ಮಂಡ್ಯ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವ ಡಾ.ಅಶ್ವಥನಾರಾಯಣ ಟಿಪ್ಪು ಸುಲ್ತಾನ್‌ನನ್ನು ಮುಗಿಸಿದ ರೀತಿಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಹೊಡೆದು ಹಾಕಿ ಎಂದು ಪ್ರಚೋದನಕಾರಿ ಹೇಳಿಕೆ ನೀಡಿರುವುದು ಖಂಡನೀಯ: ಆರ್.ಬಿ.ತಿಮ್ಮಾಪುರ
ಲೋಕಾಪುರ(ಫೆ.22): ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧ ಉನ್ನತ ಶಿಕ್ಷಣ ಸಚಿವ ಅಶ್ವಥನಾರಾಯಣ ನೀಡುವ ಹೇಳಿಕೆಯನ್ನು ಖಂಡಿಸಿ ಲೋಕಾಪುರ ಹಾಗೂ ಮುಧೋಳ ಬ್ಲಾಕ ಕಾಂಗ್ರೆಸ್ ಅಧ್ಯಕ್ಷರ ನೇತೃತ್ವದಲ್ಲಿ ಕಾರ್ಯಕರ್ತರು ಶನಿವಾರ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಮಾಜಿ ಸಚಿವ ಆರ್.ಬಿ.ತಿಮ್ಮಾಪುರ ಮಾತನಾಡಿ, ಮಂಡ್ಯ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವ ಡಾ.ಅಶ್ವಥನಾರಾಯಣ ಟಿಪ್ಪು ಸುಲ್ತಾನ್‌ನನ್ನು ಮುಗಿಸಿದ ರೀತಿಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಹೊಡೆದು ಹಾಕಿ ಎಂದು ಪ್ರಚೋದನಕಾರಿ ಹೇಳಿಕೆ ನೀಡಿರುವುದು ಖಂಡನೀಯ. ಈ ರೀತಿ ಪ್ರಚೋದನಕಾರಿ ಹೇಳಿಕೆ ನೀಡಿರುವ ಸಚಿವ ಬಹಿರಂಗವಾಗಿ ಕ್ಷಮೆ ಕೇಳಬೇಕು. ಅವರ ವಿರುದ್ಧ ಪೊಲೀಸ್ ಇಲಾಖೆ ಕೊಲೆ ಪ್ರಕರಣ ದಾಖಲು ಮಾಡಿ ಕಾನೂನು ಕ್ರಮಕೈಗೊಳ್ಳಬೇಕು. ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಬೇಕು ಎಂದು ಒತ್ತಾಯಿಸಿದರು.
undefined
ಹಿಂದೂಗಳು ಮನೆಯಲ್ಲಿ ಖಡ್ಗ, ತಲ್ವಾರ್ ಇಟ್ಟುಕೊಳ್ಳಿ; ಗೋವು, ಸೋದರಿಯರ ರಕ್ಷಣೆಗೆ ಆಯುಧ ಬೇಕು: ಮುತಾಲಿಕ್
ಕೆಪಿಸಿಸಿ ಪ್ರಚಾರ ಸಮಿತಿ ಸಂಯೋಜಕ ಹಾಗೂ ಕಾಂಗ್ರೆಸ್ ಮುಖಂಡ ಸತೀಶ ಬಂಡಿವಡ್ಡರ ಮಾತನಾಡಿ, ಉನ್ನತ ಸ್ಥಾನದಲ್ಲಿರುವ ಒಬ್ಬ ಜವಾಬ್ದಾರಿಯುತ ಸಚಿವರ ಪರಿಜ್ಞಾನ ಇಲ್ಲದೇ, ಮಾಜಿ ಸಿಎಂ ಸಿದ್ಧರಾಮಯ್ಯ ಕೊಲೆಗೆ ಪರೋಕ್ಷವಾಗಿ ಪ್ರಚೋದಿಸಿದ್ದಾರೆ. ತಾಕತ್ತಿದ್ದರೆ ಸಿದ್ಧರಾಮಯ್ಯ ಅವರನ್ನು ಮುಟ್ಟಲಿ. ಮುಂದೆ ಕಾಂಗ್ರೆಸ್ ಕಾರ್ಯಕರ್ತರ ಶಕ್ತಿ ಏನೆಂಬುದನ್ನು ತೋರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಜಿಲ್ಲಾ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಕಾಶಿನಾಥ ಹುಡೇದ ಮಾತನಾಡಿ, ಸಚಿವರೊಬ್ಬರು ಈ ರೀತಿ ಪ್ರಚೋದನಕಾರಿ ಹೇಳಿಕೆ ನೀಡಿರುವ ಹಿನ್ನಲೆಯಲ್ಲಿ ಅವರ ವಿರುದ್ಧ ಸ್ವಯಂಪ್ರೇರಿತವಾಗಿ ಪೊಲೀಸರು ಪ್ರಕರಣ ದಾಖಲಿಸಬೇಕು. ರಾಜ್ಯಪಾಲರು ಈ ಪ್ರಕರಣದಲ್ಲಿ ಮಧ್ಯ ಪ್ರವೇಶಿಸಬೇಕು. ಟಿಪ್ಪುವಿನ ಬಗ್ಗೆ ಜನರಲ್ಲಿ ದ್ವೇಷ ಭಾವನೆ ಮೂಡಿಸುತ್ತಿರುವ ಅಶ್ವಥನಾರಾಯಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವವರೆಗೆ ಹಾಗೂ ಪೊಲೀಸರು ಅವರನ್ನು ಬಂಧಿಸುವವರೆಗೆ ಕಾಂಗ್ರೆಸ್ ಪ್ರತಿಭಟನೆ ನಡೆಸಲಿದೆ ಎಂದರು.
ಬಿಜೆಪಿ ಕೆಟ್ಟ ಆಡಳಿತ ಶೀಘ್ರದಲ್ಲೇ ಅಂತ್ಯ: ರಣದೀಪ ಸಿಂಗ್ ಸುರ್ಜೇವಾಲಾ
ಮುಧೋಳ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧರೆಪ್ಪ ಸಾಂಗ್ಲೀಕರ, ಲೋಕಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕಿವಡಿ, ಬಿಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಶಿವಾನಂದ ಉದಪುಡಿ, ತಾಪಂ ಮಾಜಿ ಸದಸ್ಯ ರಫೀಕ್ ಭೈರಕದಾರ, ಕಾಂಗ್ರೆಸ್ ಮುಖಂಡರಾದ ವಿಠ್ಠಲ ತುಮ್ಮರಮಟ್ಟಿ, ಮಾತನಾಡಿದರು.
ಸಚಿವ ಅಶ್ವಥನಾರಾಯಣ ಹಾಗೂ ಬೊಮ್ಮಾಯಿ ಸರಕಾರದ ವಿರುದ್ಧ, ಬಿಜೆಪಿ ಸರಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮುಖಂಡರಾದ ಉದಯಸಾರವಾಡ, ವಿಜುಗೌಡ ಪಾಟೀಲ, ಸುಭಾಸ ಗಸ್ತಿ, ತಾಲೂಕು ಅಹಿಂದ ಅಧ್ಯಕ್ಷ ಗೋವಿಂದ ಕೌಲಗಿ, ಕೃಷ್ಣಾ ಜಟ್ಟೆನ್ನವರ, ಕೆಪಿಸಿಸಿ ಅಸಂಘಟಿತ ಜಿಲ್ಲಾಧ್ಯಕ್ಷ ಪರಮಾನಂದ ಕುಟ್ರಟ್ಟಿ, ಪವನ ಉದಪುಡಿ, ಬಿ.ಕೆ.ಮಠದ, ಮಹೇಶ ಮಳಲಿ, ಅಬ್ದುಲ್ ವಾಲಿಕಾರ, ಮಹೇಶ ಪೂಜಾರ, ರೆಹಮಾನ ತೊರಗಲ್, ಕುಮಾರ ಕಾಳಮ್ಮನವರ, ಲೋಕಣ್ಣ ಉಳ್ಳಾಗಡ್ಡಿ, ಸಿದ್ದು ಕಿಲಾರಿ, ರಿಯಾಜ್ ಗುಳೇದಗುಡ್ಡ, ಹಸನ್ ಡಂಗಿ, ಕಾಂಗ್ರೆಸ್ ಕಾರ್ಯಕರ್ತರು ಇದ್ದರು.