
ನವದೆಹಲಿ (ಮಾ.15): ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟ ಭರ್ಜರಿ ಜಯ ಸಾಧಿಸಲಿದೆ. 543 ಕ್ಷೇತ್ರಗಳಲ್ಲಿ 411ರಲ್ಲಿ ಜಯ ಸಾಧಿಸಲಿದೆ ಎಂದು ಸಿಎನ್‌ಎನ್ ನ್ಯೂಸ್ 18 ನಡೆಸಿದ ಚುನಾವಣೆ ಪೂರ್ವ ಸಮೀಕ್ಷೆ ಹೇಳಿದೆ. ಇನ್ನು ಇಂಡಿಯಾ ಕೂಟ ಕೇವಲ 105 ಸ್ಥಾನ ಪಡೆಯಲಿದೆ ಹಾಗೂ ಇತರರು ಕೇವಲ 27 ಸ್ಥಾನ ಡೆಯಲಿದ್ದಾರೆ ಎಂದು ಸಮೀಕ್ಷೆ ಹೇಳಿದೆ.
ಸಂಸತ್ತಿನಿಂದ ಪಂಚಾಯಿತಿವರೆಗೆ ಏಕ ಚುನಾವಣೆ, ಕೋವಿಂದ್ ಸಮಿತಿ ಶಿಫಾರಸು
ಕರ್ನಾಟಕದಲ್ಲಿ ಎನ್‌ಡಿಎಗೆ 25 ಕೈಗೆ 3: ನ್ಯೂಸ್-18 ಸಮೀಕ್ಷೆ: ಕರ್ನಾಟಕದ ಒಟ್ಟು 28 ಕ್ಷೇತ್ರದಲ್ಲಿ 25ರಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಯ ಕೂಟವಾದ ಎನ್‌ಡಿಎ ಒಕ್ಕೂಟ ಜಯಸಾಧಿಸಲಿದೆ. ಉಳಿದ 3 ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಿಲಿದೆ ಎಂದು ಸಿಎನ್‌ಎನ್ ನ್ಯೂಸ್ 18 ಸಮೀಕ್ಷೆ ಭವಿಷ್ಯ ನುಡಿದಿದೆ.
ರಾಜ್ಯದ 28 ಕ್ಷೇತ್ರಗಳ ಪೈಕಿ ಹಾಲಿ ಬಿಜೆಪಿ 25, ಕಾಂಗ್ರೆಸ್ 1, ಜೆಡಿಎಸ್ 1 ಹಾಗೂ ಪಕ್ಷೇತರರು 1 ಸ್ಥಾನ ಹೊಂದಿದ್ದಾರೆ. ಈ ಚುನಾವಣೆಯಲ್ಲೂ ಬಿಜೆಪಿ, ಬಹುತೇಕ ಕಳೆದ ಸಲದ ಪ್ರದರ್ಶನವನ್ನೇ ತೋರಲಿದೆ ಎಂದು ಸಮೀಕ್ಷೆ ನುಡಿದಿದೆ.
ಎಸ್‌ಬಿಐ ಚುನಾವಣಾ ಬಾಂಡ್ ದೇಣಿಗೆ ರಹಸ್ಯ ಆಯೋಗದಿಂದ ಬಹಿರಂಗ, ಬಿಜೆಪಿ ಟಾಪ್, ಜೆಡಿಎಸ್‌ಗೆ 43 ಕೋಟಿ!
ಎಬಿಪಿ ನ್ಯೂಸ್ ಚುನಾವಣಾ ಪೂರ್ವ ಸಮೀಕ್ಷೆ:
ಲೋಕಸಭೆ ಚುನಾವಣೆಗೆ ಕ್ಷಣಗಣನೆ ಆರಂಭ ಆಗುತ್ತಿದ್ದಂತೆಯೇ, ಕರ್ನಾಟಕದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟ 23 ಹಾಗೂ ಕಾಂಗ್ರೆಸ್ 5 ಸ್ಥಾನ ಗೆಲ್ಲಲಿದೆ ಎಂದು ಎಬಿಪಿ ನ್ಯೂಸ್ ಕೂಡ ಚುನಾವಣಾ ಪೂರ್ವ ಸಮೀಕ್ಷೆ ಹೇಳಿದೆ. ಹಾಲಿ ರಾಜ್ಯದ 28 ಸ್ಥಾನಗಳಲ್ಲಿ ಬಿಜೆಪಿ 25, ಕಾಂಗ್ರೆಸ್ 1, ಜೆಡಿಎಸ್ 1 ಹಾಗೂ ಪಕ್ಷೇತರರು 1 ಸ್ಥಾನ ಹೊಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.