ಅಧಿಕಾರಿಗಳು ಲಂಚ ಕೇಳಿದ್ದರೆ ದೂರು ನೀಡಲಿ: ಸಿಎಂ ಸಿದ್ದರಾಮಯ್ಯ

By Kannadaprabha NewsFirst Published Feb 10, 2024, 10:10 AM IST
Highlights

ಅಧಿಕಾರಿಗಳು ಲಂಚ ಕೇಳಿದ್ದರೆ ನಾಗಮೋಹನ್ ದಾಸ್ ಸಮಿತಿಗೆ ದೂರ ನೀಡಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಹೊಸದುರ್ಗ ತಾಲೂಕಿನ ಬ್ರಹ್ಮ ವಿದ್ಯಾನಗರದಲ್ಲಿ ನಡೆದ ಭಗೀರಥ ಜಯಂತಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅವರು ಹೆಲಿಪ್ಯಾಡ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. 
 

ಹೊಸದುರ್ಗ (ಫೆ.10): ಅಧಿಕಾರಿಗಳು ಲಂಚ ಕೇಳಿದ್ದರೆ ನಾಗಮೋಹನ್ ದಾಸ್ ಸಮಿತಿಗೆ ದೂರ ನೀಡಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಹೊಸದುರ್ಗ ತಾಲೂಕಿನ ಬ್ರಹ್ಮ ವಿದ್ಯಾನಗರದಲ್ಲಿ ನಡೆದ ಭಗೀರಥ ಜಯಂತಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅವರು ಹೆಲಿಪ್ಯಾಡ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಯಾವ ಅಧಿಕಾರಿಗಳು ಲಂಚ ಕೇಳಿದ್ದಾರೆ ಎಂಬುದನ್ನು ಗುತ್ತಿಗೆದಾರ ಕೆಂಪಣ್ಣ ಮಾಧ್ಯಮದ ಮುಂದೆ ಹೇಳಿಕೆ ನೀಡುವುದನ್ನು ಬಿಟ್ಟು ಸಮಿತಿಗೆ ದೂರು ನೀಡಲಿ ಪರಿಶೀಲಿಸುತ್ತೇನೆ ಎಂದರು.

ದೇಶ ವಿಭಜಿಸುವವರಿಗೆ ಗುಂಡಿಕ್ಕಿ ಕೊಲ್ಲುವ ಕಾನೂನು ರೂಪಿಸಬೇಕು ಎಂದು ಕೆ ಎಸ್ ಈಶ್ವರಪ್ಪ ಹೇಳಿಕೆಗೆ ಟಾಂಗ್ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಈಶ್ವರಪ್ಪ ಆರ್‌ಎಸ್‌ಎಸ್‌ನಲ್ಲಿ ಟ್ರೈನಿಂಗ್ ಪಡೆದಿದ್ದೇನೆ ಅಂತಾರೆ. ಹೊಡಿ, ಬಡಿ, ಕೊಲ್ಲು ಇದೇ ಮಾತಾಡುತ್ತಾರೆ ಸಂಸದ ಡಿಕೆ ಸುರೇಶ್ ರನ್ನು ಗುಂಡಿಕ್ಕಿ ಕೊಲ್ಲಿ ಅಂತಿದ್ದಾರೆ ಈಶ್ವರಪ್ಪ ಹೇಳಿಕೆ ಬಗ್ಗೆ ಪರಿಶೀಲಿಸಿ ಕಾನೂನು ಕ್ರಮ ಜರಗಿಸಲಾಗುವುದು ಎಂದರು. ಭದ್ರಾ ಮೇಲ್ದಂಡೆ ಯೋಜನೆಗೆ ₹5,300 ಕೋಟಿ ಬಜೆಟ್ ಘೋಷಿಸಿದ್ದಾರೆ. ಈವರೆಗ ಭದ್ರಾ ಯೋಜನೆಗೆ ನಯಾಪೈಸೆ ಕೊಟ್ಟಿಲ್ಲ. ನಮ್ಮ ಪಾಲು ಕೇಳುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.

Latest Videos

ಭದ್ರಾ ಮೇಲ್ದಂಡೆಗೆ ಕೇಂದ್ರ ದುಡ್ಡು ಕೊಟ್ಟಿಲ್ಲ: ಭದ್ರಾ ಮೇಲ್ದಂಡೆ ಯೋಜನೆಗೆ 2023-24 ನೇ ಸಾಲಿನ ಬಜೆಟ್ ನಲ್ಲಿ ಕೇಂದ್ರ ಸರ್ಕಾರ 5300 ಕೋಟಿ ರು.ಗಳ ಅನುದಾನ ನೀಡುವುದಾಗಿ ಘೋಷಣೆ ಮಾಡಿದ್ದು ಈವರೆಗೆ ಒಂದು ರೂಪಾಯಿಯನ್ನೂ ನೀಡಿಲ್ಲವೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.  ಹೊಸದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭದ್ರಾ ಮೇಲ್ಜಂಡೆಗೆ ಇದುವರೆಗೂ ರಾಜ್ಯ ಸರ್ಕಾರ 8 ಸಾವಿರ ಕೋಟಿ ರು. ಖರ್ಚು ಮಾಡಿದ್ದೇವೆ. ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ , ಜಲಸಂಪನ್ಮೂಲ ಸಚಿವಶೆಕಾವತ್ ಅವರನ್ನು ಭೇಟಿಯಾಗಿ ಹಣ ಬಿಡುಗಡೆಗೆ ಮನವಿ ಮಾಡಿದ್ದಾರೆ. ನಾನೂ ಕೂಡ ಮನವಿ ಮಾಡಿದ್ದೇನೆ. ಇದುವರೆಗೂ ಒಂದು ಪೈಸೆ ಬಿಡುಗಡೆಯಾಗಿಲ್ಲವೆಂದರು.

ಆಡಳಿತ ಯಂತ್ರ ಕುಸಿದಿರುವುದಕ್ಕೆ ಸಿದ್ದು ಜನಸ್ಪಂದನ ಕಾರ್ಯಕ್ರಮ ಸಾಕ್ಷಿ: ಆರ್‌.ಅಶೋಕ್ ಕಿಡಿ

ಕರ್ನಾಟಕದಿಂದ ರಾಜ್ಯ ಸಭಾ ಸದಸ್ಯರಾಗಿರುವ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ನಲ್ಲಿ ಹೇಳಿದಂತೆ ₹5300 ಕೋಟಿ ಒದಗಿಸುವುದು ಅವರ ಜವಾಬ್ಧಾರಿ. 15ನೇ ಹಣಕಾಸು ಆಯೋಗದವರು ಒದಗಿಸಿದ್ದ 5495 ಕೋಟಿ ರು.ಗಳ ವಿಶೇಷ ಅನುದಾನ ಹಾಗೂ 6 ಸಾವಿರ ಕೋಟಿ ಸೇರಿ 11495 ಕೋಟಿ ರು.ಗಳನ್ನು ತಿರಸ್ಕರಿಸಿದರು. ಇದು ಅನ್ಯಾಯವಲ್ಲವೇ?. ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 2023-24 ನೇ ಸಾಲಿನ ಬಜೆಟ್ ನಲ್ಲಿ ಕೇಂದ್ರದಿಂದ 5300 ಕೋಟಿ ರು.ಗಳು ಬರಲಿದೆ ಎಂದು ಪುನರುಚ್ಚರಿಸಿದ್ದಾರೆ. ಭದ್ರಾ ಮೇಲ್ದಂಡೆ ರಾಷ್ಟ್ರೀಯ ಯೋಜನೆ ಎಂದು ಘೋಷಣೆ ಮಾಡುತ್ತೇವೆ ಎಂದಿದ್ದರೂ ಇನ್ನೂ ಘೋಷಣೆ ಮಾಡಿಲ್ಲವೆಂದು ಪ್ರಶ್ನೆಯೊಂದಕ್ಕೆ ಸಿದ್ದರಾಮಯ್ಯ ಉತ್ತರಿಸಿದರು.

click me!