ ತೆಗೆದುಕೊಂಡಿದ್ದಾರೆ. ಅಕ್ಕಿ ಜೊತೆಗೆ ಗೋಧಿ, ರಾಗಿ ಕೊಡುವುದಾಗಿಯೂ ಹೇಳುತ್ತಿದ್ದಾರೆ. ನಮ್ಮ ರಾಜ್ಯದಲ್ಲಿ ಗೋಧಿ, ರಾಗಿ, ಜೋಳ ಎಲ್ಲವನ್ನು ಬೆಳೆಯುತ್ತಿದ್ದಾರೆ. ಬೇರೆ ರಾಜ್ಯದಿಂದ ಇವುಗಳನ್ನು ಖರೀದಿ ಮಾಡುವ ಬದಲು ನಮ್ಮ ರಾಜ್ಯದ ರೈತರಲ್ಲಿಯೇ ಖರೀದಿ ಮಾಡಬೇಕು ಎಂದರು.
‘ಅಕ್ಕಿಭಾಗ್ಯ’ದಲ್ಲಿ ಕಾಂಗ್ರೆಸ್ ಬಣ್ಣ ಬಯಲು: ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ
24 ಗಂಟೆಗಳಲ್ಲಿ ಗ್ಯಾರಂಟಿ ಯೋಜನೆಗಳ ಭರವಸೆ ಈಡೇರಿಸುವದಾಗಿ ಹೇಳಿದ್ದ ಕಾಂಗ್ರೆಸ್ ಸರ್ಕಾರ ಈಗ ಜನರ ಗಮನ ಬೇರೆ ಸೆಳೆಯಲು ಪ್ರಯತ್ನ ನಡೆಸಿದೆ. ಮತಾಂತರ ನಿಷೇಧ ಕಾಯ್ದೆ ಗೋಹತ್ಯೆ ನಿಷೇಧ ಕಾಯ್ದೆ ಪಠ್ಯಪುಸ್ತಕ ಪರಿಷತ್ತು ವಿಷಯಗಳನ್ನು ತಂದು ಜನರ ಗಮನವನ್ನು ಬೇರೆಡೆ ಸೆಳೆಯಲು ಪ್ರಯತ್ನ ನಡೆಸಿದೆ ಎಂದು ಟೀಕಿಸಿದರು. ಬಿಜೆಪಿ ಸರ್ಕಾರದ ಅವಧಿಯಲ್ಲಿನ ಹಗರಣಗಳನ್ನು ತನಿಖೆ ಮಾಡುತ್ತೇವೆ ಎನ್ನುತ್ತಿದ್ದಾರೆ.
ಬಹಳ ಸಂತೋಷ, ಖಂಡಿತವಾಗಿ ತನಿಖೆ ಮಾಡಿಸಲಿ ಅವರಿಗೆ ಐದು ವರ್ಷಗಳ ಸಮಯ ಇದೆ. ಯಾವುದೇ ತನಿಖೆ ನಡೆಸಿ ತಪ್ಪಿತಸರನ್ನು ಜೈಲಿಗೆ ಕಳಿಸಿ, ನೇಣಿಗೆ ಹಾಕಿ ಎಂದು ಹೇಳಿದರು. ಲೋಕಸಭಾ ಚುನಾವಣೆಯೊಂದು ಮುಗಿಯಲಿ, ನಾನು ಅಂದೆ ಹೇಳಿದ್ದೆ ಇಂದು ರಾಜ್ಯದಲ್ಲಿ ಡಬಲ್ ಸ್ಟೇರಿಂಗ್ ಸರ್ಕಾರ ಇದೆ ಎಂದು ಲೋಕಸಭಾ ಚುನಾವಣೆಯ ನಂತರ ಕಾದು ನೋಡಿ ಎಂದು 5 ವರ್ಷಗಳ ಕಾಲ ಸಿದ್ದರಾಮಯ್ಯ ಸಿಎಂ ಆಗಿರುತ್ತಾರೆ ಎಂಬ ಸಚಿವ ಮಹದೇವಪ್ಪ ಅವರ ಹೇಳಿಕೆಗೆ ತಿರುಗೇಟು ನೀಡಿದರು.
ಸಾಂಸ್ಕೃತಿಕ, ಚಾರಿತ್ರಿಕ, ಬೌದ್ಧಿಕ ನೆಲೆಗಟ್ಟಿನಲ್ಲಿ ಮೈಸೂರು ಅಭಿವೃದ್ಧಿ: ಸಚಿವ ಮಹದೇವಪ್ಪ
ಪ್ರತಾಪ್ ಸಿಂಹ ಸಂಸದರು, ವಾಗ್ಮಿಯೂ ಹೌದು. ಅವರು ಇಂತಹ ಹೇಳಿಕೆಯನ್ನು ಕೊಡಬಾರದು. ನಮ್ಮ ನಡವಳಿಕೆಗಳಿಂದ ಕಾರ್ಯಕರ್ತರು ಬೇಸತ್ತು ಅಧಿಕೃತ ವಿರೋಧ ಪಕ್ಷವಾಗಿ ನಿಲ್ಲಿಸಿದ್ದಾರೆ. ಸಮಸ್ಯೆಯ ಗಂಭೀರತೆಯನ್ನು ಅರ್ಥ ಮಾಡಿಕೊಂಡು ಪಕ್ಷದ ಸಂಘಟನೆ ಬಲಪಡಿಸಬೇಕಿದೆ. ನಾನು ಯಡಿಯೂರಪ್ಪ ಮಗನಾಗಿ ಈ ಮಾತನ್ನು ಹೇಳುತ್ತಿಲ್ಲ. ಸಾಮಾನ್ಯ ಕಾರ್ಯಕರ್ತನಾಗಿ ಹೇಳುತ್ತೇನೆ. ರಾಜ್ಯದಲ್ಲಿ ಮತ್ತೊಮ್ಮೆ 25 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಪ್ರಧಾನಿ ಮೋದಿ ಕೈ ಬಲಪಡಿಸಬೇಕಿದೆ
- ಬಿ.ವೈ.ವಿಜಯೇಂದ್ರ, ಶಾಸಕ, ಶಿಕಾರಿಪುರ ಕ್ಷೇತ್ರ