
ನವದೆಹಲಿ(ನ.15): ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆ ಮುಗಿದಿದೆ. ಇದೀಗ ಫಲಿತಾಂಶಕ್ಕಾಗಿ ಬಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಇದರ ಬೆನ್ನಲ್ಲೇ ಗುಜರಾತ್ ಚುನಾವಣೆಗೆ ಅಖಾಡ ಸಜ್ಜಾಗಿದೆ. ಗುಜರಾತ್ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವ ವಿಶ್ವಾಸ ವ್ಯಕ್ತಪಡಿಸಿದೆ. ಇದೀಗ ಗುಜರಾತ್ ಚುನಾವಣೆಯಲ್ಲಿ ಪ್ರಚಾರ ಮಾಡಲು ಸ್ಟಾರ್ ಪ್ರಚಾರಕರ ಲಿಸ್ಟ್ ಬಿಡುಗಡೆ ಮಾಡಿದೆ. ಪಕ್ಷದ ನೂತನ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸೇರಿದಂತೆ ಹಲವರು ಸ್ಟಾರ್ ಪ್ರಚಾರಕರ ಲಿಸ್ಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಈ ಪಟ್ಟಿಯಿಂದ ಪಕ್ಷಕ್ಕೆ ಸೆಡ್ಡು ಹೊಡೆದ ಜಿ23 ನಾಯಕರನ್ನು ಹೊರಗಿಡಲಾಗಿದೆ. ಶಶಿ ತರೂರ್, ಆನಂದ್ ಶರ್ಮಾ, ಮನೀಶ್ ತಿವಾರಿ ಸೇರಿದಂತೆ ಹಲವು ನಾಯಕರನ್ನು ಹೊರಗಿಡಲಾಗಿದೆ.
ಕಾಂಗ್ರೆಸ್(Congress) ಅಧ್ಯಕ್ಷರ ಚುನಾವಣೆಯಲ್ಲಿ ಸ್ಪರ್ಧಿಸಿದ ಶಶಿ ತರೂರ್(Shashi Tharoor), ಮಲ್ಲಿಕಾರ್ಜನ ಖರ್ಗೆ(Mallikarjun Kharge) ವಿರುದ್ಧ ಸೋಲು ಕಂಡಿದ್ದರು. ಬಳಿಕ ಶಶಿ ತರೂರ್ ಕಾಂಗ್ರೆಸ್ ಪರವಾಗಿ ಮಾತನಾಡಿದ್ದಾರೆ. ಆದರೆ ಕಾಂಗ್ರೆಸ್ ಮಾತ್ರ ಶಶಿ ತರೂರ್ ಅವರನ್ನು ದೂರವಿಟ್ಟಿದೆ. ಚುನಾವಣೆಗಾಗಿ ಪಕ್ಷ ರಚಿಸಿದ ಯಾವುದೇ ಹೊಸ ಸಮಿತಿಗಳಲ್ಲಿ ಶಶಿ ತರೂರ್‌ಗೆ ಸ್ಥಾನ ಸಿಕ್ಕಿಲ್ಲ. ಇದೀಗ ಗುಜರಾತ್ ಚುನಾವಣೆಯ(Gujarat Assembly Election) ಸ್ಟಾರ್ ಪ್ರಚಾರಕ ಲಿಸ್ಟ್‌ನಿಂದಲೂ ಶಶಿ ತರೂರ್ ಔಟ್ ಆಗಿದ್ದಾರೆ.
ಓವೈಸಿಗೆ ಶಾಕ್, ಮುಸ್ಲಿಮ್ ಯುವಕರಿಂದ ಕಪ್ಪು ಬಾವುಟ ಪ್ರದರ್ಶಿಸಿ ಮೋದಿ ಮೋದಿ ಘೋಷಣೆ!
ಇತ್ತ ಹಿರಿಯ ನಾಯಕ ಆನಂದ್ ಶರ್ಮಾರನ್ನು(Anand Sharma) ಈಗಾಗಲೇ ಕಡೆಗಣಿಸಲಾಗಿದೆ. ಹಿಮಾಚಲ ಪ್ರದೇಶ(Himachal Pradesh Election) ಚುನಾವಣೆಯ ಪ್ರಮುಖ ಸಮಿತಿಯಿಂದಲೂ ಆನಂದ್ ಶರ್ಮಾ ರಾಜೀನಾಮೆ ನೀಡಿ ಹೊರಬಂದಿದ್ದರು. ಇದೀಗ ಗುಜರಾತ್ ಚುನಾವಣೆಯಲ್ಲಿ ಆನಂದ್ ಶರ್ಮಾ ಅವರನ್ನು ಕಾಂಗ್ರೆಸ್ ಹೊರಗಿಟ್ಟಿದೆ. ಇತ್ತೀಚೆಗೆ ಪಕ್ಷ ಸೇರಿದ ಹಲವು ನಾಯಕರನ್ನು ಕಾಂಗ್ರೆಸ್ ಸ್ಟಾರ್ ಪ್ರಚಾರಕ ಲಿಸ್ಟ್‌ನಲ್ಲಿ ಸೇರಿಸಿಕೊಂಡಿದೆ.
ಕಾಂಗ್ರೆಸ್ ಕಾರ್ಯರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ರಾಜಸ್ಥಾನ ಕಾಂಗ್ರೆಸ್ ಪ್ರಮುಖ ನಾಯಕ ಸಚಿನ್ ಪೈಲೆಟ್, ಚತ್ತೀಸಘಡ ಸಿಎಂ ಭೂಪೇಶ್ ಭಾಗೆಲ್ ಕೂಡ ಸ್ಟಾರ್ ಪ್ರಚಾರಕ ಲಿಸ್ಟ್‌ನಲ್ಲಿ ಸ್ಥಾನ ಪಡೆದಿದ್ದಾರೆ. ಇನ್ನು ಪ್ರಧಾನಿ ಮೋದಿ ವಿರುದ್ಧ ಮಾತನಾಡುತ್ತಲೇ ಕಾಂಗ್ರೆಸ್ ಪಕ್ಷ ಸೇರಿದ ಜಿಗ್ನೇಶ್ ಮೇವಾನಿ ಹಾಗೂ ಕನ್ಹಯ್ಯ ಕುಮಾರ್ ಕೂಡ ಸ್ಟಾರ್ ಪ್ರಚಾರಕ ಲಿಸ್ಟ್‌ನಲ್ಲಿ ಸ್ಥಾನ ಪಡೆದಿದ್ದಾರೆ.
Gujarat Election 2022: ನರೇಂದ್ರ ಮೋದಿ ಸ್ಟೇಡಿಯಂ ಹೆಸರು ಬದಲಾವಣೆ, ಉದ್ಯೋಗ ಭರವಸೆ ನೀಡಿದ ಕಾಂಗ್ರೆಸ್ ಪ್ರಣಾಳಿಕೆ!
ಬಿಜೆಪಿ ಭದ್ರಕೋಟೆಯಾಗಿರುವ ಗುಜರಾತ್‌ನಲ್ಲಿ ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ. ಡಿಸೆಂಬರ್ 1 ಹಾಗೂ 5 ರಂದು ಮತದಾನ ನಡೆಯಲಿದೆ. ಡಿಸೆಂಬರ್ 8 ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.
ಕಾಂಗ್ರೆಸ್‌ಗೂ ತಟ್ಟಿದ ಬಂಡಾಯ ಬಿಸಿ
ಕಾಂಗ್ರೆಸ್‌ಗೂ, ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಂಡಾಯ ಬಿಸಿ ತಟ್ಟಿದೆ. ಜಮಲ್‌ಪುರ ಖಾದಿಯಾ ಕ್ಷೇತ್ರದಿಂದ ಹಾಲಿ ಶಾಸಕ ಇಮ್ರಾನ್‌ಗೆ ಟಿಕೆಟ್ ನೀಡಿದ್ದರ ವಿರುದ್ಧ ಅಹಮದಾಬಾದ್‌ನ ಪಕ್ಷದ ಕೇಂದ್ರದ ಕಛೇರಿ ಎದುರು ನೂರಾರು ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಈ ವೇಳೆ ರಾಜ್ಯ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಭರತ್‌ಸಿನ್ಹ ಸೋಲಂಕಿ, ಇಮ್ರಾನ್‌ರಿಂದ ಹಣ ಪಡೆದುಕೊಂಡಿದ್ದಾರೆ. ಇದು ಬಿಜೆಪಿಯನ್ನು ಗೆಲ್ಲಿಸುವ ಕುತಂತ್ರ ಎಂದು ಆರೋಪಿಸಿದ ಕಾರ್ಯಕರ್ತರು ಸೋಲಂಕಿರ ಪೋಸ್ಟರ್‌ಗಳನ್ನು ಸುಟ್ಟು ಹಾಕಿ ಕಚೇರಿಯಲ್ಲಿ ನಾಮಫಲಕವನ್ನು ಧ್ವಂಸ ಮಾಡಿ ಗೋಡೆಗಳಲ್ಲಿ ಅವರ ಬಗ್ಗೆ ಕೆಟ್ಟದಾಗಿ ಬರೆದು ಹೋಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.