ಬಜರಂದಳ ಬ್ಯಾನ್‌: ಕಾಂಗ್ರೆಸ್‌ ತನ್ನ ಗುಂಡಿಯನ್ನು ತಾನೇ ತೋಡಿಕೊಂಡಂತೆ, ಸದಾನಂದ ಗೌಡ

By Kannadaprabha News  |  First Published May 3, 2023, 2:30 AM IST

ವ್ಯಕ್ತಿಗತ ವಿಚಾರದ ಬಗ್ಗೆ ಹಾಗೂ ಹಿಂದೂ ರಾಷ್ಟ್ರದಲ್ಲಿ ಹಿಂದೂಗಳಿಗೆ ರಕ್ಷಣೆ ನೀಡುವ ಯಾವುದೇ ಸಂಘಟನೆ ಬಗ್ಗೆ ಟೀಕಿಸುವುದು, ಬ್ಯಾನ್‌ ಮಾಡುತ್ತೇವೆ ಎಂದು ಹೆದರಿಸುವುದು ಹುಚ್ಚುತನದ ಪರಮಾವಧಿಯಾಗಿದೆ: ಡಿ.ವಿ.ಸದಾನಂದ ಗೌಡ 


ಪುತ್ತೂರು(ಮೇ.03): ಸಂಘವನ್ನು ಬ್ಯಾನ್‌ ಮಾಡಲು ಹೋಗಿ ಕಾಂಗ್ರೆಸ್‌ನ ಪರಿಸ್ಥಿತಿ ಏನಾಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಇದೀಗ ಕಾಂಗ್ರೆಸ್‌ ಬಜರಂಗದಳವನ್ನು ಬ್ಯಾನ್‌ ಮಾಡಲು ಮುಂದಾದರೆ ಅವರ ಗುಂಡಿಯನ್ನು ಅವರೇ ತೋಡಿಕೊಂಡಂತೆ ಆಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ತಿಳಿಸಿದ್ದಾರೆ.

ಅವರು ಮಂಗಳವಾರ ಪುತ್ತೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ವ್ಯಕ್ತಿಗತ ವಿಚಾರದ ಬಗ್ಗೆ ಹಾಗೂ ಹಿಂದೂ ರಾಷ್ಟ್ರದಲ್ಲಿ ಹಿಂದೂಗಳಿಗೆ ರಕ್ಷಣೆ ನೀಡುವ ಯಾವುದೇ ಸಂಘಟನೆ ಬಗ್ಗೆ ಟೀಕಿಸುವುದು, ಬ್ಯಾನ್‌ ಮಾಡುತ್ತೇವೆ ಎಂದು ಹೆದರಿಸುವುದು ಹುಚ್ಚುತನದ ಪರಮಾವಧಿಯಾಗಿದೆ.

Tap to resize

Latest Videos

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ: ಬಿಜೆಪಿ, ಕಾಂಗ್ರೆಸ್‌ ನೇರ ಹಣಾಹಣಿ

ಇಂದು ದೇಶದಲ್ಲಿ ಶಾಂತಿ, ಸುವ್ಯವಸ್ಥೆ, ಶಿಸ್ತು ಇರುವುದಕ್ಕೆ ಬಜರಂಗದಳ, ವಿಶ್ವ ಹಿಂದೂ ಪರಿಷತ್‌ ಇಂತಹ ಸಂಘಟನೆಗಳು ಕಾರಣ. ಇವು ಸಮಾಜದಲ್ಲಿ ಸಮತೋಲನ ಕಾಪಾಡುತ್ತಿವೆ. ಈ ಸಂಘಟನೆಗಳಿಗೂ ರಾಜಕೀಯಕ್ಕೂ ಯಾವುದೇ ನಂಟಿಲ್ಲ. ಅವರು ಅವರಷ್ಟಕ್ಕೆ ಸಮಾಜದ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್‌ ರಾಜಕಾರಣ ಮಾಡುವ ಬದಲು ಇಂತಹ ಸಂಘಟನೆ ಮೇಲೆ ಪ್ರಹಾರಕ್ಕೆ ಮುಂದಾಗಿರುವುದು ಅವರ ಗುಂಡಿಯನ್ನು ತೋಡಿಕೊಂಡಂತೆ. ಕಾಂಗ್ರೆಸ್‌ ದೇಶದಲ್ಲಿ ಉಳಿಯಬೇಕು ಎಂದಾದರೆ ಅವರ ಸುದ್ದಿಯನ್ನು ಬಿಟ್ಟು ಬಿಡಲಿ ಎಂದು ಎಚ್ಚರಿಸಿದ್ದಾರೆ.

click me!