ವಿಜಯಪುರ ನಗರ ಬಿಜೆಪಿ ಟಿಕೆಟ್‌ಗಾಗಿ ಶುರುವಾಗಿದೆ ಜಟಾಪಟಿ..!

Published : Apr 04, 2023, 11:30 PM IST
ವಿಜಯಪುರ ನಗರ ಬಿಜೆಪಿ ಟಿಕೆಟ್‌ಗಾಗಿ ಶುರುವಾಗಿದೆ ಜಟಾಪಟಿ..!

ಸಾರಾಂಶ

ಮಹಾನಗರ ಪಾಲಿಕೆ ಚುನಾವಣೆ ವೇಳೆ ಬಿಜೆಪಿಯ ಮೂಲ ಮುಖಂಡರನ್ನು ಕೈ ಬಿಟ್ಟು ನಗರ ಶಾಸಕ ಯತ್ನಾಳ ತಮ್ಮ ಬೆಂಬಲಿಗರಿಗೆ ಟಿಕೆಟ್ ನೀಡಿದ್ದರು.‌ ಇದು ಬಿಜೆಪಿಯಲ್ಲಿ ಅಂದೇ ಬಂಡಾಯ ಎದ್ದು 8 ಜನ ಮುಖಂಡರು ಪಕ್ಷೇತರವಾಗಿ ಸ್ಪರ್ಧಿಸಿದ್ದರು. ನಂತರ ಯತ್ನಾಳ ಒತ್ತಡಕ್ಕೆ ಮಣಿದು 8 ಮುಖಂಡರನ್ನು ಉಚ್ಚಾಟಿಸಲಾಗಿತ್ತು.‌ ಈಗ ಮತ್ತೆ ಬಿಜೆಪಿಯಲ್ಲಿ ಭಿನ್ನಮತ ಬುಗಿಲೆದ್ದಿದೆ. ಶಾಸಕ ಯತ್ನಾಳ ಕಾರ್ಯಕರ್ತ ಜತೆ ಬೆರೆಯುವದಿಲ್ಲ, ಅವರಿಗೆ ಈ ಬಾರಿ ಟಿಕೆಟ್ ನೀಡಿದರೆ ಮೂಲ ಬಿಜೆಪಿ ಕಾರ್ಯಕರ್ತರು ತಟಸ್ಥವಾಗಿ ನಿಲ್ಲುವ ನಿಲುವು ತಾಳಿದ್ದಾರೆ.

ಷಡಕ್ಷರಿ‌ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್, ವಿಜಯಪುರ

ವಿಜಯಪುರ(ಏ.04): ಬರುವ ವಿಧಾನಸಭೆ ಚುನಾವಣೆಯಲ್ಲಿ ವಿಜಯಪುರ ನಗರ‌ ಕ್ಷೇತ್ರದ ಟಿಕೆಟ್ ಗೆ ಹಾಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಬದಲು ಕಳೆದ ಚುನಾವಣೆಯಲ್ಲಿ ಟಿಕೆಟ್ ಕೈ ತಪ್ಪಿದ್ದ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿಯವರಿಗೆ ಬಿಜೆಪಿ ಟಿಕೆಟ್ ನೀಡಬೇಕೆಂದು ವಿವಿಧ ಸಮುದಾಯದ ಮುಖಂಡರು ಹಾಗೂ ಪಕ್ಷದಿಂದ ಉಚ್ಚಾಟನೆಗೆ ಒಳಗಾಗಿದ್ದ ಮುಖಂಡರು ಒಕ್ಕೂರಲಾಗಿ ಒತ್ತಾಯಿಸಿದ್ದಾರೆ.‌

ಪಾಲಿಕೆ ಚುನಾವಣೆಯಲ್ಲೆ ಎದ್ದಿತ್ತು ಬಂಡಾಯ..!

ಮಹಾನಗರ ಪಾಲಿಕೆ ಚುನಾವಣೆ ವೇಳೆ ಬಿಜೆಪಿಯ ಮೂಲ ಮುಖಂಡರನ್ನು ಕೈ ಬಿಟ್ಟು ನಗರ ಶಾಸಕ ಯತ್ನಾಳ ತಮ್ಮ ಬೆಂಬಲಿಗರಿಗೆ ಟಿಕೆಟ್ ನೀಡಿದ್ದರು.‌ ಇದು ಬಿಜೆಪಿಯಲ್ಲಿ ಅಂದೇ ಬಂಡಾಯ ಎದ್ದು 8 ಜನ ಮುಖಂಡರು ಪಕ್ಷೇತರವಾಗಿ ಸ್ಪರ್ಧಿಸಿದ್ದರು. ನಂತರ ಯತ್ನಾಳ ಒತ್ತಡಕ್ಕೆ ಮಣಿದು 8 ಮುಖಂಡರನ್ನು ಉಚ್ಚಾಟಿಸಲಾಗಿತ್ತು.‌ ಈಗ ಮತ್ತೆ ಬಿಜೆಪಿಯಲ್ಲಿ ಭಿನ್ನಮತ ಬುಗಿಲೆದ್ದಿದೆ. ಶಾಸಕ ಯತ್ನಾಳ ಕಾರ್ಯಕರ್ತ ಜತೆ ಬೆರೆಯುವದಿಲ್ಲ, ಅವರಿಗೆ ಈ ಬಾರಿ ಟಿಕೆಟ್ ನೀಡಿದರೆ ಮೂಲ ಬಿಜೆಪಿ ಕಾರ್ಯಕರ್ತರು ತಟಸ್ಥವಾಗಿ ನಿಲ್ಲುವ ನಿಲುವು ತಾಳಿದ್ದಾರೆ.

'ಬಿಜೆಪಿಗೆ ಕಾಂಗ್ರೆಸ್‌ ಒಂದೇ ಪರ್ಯಾಯವಲ್ಲ'

ಪಕ್ಷ ನಿಷ್ಠೆತೋರಿದ ಪಟ್ಟಣಶೆಟ್ಟಿಗೆ ಟಿಕೇಟ್ ನೀಡಿ..!

ಅಪ್ಪಾಸಾಹೇಬ ಪಟ್ಟಣಶೆಟ್ಟಿ ಅವರಿಗೆ ಕಳೆದ ಬಾರಿ ಟಿಕೆಟ್ ನೀಡದಿದ್ದರೂ ಪಕ್ಷ ಬಿಡದೇ ಪಕ್ಷ ನಿಷ್ಠೆ ತೋರಿದ್ದಾರೆ.‌ ಆದರೆ ಶಾಸಕ ಯತ್ನಾಳ ಟಿಕೆಟ್ ನೀಡದಿದ್ದರೆ ಪಕ್ಷ ಬಿಟ್ಟು ಹೋಗಿದ್ದಾರೆ. 

ಯತ್ನಾಳ ವಿರುದ್ಧ ಉಚ್ಚಾಟಿತರ ಆಕ್ರೋಶ..!

ತಾವು ಭ್ರಷ್ಟಾಚಾರ ಮಾಡಿಲ್ಲ ವಿಜಯಪುರ‌ ನಗರ ಅಭಿವೃದ್ಧಿ ಮಾಡಿದ್ದೇನೆ ಎಂದು ಶಾಸಕ ಯತ್ನಾಳ ಪದೇ ಪದೇ ಹೇಳುತ್ತಾರೆ. ಆದರೆ ಅವರ ಪಿಎಗಳು ಮನೆಕಟ್ಟಿಕೊಂಡಿದ್ದಾರೆ ‌ಅದು ಎಲ್ಲಿಂದ ಬಂತು, ಗುತ್ತಿಗೆದಾರರು ಹಣ ನೀಡದಿದ್ದರೆ ಅವರ‌ ಕೆಲಸವಾಗುವದಿಲ್ಲ ಎಂದು ಬಿಜೆಪಿ ಉಚ್ಚಾಟಿತ ನಾಯಕ ರವೀಂದ್ರ ಲೋಣಿ ಗಂಭೀರ ಆರೋಪ ಮಾಡಿದ್ದಾರೆ. 

ಸುದ್ದಿಗಾರರ ಜತೆ ಮಾತನಾಡಿದ ಅವರು, ವಿಜಯಪುರ ನಗರದ ಟಿಕೆಟ್ ನ್ನು ಶಾಸಕ ಯತ್ನಾಳ ಅವರಿಗೆ ನೀಡದೇ ಅಪ್ಪಾಸಾಹೇಬ ಪಟ್ಟಣಶೆಟ್ಟಿಯವರಿಗೆ ಟಿಕೆಟ್ ನೀಡಬೇಕು. ಇಲ್ಲವಾದರೆ ಉಚ್ಚಾಟಿತರು ಹಾಗೂ ನೂರಾರು‌ ಕಾರ್ಯಕರ್ತರು ವಿಧಾನಸಭೆ ಚುನಾವಣೆಯಲ್ಲಿ ತಟಸ್ಥರಾಗಿ ನಿಂತು ಬಿಜೆಪಿಗೆ ಮತ ಹಾಕಬಾರದು ಎಂದು ನಿರ್ಣಯ ಕೈಗೊಳ್ಳ ಬೇಕಾಗುತ್ತದೆ ಎಂದು ಎಚ್ಚರಿಸಿದರು.

ಬಿಜೆಪಿಯ ಡಬಲ್‌ ಎಂಜಿನ್‌ ಸರ್ಕಾರದ ಅಭಿವೃದ್ಧಿ ಶೂನ್ಯ: ಎಂ.ಬಿ.ಪಾಟೀಲ

ಮಾದಿಗ ಸಮುದಾಯದಿಂದಲು ಒತ್ತಾಯ..!

ಮಾದಿಗ ಸಮುದಾಯದ ಮುಖಂಡ ಹಣಮಂತ ಬಿರಾದಾರ ಮಾತನಾಡಿ, ಪಕ್ಷ ಕಾರ್ಯಕರ್ತರ ಜತೆ ಸೇರಿ ಅಪ್ಪು ಪಟ್ಟಣಶೆಟ್ಟಿ ದುಡಿದಿದ್ದಾರೆ. ಕಾರ್ಯಕರ್ತರ ಶಕ್ತಿ ಪಟ್ಟಣಶೆಟ್ಟಿ ಶಕ್ತಿಯಾಗಿದೆ.ಅವರಿಗೆ ಟಿಕೆಟ್ ನೀಡಿದರೆ ಹೆಚ್ಚು ಅಂತರದಿಂದ ಗೆಲ್ಲಿಸಿಕೊಡುವದು ನಮ್ಮ ಜವಾಬ್ದಾರಿ ಯಾಗಿ. ಆಕಸ್ಮಿಕವಾಗಿ ಶಾಸಕ ಯತ್ನಾಳರಿಗೆ ಟಿಕೆಟ್ ನೀಡಿದರೆ ನಾವು ವರಿಷ್ಠದ ಜತೆ ಮಾತುಕತೆ ನಡೆಸುತ್ತೇವೆ ಎಂದರು.

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅಕ್ಕಿ ಅಕ್ರಮದಲ್ಲಿ ಬಿಜೆಪಿಯವರೇ ಶಾಮೀಲು: ಸಚಿವ ಪ್ರಿಯಾಂಕ್ ಖರ್ಗೆ
ಬಂಡವಾಳ ಆಕರ್ಷಣೆಗೆ ರಾಜ್ಯಗಳ ನಡುವೆ ಸ್ಪರ್ಧೆ ಹೆಚ್ಚಾಗಿದೆ: ಸಚಿವ ಎಂ.ಬಿ.ಪಾಟೀಲ್‌