Assembly election: ದೇಶ, ರಾಜ್ಯದಲ್ಲಿ ತನ್ನ ಅಸ್ತಿತ್ವಕ್ಕಾಗಿ ಕಾಂಗ್ರೆಸ್‌ ಪರದಾಟ: ಹಾಲಪ್ಪ ಆಚಾರ್

By Kannadaprabha News  |  First Published Jan 18, 2023, 7:38 AM IST

ರಾಷ್ಟ್ರ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್‌ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಪರದಾಡುತ್ತಿದೆ. ದೇಶದಲ್ಲಿ 2018ರಿಂದ ಕಾಂಗ್ರೆಸ್‌ ಪಕ್ಷವನ್ನು ಜನರು ಮರೆತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಸಚಿವ ಹಾಲಪ್ಪ ಆಚಾರ ವಾಗ್ದಾಳಿ ನಡೆಸಿದರು.


ಕುಕನೂರು (ಜ.18) : ರಾಷ್ಟ್ರ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್‌ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಪರದಾಡುತ್ತಿದೆ ಎಂದು ಸಚಿವ ಹಾಲಪ್ಪ ಆಚಾರ ಹೇಳಿದರು. ತಾಲೂಕಿನ ಮಸಬಹಂಚಿನಾಳದ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಯಲಬುರ್ಗಾ ಬಿಜೆಪಿ ಮಂಡಳದ ವಿಜಯ ಸಂಕಲ್ಪ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ 2018ರಿಂದ ಕಾಂಗ್ರೆಸ್‌ ಪಕ್ಷವನ್ನು ಜನರು ಮರೆತಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಮಾಜಿ ಸಚಿವ ಬಸವರಾಜ ರಾಯರಡ್ಡಿ ಅವರು ವೈಯಕ್ತಿಕ ಉದ್ದೇಶಕ್ಕಾಗಿ ರಾಜಕಾರಣ ಮಾಡುತ್ತಿದ್ದಾರೆ. ನಾ ನಾಯಕಿ ಎಂಬ ಹೆಸರಿನಲ್ಲಿ ಪ್ರಿಯಾಂಕಾ ಗಾಂಧಿ ಮತ್ತೆ ತಮ್ಮ ಕುಟುಂಬದ ಅಸ್ತಿತ್ವಕ್ಕೆ ಧುಮಿಕಿದ್ದಾರೆ ಎಂದರು.

ಹಿಂದೆ ಇಂದಿರಾಗಾಂಧಿ, ಸೋನಿಯಾ ಗಾಂಧಿ ಅವರಂತೆ ಈಗ ಪ್ರಿಯಾಂಕಾ ಗಾಂಧಿ ಕುಟುಂಬದ ರಾಜಕೀಯ ಅಸ್ತಿತ್ವಕ್ಕೆ ಹೋರಾಡುತ್ತಿದ್ದಾರೆ. ಜನರ ಕಷ್ಟಗಳ ಧ್ವನಿ ಕೇಳದ ಕಾಂಗ್ರೆಸ್ಸಿಗರು ಪ್ರಜಾಧ್ವನಿ ಯಾತ್ರೆಯನ್ನು ತಮ್ಮ ಹಿತಕ್ಕಾಗಿ ಮಾಡುತ್ತಿದ್ದಾರೆ. ಭಾರತವನ್ನು ವಿಭಾಗ ಮಾಡಿದ್ದ ಕಾಂಗ್ರೆಸ್‌ ರಾಜಕೀಯ ಲಾಭಕ್ಕೆ ಭಾರತ ಜೋಡೊ ಯಾತ್ರೆ ಮಾಡಿದೆ ಎಂದು ಟೀಕಿಸಿದರು.

Tap to resize

Latest Videos

undefined

ದೇವೇಗೌಡರದು ಆಯ್ತು ; ಇದೀಗ ಅಯ್ಯಪ್ಪ ಮಾಲಾಧಾರಿಗಳ ಕೈಯಲ್ಲಿ ಸಚಿವ ಆಚಾರ ಭಾವಚಿತ್ರ!

ತಾಲೂಕಿನಲ್ಲಿ ಮಾಜಿ ಸಚಿವ ರಾಯರಡ್ಡಿ ಅವರು ದೇವರಿಲ್ಲದ ಗುಡಿ ತರಹ ಸವಲತ್ತು ಇಲ್ಲದ ಎಂಜಿನಿಯರಿಂಗ್‌ ಕಾಲೇಜು ಪ್ರಾರಂಭಿಸಿದ್ದಾರೆ ಹೊರತು ಅಭಿವೃದ್ಧಿ ಮಾಡಲು ಅವರಿಗೆ ಸಾಧ್ಯವಾಗಿಲ್ಲ. ನನ್ನ ಅವಧಿಯಲ್ಲಿ ಶಾಲಾ- ಕಾಲೇಜು, ಕೆರೆ, ಕಟ್ಟೆ, ಗ್ರಾಮೀಣ ರಸ್ತೆಯ ಒಳರಸ್ತೆಗಳು, ದೇವಸ್ಥಾನ ಇತರೆ ಉತ್ತಮ ಕೆಲಸಗಳು ಆಗಿವೆ. ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವದ ನಾಯಕರಾಗಬೇಕು ಎಂದು ವಿದೇಶದ ನಾಯಕರೂ ಬಯಸಿದ್ದಾರೆ. ಭಾರತವನ್ನು ಎಲ್ಲರೂ ತಿರುಗಿ ನೋಡುವಂತೆ ಮಾಡಿದ ನಾಯಕರಲ್ಲಿ ಪ್ರಧಾನಿ ನರೇಂದ್ರ ಮೋದಿ ಒಬ್ಬರು ಎಂದರು.

ಬಿಜೆಪಿ ಮಂಡಲ ಅಧ್ಯಕ್ಷ ವಿಶ್ವನಾಥ ಮರಿಬಸಪ್ಪನವರ್‌, ಪ್ರಧಾನ ಕಾರ್ಯದರ್ಶಿ ಮಾರುತಿ ಗಾವರಾಳ, ಶಿವಪ್ಪ ವಾದಿ, ಜಿಲ್ಲಾ ಸಹ ಸಂಚಾಲಕ ಚಂದ್ರಶೇಖರ ಕವಲೂರ, ಕಾರ್ಯದರ್ಶಿ ನರಸಿಂಹರಾವ್‌ ಕುಲಕರ್ಣಿ, ರಾಜ್ಯ ಕಾರ‍್ಯಕಾರಿಣಿ ಸದಸ್ಯೆ ಶಿವಲೀಲಾ ದಳವಾಯಿ, ತಾಪಂ ಮಾಜಿ ಉಪಾಧ್ಯಕ್ಷ ಕಳಕಪ್ಪ ಕಂಬಳಿ, ಮುಖಂಡ ಬಸಲಿಂಗಪ್ಪ ಭೂತೆ, ಬಸವನಗೌಡ ತೊಂಡಿಹಾಳ, ಸಿ.ಎಚ್‌. ಪೊಪಾ, ರತನ್‌ ದೇಸಾಯಿ, ಭೀಮಜ್ಜ ಗುರಿಕಾರ, ಶಿವಕುಮಾರ ನಾಗಲಾಪೂರಮಠ, ಮಂಜುನಾಥ ಗಟ್ಟೆಪ್ಪನವರ್‌, ವೀರಣ್ಣ ಹುಬ್ಬಳ್ಳಿ, ಶರಣಪ್ಪ ಬಣ್ಣದಬಾವಿ, ಕರಬಸಯ್ಯ ಬಿನ್ನಾಳ ಇತರರಿದ್ದರು.

ಅಭಿ​ವೃದ್ಧಿ ಕಾಮ​ಗಾ​ರಿ​ಗ​ಳ​ಲ್ಲಿ ನಿರ್ಲ​ಕ್ಷ್ಯತೆ, ತಪ್ಪು ಸರಿ​ಪ​ಡಿ​ಸಿ​ಕೊ​ಳ್ಳಿ: ಶಾಸಕ ಹಾಲಪ್ಪ

ಮೂರು ತಲೆಮಾರು ತಿನ್ನುವಷ್ಟುಗಳಿಸಿದ ಕಾಂಗ್ರೆಸ್ಸಿಗರು

ಕಾಂಗ್ರೆಸ್‌ನಲ್ಲಿ ಕುಟುಂಬ ಹಾಗೂ ಸ್ವಾರ್ಥ ರಾಜಕಾರಣ ಹೆಚ್ಚಿದೆ. ಈ ಹಿಂದೆ ಕಾಂಗ್ರೆಸ್‌ನ ಮಾಜಿ ಸಚಿವ ರಮೇಶಕುಮಾರ ಅವರು ಹೇಳಿರುವಂತೆ ಆ ಪಕ್ಷದ ನಾಯಕರು ಮೂರು ತಲೆಮಾರು ತಿನ್ನುವಷ್ಟುಸಂಪತ್ತು ಗಳಿಸಿಕೊಂಡಿದ್ದಾರೆ ಎಂದಿದ್ದಾರೆ. ಇದರಿಂದ ರಾಷ್ಟಾ್ರಭಿವೃದ್ಧಿ ಹೇಗೆ ಸಾಧ್ಯ? ಬಸ್‌ಯಾತ್ರೆ ಮೂಲಕ ಕಾಂಗ್ರೆಸ್‌ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಪರದಾಡುತ್ತಿದೆ ಎಂದು ಸಚಿವ ಹಾಲಪ್ಪ ಆಚಾರ ಟೀಕಿಸಿದರು.

click me!