ಶೋಷಿತ ಸಮುದಾಯದ ಏಳಿಗೆಗೆ ಕಟಿಬದ್ಧ: ಸಚಿವ ಎಚ್.ಸಿ.ಮಹದೇವಪ್ಪ

By Kannadaprabha News  |  First Published Mar 17, 2024, 8:03 AM IST

ಶತಮಾನಗಳಿಂದ ಸಮಾಜದಲ್ಲಿ ತುಳಿತಕ್ಕೊಳಗಾದವರು ಹಾಗೂ ಶೋಷಿತ ಸಮುದಾಯಗಳ ಏಳಿಗೆಗೆ ಶ್ರಮಿಸುವ ತುಡಿತ ನನ್ನಲ್ಲಿ ಅಚಲವಾಗಿದೆ ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ತಿಳಿಸಿದರು. 


ಮೈಸೂರು (ಮಾ.17): ಶತಮಾನಗಳಿಂದ ಸಮಾಜದಲ್ಲಿ ತುಳಿತಕ್ಕೊಳಗಾದವರು ಹಾಗೂ ಶೋಷಿತ ಸಮುದಾಯಗಳ ಏಳಿಗೆಗೆ ಶ್ರಮಿಸುವ ತುಡಿತ ನನ್ನಲ್ಲಿ ಅಚಲವಾಗಿದೆ ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ತಿಳಿಸಿದರು. ನಗರದ ಅಶೋಕಪುರಂ ಡಾ.ಬಿ.ಆರ್. ಅಂಬೇಡ್ಕರ್ ಉದ್ಯಾನವನದಲ್ಲಿ ಶನಿವಾರ 10 ಕೋಟಿ ರೂ. ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ರಾಜಕೀಯ ಮತ್ತು ಮತಬ್ಯಾಂಕ್ ದೃಷ್ಟಿಯಲ್ಲಿ ನಾನು ಯಾವುದೇ ಅಭಿವೃದ್ಧಿ ಕೆಲಸ ಮಾಡುವುದಿಲ್ಲ ಎಂದರು.

ಅಶೋಕಪುರಂ ಎಂದರೆ ಎಲ್ಲಾ ದಲಿತರಿಗೆ ವಿಶೇಷ ಆಸಕ್ತಿ ಮತ್ತು ನಂಬಿಕೆ. ಯಾಕೆಂದರೆ ಇಡೀ ಜಿಲ್ಲೆಗೆ ರಕ್ಷಾ ಕವಚವಾಗಿದೆ. ಜಾತಿ ವ್ಯವಸ್ಥೆಯಲ್ಲಿ ಜನರು ತೊಂದರೆ ಅನುಭವಿಸಿದರೆ ಧಾವಿಸುತ್ತಾರೆ. ಅಸಂಖ್ಯಾತ ಯುವಕರು ಇಲ್ಲಿ ವಿದ್ಯಾವಂತರಿದ್ದಾರೆ. ನನಗೂ ಆಶೋಕಪುರಂ ಹಾಗೂ ಗಾಂಧಿನಗರ ಎಂದರೆ ವಿಶ್ವಾಸವಿದೆ. ಬಸವಲಿಂಗಪ್ಪ, ಬಿ. ರಾಚಯ್ಯ, ನಮ್ಮ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಇಲ್ಲಿಯವರೇ ಆದ ವಿ‌. ಶ್ರೀನಿವಾಸಪ್ರಸಾದ್ ಅವರಿಗೂ ಅಚ್ಚುಮೆಚ್ಚಿನ ಸ್ಥಳವಾಗಿದೆ ಎಂದು ಅವರು ಹೇಳಿದರು.

Latest Videos

undefined

ಮೈಸೂರು ರಾಜವಂಶಸ್ಥ ಯದುವೀರ್‌ ರಾಜಕೀಯ ಪ್ರವೇಶ: ಈ ಹಿಂದೆಯೂ 4 ಬಾರಿ ಕಾಂಗ್ರೆಸ್‌ನಿಂದ ಗೆದ್ದಿದ್ದ ರಾಜವಂಶಸ್ಥರು

ಅಶೋಕಪುರಂನ ಜನರು ಸ್ವಾಭಿಮಾನದ ಬದುಕು ನಡೆಸಬೇಕು. ಜನರ ಜೀವನಮಟ್ಟ ಸುಧಾರಣೆ ಆಗಬೇಕು, ಯುವಕರಿಗೆ ಒಳ್ಳೆಯ ಭವಿಷ್ಯ ದೊರಕಬೇಕೆಂದು ನಿರಂತರವಾಗಿ ಚಿಂತನೆ ಮಾಡುತ್ತೇನೆ. ಆದರೆ, ನಮ್ಮ ಆಸಕ್ತಿಗೆ ತಕ್ಕಂತೆ ಇಲ್ಲಿ ಅಭಿವೃದ್ಧಿಯಾಗಲಿಲ್ಲ. ನಿರೀಕ್ಷಿತ ಮಟ್ಟದಲ್ಲಿ ಜೀವನ ಉತ್ತಂಗಕೇರಿ ಗುಣಮಟ್ಟದ ಬೆಳವಣಿಗೆ ಸಾಧ್ಯವಾಗಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ನಮ್ಮ ಅವಧಿಯಲ್ಲಿ ಮೈಸೂರಿನ ಹೃದಯ ಭಾಗದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಭವನ ನಿರ್ಮಾಣ ಅನೇಕ ಒತ್ತಾಯಗಳಿಂದ ಪ್ರಾರಂಭಿಸಲಾಗಿತು. ಆದರೆ, ಹಣಕಾಸಿನ ತೊಂದರೆಯಿಂದ ಕಾಮಗಾರಿ ನೆನಗುದಿಗೆ ಬಿದ್ದಿತ್ತು. ಬಳಿಕ ಸಮುದಾಯದ ಪರ ಮಾತನಾಡುವ ನಾಯಕರು ಯಾರೂ ಕಾಮಗಾರಿ ಬಗ್ಗೆ ಗಮನಹರಿಸಲಿಲ್ಲ. ಆದರೆ, ನಮ್ಮ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ನಾನು ಸಚಿವನಾಗಿ ಕಾಮಗಾರಿಯನ್ನು ಮುಂದುವರೆಸಲು ಸಚಿವ ಸಂಪುಟದಲ್ಲಿಟ್ಟು, 19 ಕೋಟಿಯನ್ನು ಮಂಜೂರು ಮಾಡಿಸಿ, ಕಾಮಗಾರಿ ಪೂರ್ಣಗೊಳಿಸಲು ಕ್ರಮ ವಹಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು‌.

ರಾಜ್ಯದ ಜನರು ಪ್ರಧಾನಿ ಮೋದಿ ಪರ ನಿಲ್ಲಬೇಕು: ಎಚ್.ಡಿ.ರೇವಣ್ಣ

ಟಿ. ನರಸೀಪುರ ಕ್ಷೇತ್ರ ಕೆಡಿಪಿ ಸದಸ್ಯ ಸುನಿಲ್ ಬೋಸ್, ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ, ಮಾಜಿ ಮೇಯರ್ ಪುರುಷೋತ್ತಮ್, ಆದಿ ಕರ್ನಾಟಕ ಮಹಾಸಂಸ್ಥೆಯ ಅಧ್ಯಕ್ಷ ಸುನಿಲ್, ಉಪಾಧ್ಯಕ್ಷ ಶಿವಸ್ವಾಮಿ, ನಗರ ಪಾಲಿಕೆ ಮಾಜಿ ಸದಸ್ಯೆ ಪಲ್ಲವಿ ಬೇಗಂ, ಪ್ರೊ.ಪಿ.ವಿ. ನಂಜರಾಜ ಅರಸ್, ಮುಖಂಡರಾದ ಈಶ್ವರ್, ರೇವಣ್ಣ ಮೊದಲಾದವರು ಇದ್ದರು.

click me!