PSI ನೇಮಕಾತಿ ಹಗರಣ: ಬಂಧಿತ ಉದ್ಯಮಿ ಕಾಶಿನಾಥ್ ಕಾಟೇಗಾಂವ್‌ಗೂ ಕಾಂಗ್ರೆಸ್ ನಂಟು

By Suvarna News  |  First Published May 1, 2022, 12:49 PM IST

* ಪಿ.ಎಸ್.ಐ ನೇಮಕಾತಿ ಅಕ್ರಮ ಪ್ರಕರಣ
* ಬಂಧಿತ ಉದ್ಯಮಿ ಕಾಶಿನಾಥ್ ಕಾಟೇಗಾಂವ್‌ಗೂ ಕಾಂಗ್ರೆಸ್ ನಂಟು
* ದಿವ್ಯಾ ಹಾಗರಗಿಗೆ ರಕ್ಷಣೆ ನೀಡಿದ ಆರೋಪದ ಮೇಲೆ ಬಂಧಿತನಾಗಿರುವ ಕಾಶಿನಾಥ್ ಕಾಟೇಗಾಂವ್ 
* ಸುರೇಶ ಕಾಟೇಗಾಂವ ಸಹೋದರಿ ಸುರೆಖಾ ಅಕ್ಕಲಕೋಟೆಯ ಕಾಂಗ್ರೆಸ್ ನಾಯಕಿ


ಕಲಬುರಗಿ, (ಮೇ.01): ಪಿಎಸ್‌ಐ ನೇಮಕಾತಿ ಅಕ್ರಮ (PSI Recruitment Scam) ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದು, ಆರೋಪಿಗಳಿಂದ ಒಂದೊಂದೇ ಬಣ್ಣ ಬಯಲಿಗೆ ಬರುತ್ತಿವೆ.  18 ದಿನಗಳ ಬಳಿಕ ಸಿಕ್ಕ ಕರ್ನಾಟಕ ಬಿಜೆಪಿ ನಾಯಕರಿ ದಿವ್ಯ ಹಾಗರಿಗಿ ತನಿಖೆ ವೇಳೆ ಕಾಂಗ್ರೆಸ್‌ ನಂಟು ಬಿಚ್ಚಿಟ್ಟಿದ್ದಾಳೆ.

 ಕಾಂಗ್ರೆಸ್ ಹಾಗೂ ಬಿಜೆಪಿ ಮುಖಂಡರು ಈ ಪ್ರಕರಣದಲ್ಲಿ ಪಕ್ಷ ಮರೆತು ಅಕ್ರಮ ಎಸಗಿರುವುದು ಬೆಳಕಿಗೆ ಬಂದಿದೆ. ತನಗೂ ಹಾಗೂ ಕಾಂಗ್ರೆಸ್​ ಪಕ್ಷಕ್ಕೂ ಇರುವ ನಂಟನ್ನು ಸಿಐಡಿ ತನಿಖಾ ತಂಡದ ಎದುರು ಪಿಎಸ್​ಐ ನೇಮಕಾತಿ ಹಗರಣದ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಬಹಿರಂಗ ಪಡಿಸಿದ್ದಾರೆ.  ದಿವ್ಯಾಗೆ ಆಶ್ರಯ ನೀಡಿದ್ದ ಮಹಾರಾಷ್ಟ್ರದ ಕಾಂಗ್ರೆಸ್ ನಾಯಕ ಸುರೇಶ ಕಾಟೇಗಾಂವರನ್ನು ಬಂಧಿಸಲಾಗಿದೆ.

Latest Videos

undefined

'PSI ಅಕ್ರಮ ಪ್ರಕರಣದಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್‌ ಎಲ್ಲರೂ ಪಾತ್ರಧಾರರೇ'

ಸುರೇಶ ಕಾಟೇಗಾಂವ ಸಹೋದರಿ ಸುರೆಖಾ ಕೂಡ ಕಾಂಗ್ರೆಸ್ ನಾಯಕಿ. ಸುರೇಖಾ ಅವರು ಮಹಾರಾಷ್ಟ್ರದ ಅಕ್ಕಲಕೋಟ ತಾಲೂಕು ಪಂಚಾಯತ ಮಾಜಿ ಅಧ್ಯಕ್ಷೆ ಹಾಗೂ ಹಾಲಿ ಸದಸ್ಯೆಯಾಗಿದ್ದಾರೆ. ಸುರೇಶಗೆ ಅಫಜಲಪುರದಲ್ಲಿ ಮರಳು ಬ್ಲಾಕ್ ಟೆಂಡರ್ ಪಡೆಯಲು ದಿವ್ಯಾ ಹಾಗರಗಿ ಸಹಾಯ ಮಾಡಿರುವ ಆರೋಪ ಕೇಳಿಬಂದಿದೆ. ಮರಳು ಮಾಫಿಯಾದಲ್ಲಿ ಸಹಕಾರ ಮಾಡಿದ‌ ಹಿನ್ನಲೆ ದಿವ್ಯಾ ಹಾಗರಗಿಗೆ ತೆಲೆ‌ಮರೆಸಿಕೊಳ್ಳಲು ಸುರೇಶ್​ ಕಾಟೆಂಗಾವ್​ ಸಹಾಯ ಮಾಡಿದ್ದಾರೆ.

ಪಿಎಸ್‌ಐ ಅಕ್ರಮ ಬಯಲಾಗುತ್ತಿದ್ದಂತೆಯೇ ದಿವ್ಯಾ, ಏಪ್ರಿಲ್ 13 ರಂದು ಕಲಬುರಗಿಯಿಂದ ಗುಜರಾತಿನ ಕಾಳಿಕಾ ಮಂದಿರಕ್ಕೆ ಖಾಸಗಿ ವಾಹನದಲ್ಲಿ ಪರಾರಿಯಾಗಿದ್ದರು. ಗುಜರಾತಿನಲ್ಲಿ 4 ದಿನ ತಲೆಮರೆಸಿಕೊಂಡಿದ್ದ ದಿವ್ಯಾ, ಅಲ್ಲಿಂದ ಗುಜರಾತನ ಅಂಬಾಜಿ ಮಂದಿರಕ್ಕೆ ತೆರಳಿ 3 ರಿಂದ 4 ದಿನ ವಾಸ್ತವ್ಯ ಹೂಡಿದ್ದರು. ಅಲ್ಲಿಂದ ಪುಣೆಗೆ ತೆರಳಿ ಕಾಳಿದಾಸ್​ಗೆ ಸೇರಿದ್ದ ಅಪಾರ್ಟ್ಮೆಂಟ್​ನಲ್ಲಿ 5 ದಿನ ವಾಸ್ತವ್ಯ ಹೂಡಿದ್ದರು.

ಕಾಳಿದಾಸ, ಸುರೇಶ್ ಅವರ ಕಂಪನಿಯ ಉದ್ಯೋಗಿ. ಕಾಳಿದಾಸ ಅಪಾರ್ಟ್​ಮೆಂಟ್​ಗೆ ತೆರಳಿಯೇ ಸಿಐಡಿ ಅಧಿಕಾರಿಗಳು ದಿವ್ಯಾರನ್ನು ಬಂಧಿಸಿ, ರಾಜ್ಯಕ್ಕೆ ಕರೆತಂದಿದ್ದಾರೆ. ಈ ಪಿಎಸ್‌ಐ ಅಕ್ರಮಗಳಿಗಾಗಿ ಬಿಜೆಪಿ ನಾಯಕಿ ಹಾಗೂ ಕಾಂಗ್ರೆಸ್ ಮುಖಂಡರು ಪಕ್ಷ ಮರೆತು ಒಂದಾಗಿದ್ದ ಇಬ್ಬರೂ ಈಗ ಸಿಐಡಿ ವಶದಲ್ಲಿದ್ದಾರೆ.

 ಬಿಜೆಪಿ, ಕಾಂಗ್ರೆಸ್, ಜೆಡಿಎಸ್‌ ಎಲ್ಲರೂ ಪಾತ್ರಧಾರರೇ' 
ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದು, ಈಗಾಗಲೇ ಕಾಂಗ್ರೆಸ್ ಹಾಗೂ ಬಿಜೆಪಿ ಮುಖಂಡರನ್ನ ಬಂಧಿಸಿ ವಿಚಾರಣೆ ನಡೆಸಿದೆ.

ಇನ್ನು ಇದಕ್ಕೆ ವಿಯಪುರದಲ್ಲಿ ಇಂದು(ಶನಿವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ನಮ್ಮ ಸರ್ಕಾರ ಇದೆ ಅಂತಾ ಸಮರ್ಥನೆ ಮಾಡಿಕೊಳ್ಳಲ್ಲ, ಕಳ್ಳರನ್ನು ನಂಬಿದ್ದಕ್ಕೆ ಇವತ್ತು ಇಂಥಾ ಪರಿಸ್ಥಿತಿ ಬಂದಿದೆ. ಡಿಸಿ-ಎಸ್ಪಿಗಳ ನೇಮಕಕ್ಕೆ ಮೊದಲು ಹಣ ತೆಗೆದುಕೊಳ್ತಿರಲಿಲ್ಲ,ಈಗ ಡಿಸಿ-ಎಸ್ಪಿ ಹುದ್ದೆಗಳನ್ನ ನಿಲಾವ್ (ಹರಾಜು) ಗೆ ಇಟ್ಟಿದ್ದಾರೆ ಎಂದರು.

ಎಲ್ಲರೂ ಕಳ್ಳರಿದ್ದಾರೆ. ಒರಿಜಿನಲ್​​ ಬಿಜೆಪಿಯವರಿಲ್ಲ, PSI ಅಕ್ರಮ ಪ್ರಕರಣವನ್ನು ಗಂಭೀರವಾಗಿ ತಗೆದುಕೊಳ್ಳಬೇಕು. ಇದರಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್‌ ಎಲ್ಲರೂ ಪಾತ್ರಧಾರರೇ, ಅರ್ಹರಿಗೆ 10 ಬಾರಿ ಪರೀಕ್ಷೆ ನಡೆಸಿದರೂ ಬೇಸರ ಆಗಲ್ಲ. ಬ್ಲೂ ಟೂತ್​​ ಬಳಸಿ ಪಾಸಾದವರಿಗೆ ಶಿಕ್ಷೆ ಆಗಲೇಬೇಕು ಎಂದು ಯತ್ನಾಳ್​ ಆಗ್ರಹಿಸಿದರು.

ಪ್ರಧಾನಿ ಕಾರ್ಯಾಲಯಕ್ಕೆ ದೂರು
 ರಾಜ್ಯದಲ್ಲಿ ಪಿಎಸ್‌ಐ ನೇಮಕಾತಿ ಹಗರಣ(PSI Recruitment Scam) ಸಾಕಷ್ಟು ಸದ್ದು ಮಾಡ್ತಿದೆ. 18 ದಿನಗಳ ಕಾಲ ತಲೆ ಮರೆಸಿಕೊಂಡಿದ್ದ ಪ್ರಕರಣದ ಕಿಂಗ್‌ಪಿನ್‌ ದಿವ್ಯಾ ಹಾಗರಗಿ(Divya Hagaragi) ಕೊನೆಗೂ ಸಿಐಡಿ(CID) ಬಲೆಗೆ ಬಿದ್ದಿದ್ದಾಳೆ. ಬೆನ್ನಲ್ಲೇ ಸರ್ಕಾರ ಪಿಎಸ್‌ಐ ನೇಮಕಾತಿಯನ್ನೇ ರದ್ದು ಮಾಡಿ ಮರು ಪರೀಕ್ಷೆಗೆ ಆದೇಶ ಹೊರಡಿಸಿದೆ. ಆದ್ರೀಗ ಬಿಜೆಪಿ ಸರ್ಕಾರದಲ್ಲೇ ನಡೆದ ಈ ಪಿಎಸ್‌ಐ ಹಗರಣದ ಬಗ್ಗೆ ವಿಜಯಪುರದ ಬಿಜೆಪಿ ಮುಖಂಡನೊಬ್ಬ ಪ್ರಧಾನಿ ಕಾರ್ಯಾಲಯಕ್ಕೆ ದೂರು ನೀಡಿದ್ದಾರೆ.

ರಾಜ್ಯ ಸರ್ಕಾರ(Government of Karnataka) ಪಿಎಸ್‌ಐ ನೇಮಕಾತಿಯನ್ನೇ ರದ್ದುಗೊಳಿಸಿ ಆದೇಶವನ್ನೇನೋ ನೀಡಿದೆ. ಮರು ಪರೀಕ್ಷೆಗೂ ದಿನಾಂಕ ನಿಗದಿ ಪಡೆಸುವ ಮಾತನ್ನಾಡಿದೆ. ಆದ್ರೆ ಇತ್ತ ಬಿಜೆಪಿಯ ಯುವ ಮುಖಂಡನೊಬ್ಬ ಪ್ರಧಾನಿ ಕಚೇರಿಗೆ(Office of the Prime Minister) ದೂರು ನೀಡಿದ್ದಾನೆ. ಪಿಎಸ್‌ಐ ಅಕ್ರಮ ನೇಮಕಾತಿ ವಿರುದ್ಧ ಸಿಡಿದೆದ್ದಿರುವ ಶಾಸಕ ಯತ್ನಾಳ್‌(Basanagouda Patil Yatnal) ಆಪ್ತ, ವಿವೇಕಾನಂದ ಸೇನೆ ರಾಜ್ಯಾಧ್ಯಕ್ಷ ರಾಘವ ಅನ್ನಿಗೇರಿ ಪಿಎಂ ಕಚೇರಿ ದೂರು ನೀಡಿದ್ದಾನೆ. ಇ-ಮೇಲ್‌(E-Mail) ಮೂಲಕ ದೂರು ಸಲ್ಲಿಕೆ ಮಾಡಿದ್ದು, ದೂರು ರಜಿಸ್ಟರ್‌ ಆಗಿರುವ ಬಗ್ಗೆ ಪ್ರಧಾನಿ ಕಚೇರಿಯಿಂದ ರಿಪ್ಲೈ ಕೂಡ ಬಂದಿದೆ.

click me!