ಸರ್ಕಾರ ಅವರದೇ ಇದೆ. ಮತ್ತೇಕೆ ಕಾಂಗ್ರೆಸ್‌ನವರು ನನ್ನ ಹೇಳಿಕೆ ವಿರುದ್ಧ ಪ್ರತಿಭಟಿಸಬೇಕು. ಮೊನ್ನೆಯಷ್ಟೇ ಬಿಜೆಪಿಗರ ಮೇಲೆ ಎಫ್ ಐಆರ್‌ದಾಖಲಿಸಿದ್ದಾರೆ. ಹಿಂದೂಗಳನ್ನು ವಿನಾಕಾರಣ ಬಂಧಿಸುವ ಮೂಲಕ ಇಂತಹ ಆಡಳಿತ ನಡೆಸುತ್ತಿದೆ. ಹೀಗಾಗಿ ಇದು ಐಸಿಸ್ ಸರ್ಕಾರ ಎಂದು ಕಿಡಿಕಾರಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ಹುಬ್ಬಳ್ಳಿ(ಜ.10): ರಾಜ್ಯ ಸರ್ಕಾರ ಐಸಿಸ್ ಆಡಳಿತ ನಡೆಸುತ್ತಿದೆ ಎನ್ನುವ ನನ್ನ ಹೇಳಿಕೆಗೆ ಈಗಲೂ ಬದ್ಧ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿ, ಸರ್ಕಾರ ಅವರದೇ ಇದೆ. ಮತ್ತೇಕೆ ಕಾಂಗ್ರೆಸ್‌ನವರು ನನ್ನ ಹೇಳಿಕೆ ವಿರುದ್ಧ ಪ್ರತಿಭಟಿಸಬೇಕು. ಮೊನ್ನೆಯಷ್ಟೇ ಬಿಜೆಪಿಗರ ಮೇಲೆ ಎಫ್ ಐಆರ್‌ದಾಖಲಿಸಿದ್ದಾರೆ. ಹಿಂದೂಗಳನ್ನು ವಿನಾಕಾರಣ ಬಂಧಿಸುವ ಮೂಲಕ ಇಂತಹ ಆಡಳಿತ ನಡೆಸುತ್ತಿದೆ. ಹೀಗಾಗಿ ಇದು ಐಸಿಸ್ ಸರ್ಕಾರ ಎಂದು ಕಿಡಿಕಾರಿದರು.
ಪ್ರಲ್ಹಾದ್ ಜೋಶಿಗೆ ಸರಿಸಾಟಿ ‘ಕೈ’ ಅಭ್ಯರ್ಥಿ ಯಾರು?: ಲಾಡ್, ಶೆಟ್ಟರ್ ಹೆಸರು ಮುಂಚೂಣಿಗೆ
ಸಿದ್ದುರಿಂದ ದ್ವೇಷ ರಾಜಕಾರಣ, ಐಸಿಸ್ ಸರ್ಕಾರ ಮಾಡಲು ಹೊರಟ್ಟಿದ್ದಾರೆ:
ಹುಬ್ಬಳ್ಳಿ/ವಿಜಯಪುರ: ದೇಶ, ರಾಜ್ಯದಲ್ಲೂ ರಾಮ ಮಂದಿರ ಉದ್ಘಾಟನೆಗೆ ಹೋಗಬೇಕೋ ಬೇಡವೋ ಎಂಬ ಕನ್‌ಫ್ಯೂಸನ್‌ನಲ್ಲಿ ಕಾಂಗ್ರೆಸ್‌ನವರಿದ್ದಾರೆ. ಕಾಂಗ್ರೆಸ್‌ಗೆ ರಾಮಮಂದಿರ ಬೇಕಿರಲಿಲ್ಲ, ರಾಮಮಂದಿರ ನಿರ್ಮಾಣದ ಕಲ್ಪನೆಯೂ ಅವರಿಗಿರಲಿಲ್ಲ. ಈಗ ಹೊಟ್ಟೆಕಿಚ್ಚಿನಿಂದ ರಾಮಮಂದಿರದ ಹಳೆಯ ಕೇಸ್ ತೆಗೆದು ಹೋರಾಟಗಾರರನ್ನು ಅರೆಸ್ಟ್ ಮಾಡಿಸಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆಕ್ರೋಶ ವ್ಯಕ್ತಪಡಿಸಿದ್ದರು.
ಹಿಂದೂಗಳನ್ನು ಹತ್ತಿಕ್ಕುವ ಮೂಲಕ ಕಾಂಗ್ರೆಸ್‌ನಿಂದ ರಾಜಕೀಯ: ಪ್ರಲ್ಹಾದ್ ಜೋಶಿ
ಜ.2 ರಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು, ರಾಜ್ಯದಲ್ಲಿ ಇಸ್ಲಾಮಿಕ್, ಐಸಿಸ್, ಮೊಘಲ್ ಸರ್ಕಾರ ಮಾಡಲು ಸಿದ್ದರಾಮಯ್ಯ ಹೊರಟಿದ್ದಾರೆ. ಇದು ಸಿದ್ದರಾಮಯ್ಯನವರ ಹಿಂದೂ ದ್ವೇಷದ, ಮುಸ್ಲಿಂ ತುಷ್ಟೀಕರಣದ ಪರಾಕಾಷ್ಠೆ ಎಂದು ಹರಿಹಾಯ್ದಿದ್ದರು.
31 ವರ್ಷಗಳ ಹಿಂದಿನ ಪ್ರಕರಣವನ್ನು ಈಗ ಪುನಃ ಕೆದಕಿ ಶ್ರೀರಾಮ ಭಕ್ತರನ್ನು ಬಂಧಿಸುವ ಮೂಲಕ ರಾಜ್ಯ ಸರ್ಕಾರ ತನ್ನ ನೀಚತನ ತೋರಿಸುತ್ತಿದೆ. ಒಂದು ಕಡೆ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ಮೇಲೆ ಕಲ್ಲೆಸೆದ ದೇಶದ್ರೋಹಿಗಳ ಬಿಡುಗಡೆಗೆ ಪತ್ರ ಬರೆಯುತ್ತಾರೆ. ಕೆ.ಜೆ.ಹಳ್ಳಿ, ಡಿ.ಜೆ.ಹಳ್ಳಿ, ಪಿಎಫ್‌ಐ ಪ್ರಕರಣವನ್ನು ಹಿಂಪಡೆಯುತ್ತಾರೆ ಎಂದು ಟೀಕಿಸಿದ್ದರು.