ದ್ವೇಷ ಭಾಷಣ: ನಡ್ಡಾ, ಶಾ, ಯೋಗಿ ವಿರುದ್ಧ ಕ್ರಮಕ್ಕೆ ಕಾಂಗ್ರೆಸ್‌ ಒತ್ತಾಯ

By Kannadaprabha NewsFirst Published May 3, 2023, 3:00 AM IST
Highlights

ಬಿಜೆಪಿ ನಾಯಕರ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗಕ್ಕೆ ಒತ್ತಾಯಿಸಿದೆ. ಕಾಂಗ್ರೆಸ್‌ ನಾಯಕರಾದ ಅಜಯ್‌ ಮಾಕನ್‌, ವಿವೇಕ್‌ ಟಂಖಾ, ಸಲ್ಮಾನ್‌ ಖುರ್ಶಿದ್‌ ಹಾಗೂ ಪವನ್‌ ಖೇರಾ ಅವರ ತಂಡವು ಮಂಗಳವಾರ ಆಯೋಗಕ್ಕೆ ಭೇಟಿ ನೀಡಿ ‘ದ್ವೇಷ ಭಾಷಣ’ ವಿರುದ್ಧ ಕ್ರಮಕ್ಕೆ ಜ್ಞಾಪನ ಪತ್ರ ನೀಡಿದೆ.

ನವದೆಹಲಿ(ಮೇ.03):  ಕರ್ನಾಟಕ ವಿಧಾನಸಭಾ ಚುನಾವಣೆ ಪ್ರಚಾರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ ದ್ವೇಷ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿರುವ ಕಾಂಗ್ರೆಸ್‌, ಈ ಬಿಜೆಪಿ ನಾಯಕರ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗಕ್ಕೆ ಒತ್ತಾಯಿಸಿದೆ. ಕಾಂಗ್ರೆಸ್‌ ನಾಯಕರಾದ ಅಜಯ್‌ ಮಾಕನ್‌, ವಿವೇಕ್‌ ಟಂಖಾ, ಸಲ್ಮಾನ್‌ ಖುರ್ಶಿದ್‌ ಹಾಗೂ ಪವನ್‌ ಖೇರಾ ಅವರ ತಂಡವು ಮಂಗಳವಾರ ಆಯೋಗಕ್ಕೆ ಭೇಟಿ ನೀಡಿ ‘ದ್ವೇಷ ಭಾಷಣ’ ವಿರುದ್ಧ ಕ್ರಮಕ್ಕೆ ಜ್ಞಾಪನ ಪತ್ರ ನೀಡಿದೆ.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಟಂಖಾ, ‘ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ದೇಶದಲ್ಲಿ ಗಲಭೆಗಳು ಭುಗಿಲೇಳಲಿವೆ ಎಂದು ಗೃಹ ಸಚಿವ ಶಾ ಹೇಳುವುದರ ಅರ್ಥವೇನು.? ಅವರು ಸಮಾಜವನ್ನು ಒಡೆಯುವಂಥ ಹೇಳಿಕೆ ನೀಡಿದ್ದಾರೆ. ಸಾಂವಿಧಾನಿಕ ಸ್ಥಾನದಲ್ಲಿರುವ ಜನರು ಅಂಥ ದ್ವೇಷ ಭಾಷಣಗಳನ್ನು ಮಾಡಬಾರದು. ಇದು ಕಾನೂನಿಗೆ ವಿರುದ್ಧವಾದದ್ದು. ಸುಪ್ರೀಂಕೋರ್ಟ್‌ ಆದೇಶದ ಮೇರೆಗೆ ಇವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು’ ಎಂದರು.

Latest Videos

Karnataka BJP Manifesto 2023: 16 ಭರವಸೆಗಳ ಬಿಜೆಪಿ ಪ್ರಣಾಳಿಕೆ ಬಿಡುಗಡೆ, ಕಾಂಗ್ರೆಸ್‌ ಗ್ಯಾರಂಟಿಗಳಿಗೆ ಸೆಡ್ಡು

ಯಾವುದೇ ದೂರು ನೀಡದಿದ್ದರೂ ದ್ವೇಷ ಭಾಷಣ ಮಾಡುವವರ ವಿರುದ್ಧ ಸ್ವಯಂ ಪ್ರಕರಣಗಳನ್ನು ದಾಖಲಿಸುವಂತೆ ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸುಪ್ರೀಂಕೋರ್ಟ್‌ ಇತ್ತೀಚೆಗೆ ನಿರ್ದೇಶಿಸಿದೆ.

click me!