ಕಾಂಗ್ರೆಸ್ ನಾಯಿಗಳು ನರೇಂದ್ರ ಮೋದಿ, ಅಮಿತ್ ಶಾ ಹಾಗೂ ಬಸವರಾಜ ಬೊಮ್ಮಾಯಿ ಅವರನ್ನು ಕೆಟ್ಟದಾಗಿ ಬೈಯುತ್ತದೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಟೀಕೆ ಮಾಡಿದ್ದಾರೆ.
ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಮಾ.11): ಕೊಡಗಿನ ಜನರು ರಾಷ್ಟ್ರವಾದಿಗಳು, ಕೊಡಗು ಜಿಲ್ಲೆ ಇಡೀ ರಾಜ್ಯಕ್ಕೆ ಸ್ಫೂರ್ತಿ ಕೊಡುವ ಜಿಲ್ಲೆಯಾಗಿದೆ. ಆದರೆ, ಕಾಂಗ್ರೆಸ್ ನಾಯಿಗಳು ನರೇಂದ್ರ ಮೋದಿ, ಅಮಿತ್ ಶಾ ಹಾಗೂ ಬಸವರಾಜ ಬೊಮ್ಮಾಯಿ ಅವರನ್ನು ಕೆಟ್ಟದಾಗಿ ಬೈಯುತ್ತದೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಟೀಕೆ ಮಾಡಿದ್ದಾರೆ.
undefined
ಮಡಿಕೇರಿಯಲ್ಲಿ ಶನಿವಾರ ನಡೆದ ಎರಡನೇ ದಿನದ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಯ ಮೆರವಣಿಗೆ ಸಂದರ್ಭ ಅವರು ಮಾತನಾಡಿದರು. ಇಂದು ಕೊಡಗಿನಲ್ಲಿ ವಿರೋಧ ಪಕ್ಷವೇ ಇಲ್ಲದಂತಹ ಸ್ಥಿತಿ ಇದೆ. ಈಶ್ವರಪ್ಪ ಅವರು ಮಾತನಾಡಿ ಕಾಂಗ್ರೆಸ್ ನವರು ಜಿಲ್ಲೆಯಲ್ಲಿ ಸುಮ್ಮನೆ ನಾಮಾಕಾವಸ್ಥೆಗೆಂದು ಅಭ್ಯರ್ಥಿ ಹಾಕುತ್ತಿದ್ದಾರೆ. ಅದು ಏತಕ್ಕಾಗಿ ಹಾಗೆ ಅಭ್ಯರ್ಥಿಗಳನ್ನು ಹಾಕಬೇಕು ಎಂದು ಪ್ರಶ್ನಿಸಿದರು. ಇಡೀ ರಾಷ್ಟ್ರದಲ್ಲಿ ಕಾಂಗ್ರೆಸ್ ಹೆಣದಂತಹ ಸ್ಥಿತಿ ತಲುಪಿದೆ. ಈಶಾನ್ಯ ರಾಜ್ಯಗಳಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ ನಾಲ್ಕು ಸ್ಥಾನಗಳನ್ನು ಪಡೆದುಕೊಂಡಿದೆ ಎಂದು ಈಶ್ವರಪ್ಪ ಟೀಕಿಸಿದರು.
ಯಡಿಯೂರಪ್ಪ ಟಿಕೆಟ್ ಬಾಂಬ್- ಬಿಜೆಪಿಯಲ್ಲಿ ಭಾರಿ ಕಂಪನ: ಟಿಕೆಟ್ ಭಾಗ್ಯ ಇಲ್ಲದ ಶಾಸಕರು ಇವರೆನಾ?
ರಾಹುಲ್ ಗಾಂಧಿ ಹೋದಲ್ಲೆಲ್ಲಾ ಸೋಲು: ರಾಹುಲ್ ಗಾಂಧಿ ಪ್ರಚಾರಕ್ಕೆ ಹೋದ ಕಡೆಯಲೆಲ್ಲಾ ಕಾಂಗ್ರೆಸ್ ಸೋತಿದೆ. ಆದರೂ ಪ್ರಧಾನಿ ಮೋದಿ, ಅಮಿತ್ ಶಾ, ಬೊಮ್ಮಾಯಿ ಇವರ ಬಗ್ಗೆ ಕೆಟ್ಟದ್ದಾಗಿ ಮಾತನಾಡುತ್ತಾರೆ ನಾಯಿಗಳು ಎಂದು ಬೈದರು. ನಾವು ದೇಶದ ಸಂಸ್ಕೃತಿ ಉಳಿಸುವುದಕ್ಕಾಗಿ, ಮತಾಂತರ ತಡೆಯುವುದಕ್ಕಾಗಿ ಜೊತೆಗೆ ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿ ಮಾಡುವುದಕ್ಕಾಗಿ ನಾವು ಕೆಲಸ ಮಾಡುತ್ತಿದ್ದೇವೆ. ಹೀಗಾಗಿ ದೇಶದಲ್ಲಿ ಜನರು ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ ಎಂದರು.
ಜಿಲ್ಲೆಯ ಅಭಿವೃದ್ಧಿಗಾಗಿ ಸಚಿವರ ಹೋರಾಟ: ನಂತರ ಮಾತನಾಡಿದ ಕೇಂದ್ರ ಮಾಜಿ ಸಚಿವ ಡಿ.ವಿ. ಸದಾನಂದಗೌಡ ಅವರು ಮಾತನಾಡಿ, ಯಡಿಯೂರಪ್ಪನವರು, ನಾನು ಮತ್ತು ಬಸವರಾಜು ಬೊಮ್ಮಾಯಿ ಮೂವರು ಕೊಡಗು ಜಿಲ್ಲೆಗೆ ಸಾಕಷ್ಟು ಅನುದಾನ ನೀಡಿದ್ದೇವೆ ಎಂದರು. ನಾನು ಮುಖ್ಯ ಮಂತ್ರಿ ಆಗಿದ್ದ ಸಂದರ್ಭ ಜಿಲ್ಲೆಯ ಇಬ್ಬರು ಶಾಸಕರು ಸಾಕಷ್ಟು ಕಿರಿಕ್ ಮಾಡಿದ್ದರು. ಅದು ಅವರಿಗಾಗಿ ಅಲ್ಲ, ಜಿಲ್ಲೆಯ ಅಭಿವೃದ್ಧಿಗಾಗಿ ಸಾಕಷ್ಟು ಅನುದಾನ ಬೇಕು. ಎಲ್ಲಾ ಸೌಲಭ್ಯಗಳು ಬೇಕು ಎಂದು ಸಾಕಷ್ಟು ಕಿರಿಕ್ ಮಾಡುತ್ತಿದ್ದರು ಎಂದರು.
ದೇಶದ ರಕ್ಷಣೆಗೆ ಕೊಡಗು ವೀರರ ಸೇವೆ ಅಪಾರ: ಹೀಗಾಗಿ ಕಳೆದ ಹಲವು ವರ್ಷಗಳಲ್ಲಿ ಇಬ್ಬರು ಶಾಸಕರು ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಆದ್ದರಿಂದ ಬಿಜೆಪಿ ಅಭ್ಯರ್ಥಿಗಳಿಗೆ ಜನರು ಮತ ಹಾಕಬೇಕು ಎಂದು ಇಬ್ಬರು ಮನವಿ ಮಾಡಿದರು. ದೇಶ ರಕ್ಷಣೆ ಮಾಡಿದ ಕೊಡಗಿನ ಜನತೆಯ ಸೇವೆ ಮಾಡುವ ಕೆಲಸವನ್ನು ಪ್ರಧಾನಿ ಮೋದಿಯವರು ಮಾಡಿದ್ದಾರೆ ಎಂದು ಕೇಂದ್ರ ಮಾಜಿ ಸಚಿವ ಡಿ.ವಿ. ಸದಾನಂದಗೌಡ ಹೇಳಿದರು.
ಬಹುಮತದೊಡನೆ ಬಿಜೆಪಿ ಮತ್ತೆ ಅಧಿಕಾರಕ್ಕೆ: ಕೆ.ಎಸ್.ಈಶ್ವರಪ್ಪ
ವಿಜಯ ಸಂಕಲ್ಪ ಯಾತ್ರೆ: ಇದಕ್ಕೂ ಮೊದಲು ಮಡಿಕೇರಿಯ ಚೌಡೇಶ್ವರಿ ದೇವಾಲಯದ ಬಳಿಯಿಂದ ವಿಜಯ ಸಂಕಲ್ಪಯಾತ್ರೆಗೆ ಚಾಲನೆ ನೀಡಲಾಯಿತು. ಚೌಡೇಶ್ವರಿ ದೇವಾಲಯದ ಬಳಿಯಿಂದ ಹೊರ ಮೆರವಣಿಗೆಯಲ್ಲಿ 500 ನೂರಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಚೌಡೇಶ್ವರಿ ದೇವಾಲಯದಿಂದ ಹೊರಟು ಇಂದಿರಾಗಾಂಧಿ ವೃತ್ತ, ಖಾಸಗಿ ಹಳೇ ಬಸ್ಸು ನಿಲ್ದಾಣದ ಮೂಲಕ ನೂರಾರು ಜನರು ಮೆರವಣಿಗೆಯಲ್ಲಿ ಸಾಗಿ, ಜನರಲ್ ತಿಮ್ಮಯ್ಯ ವೃತ್ತದವರೆಗೆ ಸಾಗಿತು.
ಬಳಿಕ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಬಹಿರಂಗ ಸಭೆ ನಡೆಯಿತು. ಮೆರವಣಿಗೆ ಉದ್ಧಕ್ಕೂ ನೂರಾರು ಜನರು ಬಿಜೆಪಿಗೆ ಜೈಕಾರ ಕೂಗಿದರು. ಒಟ್ಟಿನಲ್ಲಿ ಎರಡು ದಿನಗಳ ಕಾಲ ಜಿಲ್ಲೆಯಲ್ಲಿ ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಸಾಕಷ್ಟು ಯಶಸ್ವಿಯಾಗಿದ್ದರೂ, ಮಡಿಕೇರಿಯಲ್ಲಿ ನಡೆದ ವಿಜಯ ಸಂಕಲ್ಪ ಯಾತ್ರೆಯ ಮೆರವಣಿಗೆಯಲ್ಲಿ ಕಾರ್ಯಕರ್ತರ ಸಂಖ್ಯೆ ನಿರೀಕ್ಷೆಗಿಂತ ಕಡಿಮೆ ಇತ್ತು.