ತಮ್ಮ ಸರ್ವೆ ತಾವೇ ಮಾಡಿಸುವುದು, ಅದ್ಧೂರಿ ಹುಟ್ಟುಹಬ್ಬದ ಮೂಲಕ ಶಕ್ತಿ ಪ್ರದರ್ಶನ
ಅಥಣಿ(ಅ.02): ಚುನಾವಣೆ ವರ್ಷ ಇದಾಗಿರುವುದರಿಂದ ಸಹಜವಾಗಿ ಎಲ್ಲ ಪಕ್ಷಗಳಲ್ಲಿ ಪೈಪೋಟಿ ಈಗಿನಿಂದಲೇ ಆರಂಭಗೊಂಡಿದೆ. ಕೆಲವರು ತೆರೆಮರೆಯಲ್ಲಿ ಹೋರಾಟಕ್ಕೆ ಅಖಾಡ ಸನ್ನದ್ಧವಾಗುತ್ತಿದ್ದರೆ, ಮತ್ತೆ ಕೆಲವರು ತಮ್ಮ ಹುಟ್ಟುಹಬ್ಬವನ್ನೇ ನೆಪವಾಗಿಟ್ಟುಕೊಂಡು ಶಕ್ತಿ ಪ್ರದರ್ಶನಕ್ಕೂ ಮುಂದಾಗುತ್ತಿದ್ದಾರೆ.
ಅಥಣಿ ಮತಕ್ಷೇತ್ರದಲ್ಲಿಯೂ ಈಗ
ಮತಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಪಟ್ಟಿದಿನದಿಂದ ದಿನಕ್ಕೆ ಬೆಳೆಯುತ್ತಲಿದೆ. ಸುಮಾರು 15ಕ್ಕೂ ಹೆಚ್ಚು ಜನ ಟಕೆಟ್ ಬೇಡುವ ಸಾಲಿನಲ್ಲಿ ತೀವ್ರ ಪೈಪೋಟಿಗಿಳಿದಿದ್ದಾರೆ. ಇವರೆಲ್ಲ ತಮಗೆ ಇಷ್ಟವಾದ ನಾಯಕರ ಬೆಂಬಲ ಪಡೆಯಲು ಹಗಲಿರಳು ಶ್ರಮಿಸುತಿದ್ದಾರೆ. ಎಸ್.ಕೆ. ಬುಟಾಳೆ, ಗಜಾನನ ಮಂಗಸೂಳಿ, ಧರೆಪ್ಪ ಠಕ್ಕನ್ನವರ, ಬಸವರಾಜ ಬುಟಾಳೆ ಅಸಲಂ ನಾಲಬಂದ, ಸುರೇಶಗೌಡ ಪಾಟೀಲ(ಶೇಗುಣಸಿ), ಅಥಣಿ ವಕೀಲರ ಸಂಘದ ಅಧ್ಯಕ್ಷ ಶ್ರೀಕಾಂತ ಪೂಜಾರಿ, ಸತ್ಯಪ್ಪ ಬಾಗೆನ್ನವರ ಟಕೆಟ್ ಬೇಡುವ ಪ್ರಮುಖರು ನಾಯಕರಾಗಿದ್ದಾರೆ.
ರಮೇಶ ಜಾರಕಿಹೊಳಿ ಮತ್ತೆ ಮಂತ್ರಿಯಾಗ್ತಾರೆ: ನಳಿನ್ ಕುಮಾರ ಕಟೀಲ್
ಸರ್ವೇ ಮತ್ತು ಹುಟ್ಟುಹಬ್ಬಗಳ ಪ್ರದರ್ಶನ:
ಕೆಲವರು ಗಪ್ಪಚುಪ್ಪ ಸರ್ವೆಗಳನ್ನು ಮಾಡಿಸಿ ತಮ್ಮ ಹೆಸರುಗಳು ಮುಂಚೂಣಿಯಲ್ಲಿ ಇವೆ ಎಂದು ಬಿಂಬಿಸುತಿದ್ದಾರೆ. ಇವು ಖದ್ ಅವರೇ ಸರ್ವೇ ಮಾಡಿಸಿ ಹೈಕಮಾಂಡ್ ಸರ್ವೇ ಮಾಡಿದ ರೀತಿ ಬಿಂಬಿಸುತಿದ್ದಾರೆ. ಸರ್ವೇ ವರದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಡುತ್ತಿದ್ದಾರೆ.
ಕೆಲವು ಮುಖಂಡರು ತಮ್ಮ ತಮ್ಮ ಹುಟ್ಟುಹಬ್ಬಗಳನ್ನು ಭರ್ಜರಿಯಾಗಿ ಆಚರಿಕೊಳ್ಳುತಿದ್ದಾರೆ. ಒಬ್ಬರಿಗಿಂತ ಒಬ್ಬರು ನಾ ಮುಂದು ತಾ ಮುಂದು ಎಂಬಂತೆ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುತಿದ್ದಾರೆ. ಇದರ ಮೂಲಕ ತಮ್ಮಗೆ ತಮ್ಮ ಸಮಾಜದ ಇತರೆ ಸಮಾಜದ ಬೆಂಬಲ ಇದೆ ಎಂಬುದನ್ನು ಬಿಂಬಿಸಿಕೊಳ್ಳುತಿದ್ದಾರೆ.
ರಾಜ್ಯ ನಾಯಕರ ಸಂಗಡ ಒಡನಾಟ:
ಒಬ್ಬರಿಗಿಂತ ಒಬ್ಬರು ರಾಜ್ಯ ನಾಯಕರಗಳಾದ ಡಿ.ಕೆ. ಶಿವಕುಮಾರ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸತೀಶ ಜಾರಕಿಹೊಳಿ, ಎಮ್.ಬಿ. ಪಾಟೀಲ, ಲಕ್ಷ್ಮೀ ಹೆಬ್ಬಾಳಕರ ಸಂಗಡ ಒಳ್ಳೆಯ ಒಡನಾಟ ಇದೆ ಎಂಬ ರೀತಿಯಲ್ಲಿ ಬಿಂಬಿಸಿಕೋಳ್ಳುತಿದ್ದಾರೆ. ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ತಮ್ಮ ಬೆಂಬಲಿಗರೊಂದಿಗೆ ಎಲ್ಲರೂ ಟಿಕೆಟ್‌ಗಾಗಿ ಪೈಪೋಟಿ ನಡೆಸುತಿದ್ದಾರೆ.
ಎಂಟು ವರ್ಷ ಅಧ್ಯಯನ ಮಾಡಿ ಪಿಎಫ್‌ಐ ಬ್ಯಾನ್: ನಳಿನ್ ಕುಮಾರ್ ಕಟೀಲ್
ನಮ್ಮ ಸರ್ವೆ ಅಲ್ಲ:
ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಲಕ್ಷ್ಮಣ ಚಿಂಗಳೆ ಅವರು ಕನ್ನಡಪ್ರಭದೊಂದಿಗೆ ಮಾತನಾಡಿ ನಮ್ಮ ಕೆಪಿಸಿಸಿ ಆಗಲಿ ಜಿಲ್ಲಾ ಘಟಕವಾಗಲಿ ಯಾರೂ ಸರ್ವೇ ಮಾಡಿಸಿಲ್ಲ. ಸದ್ಯ ಅಂಥ ವಿಚಾರ ಸಹ ಹೈಕಮಾಂಡ್ ಮುಂದೆ ಇಲ್ಲ. ಟಿಕೆಟ್ ಯಾರಿಗೆ ಎಂದು ಫೈನಲ್ ಮಾಡುವ ಅಧಿಕಾರ ಹೈಕಮಾಂಡಕ್ಕೆ ಇದೆ ಎಂದು ಹೇಳಿದರು.
ಹೈಕಮಾಂಡ್ ಬಲ್ಲ ಮೂಲಗಳ ಪ್ರಕಾರ ಗಜಾನನ ಮಂಗಸೂಳಿ ಮತ್ತು ಎಸ್.ಕೆ. ಬುಟಾಳೆ, ಧರೆಪ್ಪ ಟಕ್ಕನ್ನವರ ನಡುವೆ ತ್ರಿಕೋನ ಸ್ಪರ್ಧೆ ನಡೆದಿದೆ. ಟಕೆಟ್ ಆಶಾವಾದಿಗಳಲ್ಲಿ ಒಬ್ಬರಾದ ಸುರೇಶಗೌಡ ಪಾಟೀಲ(ಶೇಗುಣಸಿ) ಅವರು ಮಾತನಾಡಿ, ನಾನೂ ಟಿಕೆಟ್ ಆಕಾಂಕ್ಷಿ ಎಂಬುದರಲ್ಲಿ ಎರಡು ಮಾತಿಲ್ಲ. ಕಳೆದ ಎರಡು ದಶಕಗಳಿಂದ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ಮಾಡಿದ್ದೇನೆ. ಕೆಲವು ಮುಖಂಡರು ಕಾರ್ಯಕರ್ತರು ನನಗೆ ಸ್ಪರ್ಧೆ ಮಾಡಲು ಒತ್ತಾಯ ಮಾಡುತಿದ್ದಾರೆ. ಹೈಕಮಾಂಡ್ ಅವಕಾಶ ಕೊಟ್ಟರೆ ಸ್ಪರ್ಧೆ ಮಾಡುವುದು ಖಚಿತ ಎಂದು ಹೇಳಿದರು.