ವರದಿ : ಪರಮೇಶ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್ ಧಾರವಾಡ
ಧಾರವಾಡ (ಸೆ.29) : 2023 ರ ವಿಧಾನಸಭಾ ಚುಣಾವಣೆಗೆ ಇನ್ನೂ ಐದು ತಿಂಗಳು ಇರುವಾಗಲೇ ಧಾರವಾಡ ಗ್ರಾಮೀಣ ಕ್ಷೇತ್ರ ಪ್ರತಿಷ್ಠಿತ ಕಣವಾಗಿ ಪರಿಣಮಿಸಿದೆ. ಕಾಂಗ್ರೆಸ್ ಪಕ್ಷದಲ್ಲಿ ಒಂದು ಕಡೆ ವಿನಯ ಕುಲಕರ್ಣಿ ಮತ್ತು ಇಸ್ಮಾಯಿಲ್ ತಮಾಟಗಾರ ಇಬ್ಬರ ನಡುವೆ ಟಿಕೆಟ್ ಫೈಟ್ ನಡೆದಿದ್ರೆ,ಇತ್ತ ಕಡೆ ಶಾಸಕ ಅಮೃತ ದೇಸಾಯಿ ಮತ್ತು ತವನಪ್ಪ ಅಷ್ಟಗಿ ಮಧ್ಯೆ ಟಿಕೆಟ್ ಗಾಗಿ ಪೈಪೋಟಿ ನಡೆದಿದೆ ಎಂದು ಹೇಳಲಾಗುತ್ತಿದೆ.
ಧಾರವಾಡ: 4 ವರ್ಷದಿಂದ ಕರ್ತವ್ಯಕ್ಕೆ ಹಾಜರಾಗದ 3 ಪೋಲಿಸರು ವಜಾ: ಎಸ್ಪಿ ಜಗಲಾಸರ್
ಧಾರವಾಡ(Dharwad)ದಲ್ಲಿ ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಅದ್ಯಕ್ಷ ತವನಪ್ಪ ಅಷ್ಟಗಿ, ಸದ್ಯಕ್ಕೆ ನಾನು 2023 ರ ಬಿಜೆಪಿ(BJP) ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ನಾನು ಈ ಭಾರಿ ಟಿಕೆಟ್ ಕೇಳಿದ್ದೇನೆ. ನನಗೆ ಟಿಕೆಟ್ ಸಿಗುತ್ತೆ ಎಂಬ ಭರವಸೆಯಲ್ಲಿ ಇದ್ದೇನೆ. ಹೀಗಾಗಿ ನಾನೇ ಮುಂದಿನ ಶಾಸಕ ಆಗುತ್ತೇನೆ" ಎಂದು ಧಾರವಾಡದ ತಮ್ಮ ಕಚೇರಿಯಲ್ಲಿ ಭರವಸೆ ವ್ಯಕ್ತಪಡಿಸಿದ್ದಾರೆ.
ಹಾಲಿ ಶಾಸಕ ಅಮೃತ ದೇಸಾಯಿ(Amrit Desai) ಅವರು 2018 ರಲ್ಲಿ ಟಿಕೆಟ್ ಕೇಳಿದಾಗ ನಾನು ಕೇಳಿದ್ದೆ. ಆದರೆ ಪಕ್ಷ ಅವರಿಗೆ ಟಿಕೆಟ್ ನೀಡಿದೆ. ನಾನು ಅವರಿಗೆ ಸಪೋರ್ಟ್ ಮಾಡಿ ಅವರ ಪರವಾಗಿ ಕ್ಷೇತ್ರದಲ್ಲಿಒ ಕೆಲಸ ಮಾಡಿದ್ದೇನೆ. ಅವರ ಗೆಲುವಿಗೆ ನಾನು ಕಾರಣೀಭೂತನಾಗಿದ್ದೇನೆ. ಈ ಬಾರಿ ಅಂದ್ರೆ 2023 ರ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ನನಗೆ ಪಕ್ಷ ಟಿಕೆಟ್ ಕೊಟ್ಟರೆ ಅಮೃತ ದೇಸಾಯಿ ಅವರು ಈ ಹಿಂದೆ ನಾನು ಬೆಂಬಲಿಸಿದಂತೆ ಅವರು ನನ್ನನ್ನು ಬೆಂಬಲಿಸಲಿ ಎಂದು ಪರೋಕ್ಷವಾಗಿ ಶಾಸಕ ಅಮೃತ ದೇಸಾಯಿಗೆ ತಿರುಗೇಟು ಕೊಟ್ಟಿದ್ದಾರೆ.
ನಾನು ನನ್ನ ಕಾರ್ಯಕರ್ತರು ಅಮೃತ ದೇಸಾಯಿ ಗೆಲುವಿಗೆ ಮಹತ್ವದ ಪಾತ್ರವನ್ನು ವಹಿಸಿದ್ದೇವೆ. ಸರಕಾರ ನನಗೆ ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಸ್ಥಾನವನ್ನು ಕೊಟ್ಟಿದೆ. ಅದನ್ನು ನಾನು ಚೆನ್ನಾಗಿ ನಿಭಾಯಿಸಿಕ್ಕೊಂಡು ಹೋಗುತ್ತಿದ್ದೇನೆ ಎಂದು ಹೇಳಿದರು.
2018 ರಲ್ಲೇ ನನಗೆ ಮತ್ತು ಶಾಸಕ ಅಮೃತ ದೇಸಾಯಿಗೆ ಕೆಲವೊಂದಿಷ್ಟು ಕಮಿಟ್‌ಮೆಂಟ್ ಆಗಿವೆ. ಇವುಗಳನ್ನೆಲ್ಲ ಮಾಧ್ಯಮಗಳ ಮುಂದೆ ಹೇಳಲು ಆಗಲ್ಲ. ಅದಕ್ಕೆ ನಾನು ಎಲ್ಲವನ್ನು ಮುಂದಿನ ದಿನಗಳಲ್ಲಿ ಹೇಳುತ್ತೇನೆ ಎಂದು ಶಾಸಕ ಅಮೃತ ದೇಸಾಯಿಗೆ ಟಾಂಗ್ ಕೊಟ್ಟಿದ್ದಾರೆ.
ಕ್ಷೇತ್ರದಲ್ಲಿ ಸರ್ವೆ ಕೂಡಾ ನಡೀತಾ ಇದೆ. ಸರ್ವೆಯಲ್ಲಿ ಬರುವ ಹಾಗೆ ಕೆಲಸ ಮಾಡುವಂತೆ ನಾಯಕರು ಹೇಳಿದ್ದಾರೆ. ಅದೇ ರೀತಿಯಲ್ಲಿ ನಾನು ಕೆಲಸವನ್ನ ಮಾಡುತ್ತಿದ್ದೇನೆ. ಅದಕ್ಕೆ ನಾನು ಜನರ ಬಾಯಲ್ಲಿ ಇದ್ದೇನೆ. ನನಗೂ ಜನರು ಆಶೀರ್ವಾದ ಮಾಡುತ್ತಾರೆ. ನಾನು ಈ ಬಾರಿ ಶಾಸಕನಾಗುತ್ತೇನೆ ಎಂದು ಹೇಳಿದರು.
ಧಾರವಾಡ: ಶಾಸಕ ದೇಸಾಯಿ ಮನವೊಲಿಕೆ ಯಶಸ್ಸು, ಧ್ವಜಾರೋಹಣಕ್ಕೆ ಗ್ರಾಮಸ್ಥರ ಒಪ್ಪಿಗೆ..!
ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ ಅಮೃತ ದೇಸಾಯಿ ಅವರು, 'ಸರ್ವೇಯಲ್ಲಿ ನನ್ನ ಹೆಸರು ಬಂದ್ರೆ ನನಗೆ ಸಪೋರ್ಟ್ ಮಾಡಿ' ಎಂದು ಹೇಳಿದ್ದಾರೆ, ಇನ್ನು ನಿಮ್ಮ ಪರವಾಗಿ ಸರ್ವೇಯಾದ್ರೆ ನಿಮ್ಮನ್ನು ಪ್ರಚಾರ ಮಾಡೋಣ ಎಂದಿದ್ದಾರೆ ಎಂದು ತವನಪ್ಪ ಅಷ್ಟಗಿ ಹೇಳಿದ್ದಾರೆ. ಒಟ್ಟಿನಲ್ಲಿ ಈ ಬಾರಿ ಧಾರವಾಡ ಹಾಲಿ ಶಾಸಕರಿಗೆ ತಪ್ಪುತ್ತಾ ಬಿಜೆಪಿ ಟಿಕೆಟ್ ಅನ್ನುವ ಪ್ರಶ್ನೆಗಳು ಹುಟ್ಟಿಕೊಂಡಿವೆ.