Latest Videos

ಕೆಪಿಸಿಸಿ ಅಧ್ಯಕ್ಷರನ್ನ ಬದಲಿಸಿ, ಹೈಕಮಾಂಡ್‌ಗೆ ನೆನಪು ಮಾಡಲು ಇಚ್ಛಿಸುತ್ತೇನೆ: ಸಚಿವ ರಾಜಣ್ಣ

By Kannadaprabha NewsFirst Published Jun 27, 2024, 11:17 AM IST
Highlights

ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯಾಗಿ ಹಾಗೂ ಡಿ.ಕೆ. ಶಿವಕುಮಾರ್ ಅವರನ್ನು ಉಪಮುಖ್ಯಮಂತ್ರಿ ಘೋಷಣೆ ಮಾಡುವಾಗ ಹೈಕಮಾಂಡ್ ಲೋಕಸಭೆ ಚುನಾವಣೆವರೆಗೆ ಡಿ.ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ ಎಂದಿತ್ತು. ಈ ಬಗ್ಗೆ ಹೈಕಮಾಂಡ್‌ಗೆ ನೆನಪು ಮಾಡಲು ಇಚ್ಛಿಸುತ್ತೇನೆ ಎಂದ ಸಚಿವ ಕೆ.ಎನ್.ರಾಜಣ್ಣ 

ಬೆಂಗಳೂರು(ಜೂ.27):  'ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯಾಗಿ ಹಾಗೂ ಡಿ.ಕೆ. ಶಿವಕುಮಾರ್ ಅವರನ್ನು ಉಪಮುಖ್ಯಮಂತ್ರಿ ಘೋಷಣೆ ಮಾಡುವಾಗ ಹೈಕಮಾಂಡ್ ಲೋಕಸಭೆ ಚುನಾವಣೆವರೆಗೆ ಡಿ.ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ ಎಂದಿತ್ತು. ಈ ಬಗ್ಗೆ ಹೈಕಮಾಂಡ್‌ಗೆ ನೆನಪು ಮಾಡಲು ಇಚ್ಛಿಸುತ್ತೇನೆ' ಎಂದು ಸಚಿವ ಕೆ.ಎನ್.ರಾಜಣ್ಣ ಹೇಳಿದ್ದಾರೆ.

ಡಿ.ಕೆ. ಶಿವಕುಮಾರ್ ಬೆಂಬಲಿಗ ಶಾಸಕ ಬಸವರಾಜ ಶಿವಗಂಗಾ ಅವರು, 'ಡಿ.ಕೆ. ಶಿವಕುಮಾರ್ ಅವರನ್ನು ಮುಖ್ಯ ಮಂತ್ರಿ ಮಾಡಿ ಎಷ್ಟು ಮಂದಿ ಉಪಮುಖ್ಯಮಂತ್ರಿ ಹುದ್ದೆಗಳನ್ನಾದರೂ ಸೃಷ್ಟಿಸಿಕೊಳ್ಳಲಿ' ಎಂದು ಹೇಳಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡುವಾಗ ರಾಜಣ್ಣ ಈ ಹೇಳಿಕೆ ನೀಡಿದ್ದಾರೆ. ಅಲ್ಲದೆ, 'ಬಸವರಾಜ ಶಿವಗಂಗಾ ಆಗಲಿ, ಬಾಲಕೃಷ್ಣ ಆಗಲಿ ಅವರ ಅಭಿಪ್ರಾಯ ಹೇಳುವ ಸ್ವಾತಂತ್ರ್ಯ ಹಾಗೂ ಹಕ್ಕು ಹೊಂದಿದ್ದಾರೆ. ಆದರೆ ಅಂತಿಮ ನಿರ್ಧಾರವನ್ನು ಹೈಕಮಾಂಡ್ ಮಾಡುತ್ತದೆ. ಇವರು ಹೇಳಿದ್ದೆಲ್ಲಾ ಅಂತಿಮವಲ್ಲ' ಎಂದು ಹೇಳಿದರು.

ನಾನು ಡಿಸಿಎಂ ಆಕಾಂಕ್ಷಿಯಲ್ಲ, ಚುನಾವಣೆಯಲ್ಲಿ ನಿಲ್ಲುವವನೂ ಅಲ್ಲ: ಸಚಿವ ಕೆ.ಎನ್.ರಾಜಣ್ಣ

ಜತೆಗೆ, 'ಕಾಂಗ್ರೆಸ್ ಪಕ್ಷ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಾಗ ಹೈಕಮಾಂಡ್ 3 ಘೋಷಣೆಗಳನ್ನು ಮಾಡಿತು. ಈ ಬಗ್ಗೆ ಹೈಕಮಾಂಡ್‌ಗೆ ನೆನಪಿಸಲು ಇಚ್ಛಿಸುತ್ತೇನೆ' ಎಂದು ರಾಜಣ್ಣ ಹೇಳಿದ್ದಾರೆ.

click me!