MTBಯಿಂದ ಅಧಿಕಾರ ದುರ್ಬಳಕೆ ಶರತ್ ಬಚ್ಚೇಗೌಡ ಬೆಂಬಲಿಗರ ಆರೋಪ

By Suvarna News  |  First Published May 6, 2022, 10:32 AM IST

ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ಪಟ್ಟಣದ ಅವಿಮುಕ್ತೇಶ್ವರ ದೇವಾಲಯದ ಬ್ರಹ್ಮರಥೋತ್ಸವಕ್ಕೆ ಸಂಬಂದಿಸಿ MTB ನಾಗರಾಜ್  ಮತ್ತು ಸ್ವಾಬಿಮಾನಿ ಶಾಸಕ.ಶರತ್ ಬಚ್ಚೇಗೌಡ ಬೆಂಬಲಿಗರ ನಡುವಿನ ಎರಡನೇ ಸುತ್ತಿನ ವಾಕ್ಸಮರ ನಡೆದಿದೆ.


ವರದಿ : ಟಿ.ಮಂಜುನಾಥ, ಹೆಬ್ಬಗೋಡಿ, ಏಷಿಯಾನೆಟ್ ಸುವರ್ಣನ್ಯೂಸ್

ಹೊಸಕೋಟೆ (ಮೇ.6) : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನಲ್ಲಿ ಯಾವಾಗಲ್ಲೂ ಜಿದ್ದಾಜಿದ್ದಿನ ಸ್ಪರ್ಧೆ ಯಾವುದೇ ಶಂಕು ಸ್ಥಾಪನೆ, ಲೋಕಾರ್ಪಣೆ ಅಥವಾ ಧಾರ್ಮಿಕ ಆಚರಣೆಗಳನ್ನು ಪ್ರತಿಷ್ಠೆಯ ಪ್ರಶ್ನೆಯಾಗಿಸಿಕೊಳ್ಳುತ್ತಾರೆ, ಇದೇ ತಿಂಗಳು 16ರಂದು‌ ಪಟ್ಟಣದ ಅವಿಮುಕ್ತೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವ ನಡೆಯುತ್ತಿದೆ, ಕಳೆದೆರೆಡು ವರ್ಷಗಳಿಂದ ಕರೋನಾದಿಂದಾಗಿ ನಡೆದಿರಲಿಲ್ಲ ಈ ಬಾರಿ ಭಕ್ತರು ಕೂಡ ಬ್ರಹ್ಮರಥೋತ್ಸವ ಕಣ್ತುಂಬಿಕೊಳ್ಳಲು ಉತ್ಸುಕರಾಗಿದ್ದಾರೆ ಆದರೆ ಈ ಬಾರಿ ಕ್ಷೇತ್ರದಲ್ಲಿ ಎರಡೆರಡು ಜನಪ್ರತಿನಿಧಿಗಳು ಅಂದ್ರೇ ತಾಲೂಕಿನ ಮೊದಲನೇ ಪ್ರಜೆ ಎಂದ್ರೇ ಸಹಜವಾಗಿಯೇ ಶಾಸಕರಾಗುತ್ತಾರೆ. ಇದುವೇ ಇದೀಗ ಎದ್ದಿರುವ ವಿವಾದ.

Latest Videos

undefined

ಶಾಸಕ.ಶರತ್ ಬಚ್ಚೇಗೌಡ್ರು ಮೊದಲನೇ ಪ್ರಜೆ ನಾನೇಂದು ಪ್ರತಿಪಾದಿಸಿಕೊಂಡ್ರೇ ಪೌರಾಡಳಿತ ಸಚಿವ, ಎಂಟಿಬಿ.ನಾಗರಾಜ್ ಕೂಡ ಅದನ್ನೇ ಹೇಳ್ತಾರೆ ಇದೀಗ ಬ್ರಹ್ಮರಥೋತ್ಸವಕ್ಕೆ ಯಾರು ಕನ್ವಿನರ್ ಯಾರಾಗಬೇಕೆಂಬ ಪ್ರಶ್ನೆ ಉದ್ಭವವಾಗಿದೆ, ಶರತ್ ಬಚ್ಚೇಗೌಡ್ರು ಮತ್ತು ಎಂಟಿಬಿ.ನಾಗರಾಜ್ ಬೆಂಬಲಿಗರ ನಡುವೆ ಪ್ರತಿಷ್ಠೆಯ ಪ್ರಶ್ನೆಯಾಗಿ ವಾಕ್ಸಮರಗಳು ಆರಂಭವಾಗಿ ಇಂದು ಶರತ್ ಬಚ್ಚೇಗೌಡರ ಬೆಂಬಲಿಗರು ಪತ್ರಿಕಾಗೋಷ್ಠಿ ನಡೆಸಿ ಎಂಟಿಬಿ.ನಾಗರಾಜ್ ಬೆಂಬಲಿಗರ ವಿರುದ್ದ ಕಿಡಿಕಾರಿದರು.

ನಗರದಲ್ಲಿ ಬಿಜೆಪಿ ಕಾರ್ಯಕರ್ತರು ಸಚಿವ ಎಂಟಿಬಿ ನಾಗರಾಜ್ ಅವರ ಮಂತ್ರಿ ಆಗಿದ್ದಾರೆ ಎಂದು ಅಧಿಕಾರ ದುರ್ಬಳಕೆ ಮಾಡಿಕೊಂಡು ಆಚರಣೆಯ ಪದ್ದತಿಯನ್ನು ಬದಲಾವಣೆ ಮಾಡಿದ್ದಾರೆ ಎಂದು ಬಿಎಂಆರ್‌ಡಿಎ ಮಾಜಿ ಅಧ್ಯಕ್ಷ ವಿಜಯ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಕಾರ್ಯಕರ್ತರು ಶಾಸಕ ಶರತ್ ಬಚ್ಚೇಗೌಡರ ವಿರುದ್ದ ಸುದ್ದಿಘೋಷ್ಟಿ ನಡೆಸಿ ಆರೋಪ ಮಾಡಿದ ಹಿನ್ನೆಲೆ ನಗರದಲ್ಲಿ ಸುದ್ದಿಘೋಷ್ಠಿ ಆಯೋಜಿಸಿ ಮಾತನಾಡಿದರು.

INDIAN BANK RECRUITMENT 2022: ಕ್ರೀಡಾ ಕೋಟದ ಮೇಲೆ ಅರ್ಜಿ ಆಹ್ವಾನ

ಪಾರಂಪರಿಕವಾಗಿ ನಗರದಲ್ಲಿ ಅವಿಮುಕ್ತೇಶ್ವರ ರಥೋತ್ಸವವನ್ನು ನಗರದಲ್ಲಿ ತಹಸೀಲ್ಧಾರ್, ಶಾಸಕರ ಸಭೆ ನಡೆಸಿ ಕನ್ವಿನರ್ ಆಗಿ ಶಾಸಕರ ಬೆಂಬಲಿಗರನ್ನು ಆಯ್ಕೆ ಮಾಡಿಕೊಂಡು ಆಚರಣೆ ಮಾಡಿಕೊಂಡು ಬರುತ್ತಿದ್ದೇವೆ. ಆದರೆ ಈ ಭಾರಿ ಸಚಿವ ಎಂಟಿಬಿ ನಾಗರಾಜ್ ಹಾಗೂ ಅವರ ಬೆಂಬಲಿಗರು ಶಾಸಕ ಶರತ್ ಬಚ್ಚೇಗೌಡರ ಬೆಂಬಲಿಗರಿಗೆ ಕನ್ವಿನರ್ ಸ್ಥಾನ ಧಕ್ಕಬಾರದೆಂಬ ದೃಷ್ಠಿಯಿಂದ ತಹಸೀಲ್ಧಾರ್ ಅವರನ್ನೆ ಕನ್ವಿನರ್ ಆಗಿ ನೇಮಕ ಮಾಡಿ 1904 ರಿಂದ ಪಾರಂಪರಿಕವಾಗಿ ಆಚರಣೆ ಮಾಡಿಕೊಂಡು ಬರುತ್ತಿರುವ ಆಚರಣೆ ಪದ್ದತಿಗೆ ಅಧಿಕಾರ ದುರ್ಬಳಕೆ ಮಾಡಿಕೊಂಡು ಹೊಸ ಪದ್ದತಿ ಪ್ರಾರಂಭ ಮಾಡಿದ್ದಾರೆ. ಇದರಿಂದ ನಗರದ ಜನತೆಯ ಅಸ್ತಿತ್ವಕ್ಕೆ ಧಕ್ಕೆ ಬಂದಂತಾಗಿದೆ ಎಂದರು.

ನಗರಸಭೆ ಸದಸ್ಯ ಕೇಶವಮೂರ್ತಿ ಮಾತನಾಡಿ ಬಿಜೆಪಿ ಮುಖಂಡರು ತಮ್ಮ ನಾಯಕರನ್ನು ಮೆಚ್ಚಿಸುವ ಉದ್ದೇಶದಿಂದ ಸುದ್ದಿಘೋಷ್ಠಿ ನಡೆಸಿ ಶಾಸಕರ ವಿರುದ್ದ ಬಾಯಿಗೆ ಬಂದ ಹಾಗೆ ಮಾತನಾಡುವುದನ್ನು ಹಾಗೂ ಸುಳ್ಳು ಹೇಳುವುದನ್ನು ಬಿಡಬೇಕು. ನಾವು ನಗರಸಭೆಯಲ್ಲಿ ವಿರೋಧ ಪಕ್ಷದಲ್ಲಿದ್ದರೂ ಕೂಡ ಅಭಿವೃದ್ದಿ ದೃಷ್ಠಿಯಿಂದ ನಿಮಗೆ ಎಲ್ಲಾ ಸಹಕಾರ ನೀಡುತ್ತಿದ್ದೇವೆ. ಶಾಸಕ ಶರತ್ ಬಚ್ಚೇಗೌಡರ ನಿರ್ದೇಶನದಂತೆ ತೇರು ಬೀದಿ ಅಭಿವೃದ್ದಿ ದೃಷ್ಠಿಯಿಂದ ನಮ್ಮ ವಾರ್ಡ್ಗಳ ಅನುದಾನ ಕೂಡ ಪಡೆಯದೆ ನಿಮಗೆ ನೀಡಿದ್ದೇವೆ. ಆದರೆ ನೀವು ಜನರನ್ನು ದಿಕ್ಕು ತಪ್ಪಿಸುವ ದೃಷ್ಠಿಯಿಂದ ನಗರೋತ್ಥಾನ ಯೋಜನೆಯಡಿ ವಿಶೇಷ ಅನುದಾನ ತಂದಿದ್ದೇವೆ ಎಂದು ಯಾಕೆ ಸುಳ್ಳು ಹೇಳಿ ಜನರ ದಿಕ್ಕು ತಪ್ಪಿಸುತ್ತೀರಿ ಎಂದರು.

Canara Bank Recruitment 2022: ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಟೌನ್ ಬ್ಯಾಂಕ್ ಮಾಜಿ ಅಧ್ಯಕ್ಷ ನಟರಾಜ್ ಮಾತನಾಡಿ ಹೊಸಕೋಟೆಯಲ್ಲಿ ಚನ್ನಭೈರೇಗೌಡ ಕಾಲದಿಂದ ಪ್ರಾರಂಭ ಮಾಡಿ ಬಚ್ಚೇಗೌಡರ ಅವಧಿವರೆಗೆ ಎಷ್ಟು ಶಾಶ್ವತ ಅಭಿವೃದ್ದಿ ಕಾರ್ಯಗಳನ್ನು ಮಾಡಿದ್ದಾರೆ. ಎಂದು ಜನರಿಗೆ ತಿಳಿದಿದೆ. ಆದರೆ ನೀವು ಒಂದಿಷ್ಟು ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಿ ನೀವೆ ತಾಲೂಕನ್ನು ಅಭಿವೃದ್ದಿ ಮಾಡಿದಂತೆ ನಿಮ್ಮ ಬೆನ್ನನ್ನು ನೀವೆ ತಟ್ಟಿಕೊಳ್ಳುವುದು ಸರಿಯಲ್ಲ. 

ಈ ಸಂಧರ್ಭದಲ್ಲಿ ಯುವ ಮುಖಂಡ ಬಿ.ವಿ.ಭೈರೇಗೌಢ, ನಗರಸಭೆ ಸದಸ್ಯ ಗೌತಮ್, ಪುರಸಭೆ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ವಿಜಯ್ ಕುಮಾರ್, ಟೌನ್ ಬ್ಯಾಂಕ್ ಮಾಜಿ ಅಧ್ಯಕ್ಷ ನಟರಾಜ್, ಮಾದಾರ ಮಹಾಸಭಾ ಅಧ್ಯಕ್ಷ ಡಾ.ಹೆಚ್.ಎಂ.ಸುಬ್ಬರಾಜ್, ಮುಖಂಡರಾದ ತ್ಯಾಗರಾಜ್, ರಾಕೇಶ್, ಗೋಪಿ ಇದ್ದರು.

ಶಾಸಕ ಶರತ್ ಬಚ್ಚೇಗೌಡ ಫಾರಿನ್ ಸಂಸ್ಕೃತಿ ಅಲ್ಲ: ಶಾಸಕ ಶರತ್ ಬಚ್ಚೇಗೌಡರದು ಫಾರಿನ್‌ನಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ ಹೊರತು, ಅಲ್ಲಿನ ಸಂಸ್ಕೃತಿ ಸಂಪ್ರದಾಯದ ಅನುಕರಣೆ ಎಂದಿಗೂ ಮಾಡಿಲ್ಲ. ಬದಲಾಗಿ ಅವರ ಮಾತು ನಡವಳಿಕೆ ಹಳ್ಳಿ ಸಂಸ್ಕೃತಿಯಲ್ಲೆ ಇದೆ. ವಿನಾಕಾರಣ ನಿಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಬಾಯಿಗೆ ಬಂದಂತೆ ಮಾತನಾಡುವುದನ್ನು ಬಿಡಬೇಕು. ಅವರ ನಡೆ, ನುಡಿ ಎಂತಹುದು ಎಂದು ಇಡೀ ರಾಜ್ಯದ ಜನ ವಿಧಾನಸಭೆಯಲ್ಲಿ ಮಾತನಾಡುವುದನ್ನು ನೋಡಿ ಒಪ್ಪಿಕೊಂಡಿದ್ದಾರೆ. ಎಂದು ಯುವ ಮುಖಂಡ ಬಿ.ವಿ.ಭೈರೇಗೌಡ ಕಿಡಿಕಾರಿದರು.

click me!