
ಬೆಂಗಳೂರು(ಸೆ.12): ಕಲಬುರಗಿಯಲ್ಲಿ 1200 ಕೆ.ಜಿ. ಗಾಂಜಾ ವಶಪಡಿಸಿಕೊಂಡ ಪ್ರಕರಣದ ಪ್ರಮುಖ ಆರೋಪಿ ಬಿಜೆಪಿ ಕಾರ್ಯಕರ್ತ. ಜತೆಗೆ ಮೈಸೂರು ಸಂಸದ ಪ್ರತಾಪ್‌ಸಿಂಹ ಅವರಿಗೂ ಮಾದಕ ಜಾಲ ಚಿರಪರಿಚಿತವಿದ್ದಂತಿದೆ ಎಂದು ರಾಜ್ಯ ಕಾಂಗ್ರೆಸ್ ಆರೋಪಿಸಿದೆ.
ರಾಜ್ಯ ಕಾಂಗ್ರೆಸ್‌ನ ಟ್ವೀಟರ್ ಖಾತೆ ಮೂಲಕ ಶುಕ್ರವಾರ ಸರಣಿ ಟ್ವೀಟ್‌ಗಳನ್ನು ಮಾಡಲಾಗಿದ್ದು, ಬಿಜೆಪಿಯು ಡ್ರಗ್ಸ್, ಗಾಂಜಾ ಮುಂತಾದ ಅಕ್ರಮ ಚಟುವಟಿಕೆಗಳ ತಾಣ ಎಂದು ದೂರಲಾಗಿದೆ. ಜತೆಗೆ, ಕಲಬುರಗಿ ಆರೋಪಿಯ ಬಿಜೆಪಿ ಶಾಲು ಹಾಗೂ ಟೋಪಿ ಧರಿಸಿರುವ ಫೋಟೋ ಪೋಸ್ಟ್ ಮಾಡಲಾಗಿದೆ.
ಕಲಬುರಗಿ: ಕುರಿ ದೊಡ್ಡಿಯಲ್ಲಿ ಕೋಟ್ಯಂತರ ರು. ಗಾಂಜಾ ಇಟ್ಟವನ ಹಿಸ್ಟರಿಯೇ ಬಲು ರೋಚಕ..!
ಪ್ರತಾಪ್ ಸಿಂಹರನ್ನು ವಿಚಾರಣೆ ನಡೆಸಿ:
ಶಾಲಾ-ಕಾಲೇಜುಗಳಲ್ಲಿ ಡ್ರಗ್ಸ್ ಮಾರಾಟವಾಗುತ್ತಿದೆ. ಆದರೆ ಯಾವ ಕಾಲೇಜು ಎಂದು ಹೆಸರು ಹೇಳುವುದಿಲ್ಲ ಎಂದು ಬಿಜೆಪಿ ಸಂಸದ ಪ್ರತಾಪ್‌ಸಿಂಹ ಹೇಳಿದ್ದಾರೆ. ಈ ಹೇಳಿಕೆ ಗಮನಿಸಿದರೆ ಮಾದಕ ಜಾಲ ಪ್ರತಾಪ್‌ಸಿಂಹ ಅವರಿಗೆ ಚಿರಪರಿಚಿತವಿದ್ದಂತೆ ಕಾಣುತ್ತಿದೆ. ಅಕ್ರಮ ವಿಚಾರವನ್ನು ತಿಳಿದೂ ಮುಚ್ಚಿಡುವುದು ಅಪರಾಧ. ಹೀಗಾಗಿ ಪೊಲೀಸರು ಕೂಡಲೇ ಇವರನ್ನು ವಿಚಾರಣೆಗೆ ಒಳಪಡಿಸಬೇಕು. ಎಲ್ಲೆಲ್ಲಿ ಡ್ರಗ್ಸ್ ದಂಧೆ ನಡೆಯುತ್ತಿದೆ ಹಾಗೂ ಅದರ ಹಿಂದೆ ಯಾರಿದ್ದಾರೆ ಎಂಬುದನ್ನು ಬಯಲಿಗೆಳೆಯಬೇಕು ಎಂದು ಒತ್ತಾಯಿಸಲಾಗಿದೆ.
ಇದೇ ವೇಳೆ ಬಿಜೆಪಿಯು ‘ಕೋತಿ ಮೊಸರು ತಿಂದು ಮೇಕೆಯ ಮೂತಿಗೆ ಮೆತ್ತಿದಂತೆ’ ಅನ್ಯರತ್ತ ಹುಸಿ ಆರೋಪ ಮಾಡಿ ತಮ್ಮ ಮಾನ ಮುಚ್ಚಿಕೊಳ್ಳಲು ಯತ್ನಿಸುತ್ತಿದೆ ಎಂದು ದೂರಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.