
ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಹಲವಾರು ಘಟನೆಗಳು ಕಾಂಗ್ರೆಸ್ ಸರ್ಕಾರವನ್ನು ಹಿಂದೂ ವಿರೋಧಿ ಸರ್ಕಾರ ಎಂದು ಆರೋಪಿಸಲು ಕಾರಣವಾಗಿವೆ. ಕಳೆದ ಅವಧಿಯಂತೆ, ಈ ಅವಧಿಯಲ್ಲಿಯೂ ಧಾರ್ಮಿಕ ವಿಷಯಗಳು ಸರ್ಕಾರಕ್ಕೆ ಸಂಕಷ್ಟ ತಂದಿದ್ದು, ಮುಸ್ಲಿಂ ತುಷ್ಟೀಕರಣದ ನೀತಿಗಳಿಂದ ಹಿಂದೂ ಭಾವನೆಗಳಿಗೆ ಧಕ್ಕೆ ತಟ್ಟುತ್ತಿದೆ ಎಂಬ ಟೀಕೆ ಹೆಚ್ಚಾಗುತ್ತಿದೆ. ಘಟನೆಗಳ ಕುರಿತು ಎಚ್ಚರಿಕೆ ವಹಿಸಬೇಕಾದ ವೇಳೆ ಎಡವಟ್ಟು ಮಾಡಿಕೊಳ್ಳುತ್ತಿರುವ ಸರ್ಕಾರ
ಕ್ರಮದಿಂದ ಜನರಲ್ಲಿ ಅಸಮಾಧಾನ ಹೆಚ್ಚುತ್ತಿದೆ. ಈಗ ಮದ್ದೂರಿನಲ್ಲಿ ನಡೆದ ಗಣೇಶ ಮೆರವಣಿಗೆ ಗಲಾಟೆ ಮತ್ತಷ್ಟು ಬಿಸಿ ಹುಟ್ಟಿಸಿದೆ. ಘಟನೆಗಳ ಕುರಿತು ಎಚ್ಚರಿಕೆ ವಹಿಸಬೇಕಾದ ವೇಳೆ ಎಡವಟ್ಟು ಮಾಡಿಕೊಳ್ಳುತ್ತಿದೆ. ಗಣೇಶ ಹಬ್ಬದ ಆಚರಣೆಗೆ ಷರತ್ತು ಹೇರಿಕೆ ಹಾಗೂ ಡಿಜೆಗಳಿಗೆ ನಿರ್ಬಂಧ ಹೇರಿದ್ದೇ ಹಿಂದೂಗಳ ಅಸಮಾಧಾನಕ್ಕೆ ಕಾರಣವಾಗಿತ್ತು.
ಉದಯಗಿರಿ ಪ್ರದೇಶದಲ್ಲಿ ಪೊಲೀಸರು ಆರೋಪಿ ಬಂಧಿಸಿದ ವೇಳೆ, ಮುಸ್ಲಿಂ ಸಮುದಾಯದ ಕಿಡಿಗೇಡಿಗಳು ಪೊಲೀಸರ ಮೇಲೆಯೇ ಕಲ್ಲು ತೂರಾಟ ನಡೆಸಿದರು. ಹಲವಾರು ಪೊಲೀಸರಿಗೆ ಗಾಯಗಳಾದವು. ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರುವುದರಿಂದಲೇ ಇಂತಹ ಗಲಭೆಗೆ ಧೈರ್ಯ ಬರುತ್ತಿದೆ ಎಂಬ ಟೀಕೆ ವ್ಯಕ್ತವಾಯಿತು.
ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ಮುಸ್ಲಿಂ ಸಮುದಾಯದವರು ಕಲ್ಲು ತೂರಾಟ ನಡೆಸಿದ ಪರಿಣಾಮ ಶಾಂತಿಯುತ ಮಂಡ್ಯ ಜಿಲ್ಲೆಯಲ್ಲಿ ಕೋಮುಗಲಭೆ ಉಂಟಾಯಿತು. ಗಲಭೆಯ ನಡುವೆ ಗಣೇಶ ಪ್ರತಿಷ್ಠಾಪಕರ ಮೇಲೆಯೇ ಕೇಸು ದಾಖಲಿಸಿದ್ದು, ಹಿಂದೂ ಭಾವನೆಗಳಿಗೆ ದೊಡ್ಡ ಧಕ್ಕೆ ತಟ್ಟಿತು.
ಇತ್ತೀಚೆಗೆ ಮದ್ದೂರಿನಲ್ಲಿ ಗಣೇಶ ಮೆರವಣಿಗೆಯ ವೇಳೆ ಮಸೀದಿಯೊಳಗಿಂದ ಕಲ್ಲು ತೂರಾಟ ನಡೆಯಿತು. ಪೊಲೀಸರು ಆರೋಪಿಗಳನ್ನು ಬಂಧಿಸಿ ಪರಿಸ್ಥಿತಿಯನ್ನು ನಿಯಂತ್ರಿಸಲು ಯತ್ನಿಸಿದರೂ, ಪ್ರತಿಭಟನೆ ವೇಳೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ ಘಟನೆ ಚರ್ಚೆಗೆ ಗ್ರಾಸವಾಯಿತು.
ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತು ಹಾಕಿದ್ದಾರೆ ಎನ್ನುವ ಸುದ್ದಿಗೆ ತಕ್ಷಣ ಪ್ರತಿಕ್ರಿಯಿಸಿದ ಸರ್ಕಾರ, ಎಸ್‌ಐಟಿ ರಚಿಸಿ ಉತ್ಖನನ ಪ್ರಕ್ರಿಯೆ ಆರಂಭಿಸಿತು. ಪೂರ್ವಾಪರ ಪರಿಶೀಲನೆ ಇಲ್ಲದೆ ಕೈಗೊಂಡ ಕ್ರಮ ಹಿಂದೂ ಧಾರ್ಮಿಕ ಕೇಂದ್ರಗಳ ಬಗ್ಗೆ ಸರ್ಕಾರಕ್ಕೆ ಗೌರವವಿಲ್ಲ ಎಂಬ ಅಭಿಪ್ರಾಯ ಮೂಡಿಸಿತು.
ಮದ್ದೂರಿನ ಘಟನೆ ಹೀಗೆಯೇ ಬೇರೆ ಜಿಲ್ಲೆಗಳಿಗೆ ವ್ಯಾಪಿಸುವ ಮುನ್ನ, ಸರ್ಕಾರ ತುರ್ತು ಕ್ರಮ ಕೈಗೊಂಡಿದೆ. ಜಿಲ್ಲಾ ಉಸ್ತುವಾರಿ ಸಚಿವ ಚೆಲುವರಾಯಸ್ವಾಮಿ, ಮಸೀದಿಯೊಳಗಿನಿಂದಲೇ ಆರೋಪಿಗಳನ್ನು ಬಂಧಿಸಿದ್ದೇವೆ ಎಂದು ಹೇಳಿ, ಹಿಂದೂಗಳ ಆಕ್ರೋಶವನ್ನು ಶಮನಗೊಳಿಸಲು ಯತ್ನಿಸಿದರು. ಆದಾಗ್ಯೂ, ಸಾಲು ಸಾಲು ಪ್ರಕರಣಗಳಿಂದ ಜನರ ನಡುವೆ ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ಸರ್ಕಾರ ಎಂಬ ಅಭಿಪ್ರಾಯ ಗಟ್ಟಿಗೊಂಡಿದೆ.
ಒಟ್ಟಿನಲ್ಲಿ, ಧರ್ಮ ಸಂಬಂಧಿ ವಿವಾದಗಳು ಕಾಂಗ್ರೆಸ್ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ಮುಂಬರುವ ದಿನಗಳಲ್ಲಿ ಇದು ರಾಜ್ಯದ ರಾಜಕೀಯಕ್ಕೆ ಮಹತ್ವದ ಪ್ರಭಾವ ಬೀರುವ ಸಾಧ್ಯತೆ ಇದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.